ಆಮಿರ್​ ಖಾನ್​​ಗೆ ವಿಶೇಷ ಪಾರ್ಟಿ ಕೊಟ್ಟ ನಾಗ ಚೈತನ್ಯ; ಸಮಂತಾ ಅಕ್ಕಿನೇನಿ ಮಿಸ್ಸಿಂಗ್​

ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ರಿಲೀಸ್​ ಆಗುವುದಕ್ಕೂ ಮುನ್ನ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಆಮಿರ್​ ಖಾನ್​ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಆಮಿರ್​ ಖಾನ್​​ಗೆ ವಿಶೇಷ ಪಾರ್ಟಿ ಕೊಟ್ಟ ನಾಗ ಚೈತನ್ಯ; ಸಮಂತಾ ಅಕ್ಕಿನೇನಿ ಮಿಸ್ಸಿಂಗ್​
ಆಮಿರ್​ ಖಾನ್​​ಗೆ ವಿಶೇಷ ಪಾರ್ಟಿ

ಸಮಂತಾ ಅಕ್ಕಿನೇನಿ ಕೌಟುಂಬಿಕ ವಿಚಾರದ ಬಗ್ಗೆ ಕೇಳಿ ಬರುತ್ತಿರುವ ಮಾಹಿತಿ ಒಂದೆರಡಲ್ಲ. ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ನೀಡಿದ್ದಾರೆ ಎಂಬುದನ್ನು ಪುಷ್ಟೀಕರಿಸುವ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಬ್ರೇಕ್​ ಹಾಕೋಕೆ ಅಕ್ಕಿನೇನಿ ಕುಟುಂಬ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ಇದೆಲ್ಲ ವ್ಯರ್ಥವಾಗುತ್ತಿದೆ. ಹೀಗಿರುವಾಗಲೇ ನಾಗ ಚೈತನ್ಯ ಕೊಟ್ಟ ಪಾರ್ಟಿ ಫೋಟೋ ವೈರಲ್​ ಆಗಿದೆ.

ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ರಿಲೀಸ್​ ಆಗುವುದಕ್ಕೂ ಮುನ್ನ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಆಮಿರ್​ ಖಾನ್​ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ನಾಗ ಚೈತನ್ಯ ಒಟ್ಟಿಗೆ ಅಭಿನಯಿಸಿದ್ದಾರೆ. ಆ ಸ್ನೇಹದ ಮೇರೆಗೆ ಆಮಿರ್​ ಖಾನ್​ ಅವರು ‘ಲವ್​ ಸ್ಟೋರಿ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ಬಂದಿದ್ದರು. ಆ ಕಾರ್ಯಕ್ರಮ ಮುಗಿದ ಬಳಿಕ ನಾಗಾರ್ಜುನ ಅವರ ಮನೆಯಲ್ಲಿ ಆಮಿರ್​ ಖಾನ್​ಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ನಾಗಾರ್ಜುನ, ನಾಗ ಚೈತನ್ಯ, ಆಮೀರ್​ ಖಾನ್​ ಒಟ್ಟಿಗೆ ಕುಳಿತು ಭೋಜನ ಸವಿದರು. ಈ ಫೋಟೋ ಈಗ ಸಾಕಷ್ಟು ವೈರಲ್​ ಆಗುತ್ತಿದೆ. ಅಚ್ಚರಿ ಎಂದರೆ, ಈ ಫೋಟೋದಲ್ಲಿ ಸಮಂತಾ ಕಾಣುತ್ತಿಲ್ಲ.

ಆಮಿರ್​ ಖಾನ್​ ದಕ್ಷಿಣ ಭಾರತದ ಸಿನಿಮಾಗೆ ಪ್ರಚಾರ ನೀಡುತ್ತಾರೆ ಎಂದರೆ ಅದು ನಿಜಕ್ಕೂ ದೊಡ್ಡವಿಚಾರ. ಈ ಕಾರಣಕ್ಕೆ ಅಕ್ಕಿನೇನಿ ಕುಟುಂಬದಲ್ಲಿ ವಿಶೇಷ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಕ್ಕಿನೇನಿ ಕುಟುಂಬದ ಬಹುತೇಕರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಸಮಂತಾ ಮಾತ್ರ ಈ ಫೋಟೋದಲ್ಲಿ ಇಲ್ಲ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

ಸದ್ಯ, ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಅಕ್ಕಿನೇನಿ ಮನೆಯಲ್ಲಿ ಆಮಿರ್​ ಊಟ ಸವಿದರು ಎಂಬುದಕ್ಕಿಂತ ಈ ಫೋಟದಲ್ಲಿ ಸಮಂತಾ ಇಲ್ಲ ಎನ್ನುವುದೇ ಹೆಚ್ಚು ಹೈಲೈಟ್​ ಆಗುತ್ತಿದೆ. ಅಲ್ಲದೆ, ವಿಚ್ಛೇದನ ವದಂತಿಗೆ ಇದು ಮತ್ತಷ್ಟು ಪುಷ್ಟಿ ನೀಡಿದೆ.

ಇದನ್ನೂ ಓದಿ: ಸಮಂತಾ-ನಾಗ ಚೈತನ್ಯ ಫ್ಯಾಮಿಲಿಯ ಇನ್ನೊಂದು ಗುಟ್ಟು ಬಯಲು; ಮಗನ ಸಿನಿಮಾಗೆ ನಾಗಾರ್ಜುನ ತಲೆ ಹಾಕುತ್ತಿಲ್ಲ

ಸಮಂತಾ-ನಾಗ ಚೈತನ್ಯ ವಿಚ್ಛೇದನ ವದಂತಿಗೆ ಬ್ರೇಕ್​ ಕೊಟ್ಟಿತು ಆ ಒಂದು ವಿಚಾರ

Read Full Article

Click on your DTH Provider to Add TV9 Kannada