AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ-ನಾಗ ಚೈತನ್ಯ ವಿಚ್ಛೇದನ ವದಂತಿಗೆ ಬ್ರೇಕ್​ ಕೊಟ್ಟಿತು ಆ ಒಂದು ವಿಚಾರ

ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಅಕ್ಕಿನೇನಿ ಸರ್​ನೇಮ್​ಅನ್ನು ಸಮಂತಾ ತೆಗೆದು ಹಾಕಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಅವರ ಸಂಸಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವ ವದಂತಿ ಜೋರಾಗಿತ್ತು.

ಸಮಂತಾ-ನಾಗ ಚೈತನ್ಯ ವಿಚ್ಛೇದನ ವದಂತಿಗೆ ಬ್ರೇಕ್​ ಕೊಟ್ಟಿತು ಆ ಒಂದು ವಿಚಾರ
ಸಮಂತಾ-ನಾಗ ಚೈತನ್ಯ ವಿಚ್ಛೇದನ ವದಂತಿಗೆ ಬ್ರೇಕ್​ ಕೊಟ್ಟಿತು ಆ ಒಂದು ವಿಚಾರ
TV9 Web
| Edited By: |

Updated on: Sep 25, 2021 | 5:03 PM

Share

ನಾಗ ಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ನಡುವೆ ಯಾವುದೂ ಸರಿ ಇಲ್ಲ, ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಇತ್ತೀಚೆಗೆ ಜೋರಾಗಿ ಹಬ್ಬಿತ್ತು. ಇದಕ್ಕೆ ಬ್ರೇಕ್​ ಹಾಕುವುದಕ್ಕೆ ಅವರ ಕುಟುಂಬದವರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಒಂದು ವಿಚಾರ ಎಲ್ಲ ಕಡೆಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವಿಷಯದಿಂದ ವಿಚ್ಛೇದನ ವಿಚಾರ ಹಿನ್ನೆಲೆಗೆ ಸರಿದಿದೆ. ಅಷ್ಟಕ್ಕೂ ಏನದು ವಿಚಾರ? ‘ಲವ್​ ಸ್ಟೋರಿ’ ಸಿನಿಮಾ ಕಲೆಕ್ಷನ್​.

ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಅಕ್ಕಿನೇನಿ ಸರ್​ನೇಮ್​ಅನ್ನು ಸಮಂತಾ ತೆಗೆದು ಹಾಕಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಅವರ ಸಂಸಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವ ವದಂತಿ ಜೋರಾಗಿತ್ತು. ಇದಾದ ನಂತರದಲ್ಲಿ ಸಾಕಷ್ಟು ಸುದ್ದಿಗಳು ಹುಟ್ಟಿಕೊಂಡಿವೆ. ಆ ಬಗ್ಗೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎನ್ನುವ ಬಗ್ಗೆ ಅಭಿಮಾನಿಗಳು ಇನ್ನೂ ಗೊಂದಲದಲ್ಲಿದ್ದಾರೆ. ಈಗ ಈ ಬಗೆಗಿನ ಸುದ್ದಿಗಳು ಏಕಾಏಕಿ ಕಡಿಮೆ ಆಗಿವೆ.

ಸೆಪ್ಟೆಂಬರ್ 24ರಂದು ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರ ರಿಲೀಸ್​ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಸಿನಿಮಾ ತಜ್ಞರ ಪ್ರಕಾರ ಮೊದಲ ದಿನ ಈ ಸಿನಿಮಾ ಬರೋಬ್ಬರಿ 9.6 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಕೊವಿಡ್​ ಎರಡನೇ ಅಲೆ ನಂತರದಲ್ಲಿ ಸಿನಿಮಾ ಒಂದು ಇಷ್ಟು ದೊಡ್ಡ ಕಲೆಕ್ಷನ್​ ಮಾಡಿದ್ದು ಇದೇ ಮೊದಲು.

ಇಂದು (ಸೆಪ್ಟೆಂಬರ್​ 25) ಶನಿವಾರ. ನಾಳೆ (ಸೆಪ್ಟೆಂಬರ್​ 26) ಭಾನುವಾರ. ವೀಕೆಂಡ್​ ಸಂದರ್ಭದಲ್ಲಿ ಸಿನಿಮಾಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ. ಹೀಗಾಗಿ, ಶನಿವಾರ ಮತ್ತು ಭಾನುವಾರ ಸಿನಿಮಾದ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇದೆ. ಈ ಎಲ್ಲಾ ಸುದ್ದಿಗಳಿಂದಾಗಿ ವಿಚ್ಛೇದನ ಸುದ್ದಿ ಕೊಂಚ ಮೂಲೆಗುಂಪಾಗಿದೆ. ಇನ್ನು, ‘ಲವ್​ ಸ್ಟೋರಿ’ ಸಿನಿಮಾ ಕಲೆಕ್ಷನ್​ ಉತ್ತಮವಾಗಿದ್ದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಬಜೆಟ್​ ಸಿನಿಮಾಗಳ ರಿಲೀಸ್​ಗೆ ಹೆಚ್ಚು ಸಹಕಾರಿಯಾಗಿದೆ.

ಇದನ್ನೂ ಓದಿ: ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

Samantha Akkineni: ಕೋರ್ಟ್​ ಮೆಟ್ಟಿಲೇರಲು ಮುಂದಾದ ಸಮಂತಾ ಅಕ್ಕಿನೇನಿ; ಕಾರಣವೇನು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್