ಮಡಿಕೇರಿ: ಉಂಗುರ ನುಂಗಿದ 8 ತಿಂಗಳ ಮಗು, ಉಂಗುರ ಹೊರತೆಗೆದರೂ ಪ್ರಾಣ ಉಳಿಯಲಿಲ್ಲ
ಆಟವಾಡುವಾಗ ಉಂಗುರ ನುಂಗಿ 8 ತಿಂಗಳ ಮಗು ಸಾವನ್ನಪ್ಪಿದ್ದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಗೋಡಿನಲ್ಲಿ ನಡೆದಿದೆ.
ಮಡಿಕೇರಿ: ಆಟವಾಡುವಾಗ ಉಂಗುರ ನುಂಗಿ 8 ತಿಂಗಳ ಮಗು ಸಾವನ್ನಪ್ಪಿದ್ದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಗೋಡಿನಲ್ಲಿ ನಡೆದಿದೆ. ಬುಧವಾರ ರಾತ್ರಿ ಮುನೀರ್ ಎಂಬುವವರಿಗೆ ಸೇರಿದ ಮಗು ಆಟವಾಡುವ ಸಮಯದಲ್ಲಿ ಆಕಸ್ಮಿಕವಾಗಿ ಉಂಗುರವನ್ನ ನುಂಗಿತ್ತು. ಕೂಡಲೇ ಮಗುವನ್ನ ಹತ್ತಿರದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಆದರೆ ಮಗುವಿಗೆ ತೀವ್ರ ಉಸಿರಾಟದ ತೊಂದರೆಯಿದ್ದರಿಂದ ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಉಂಗುರವನ್ನ ಹೊರತೆಗೆಯಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೇ ಗುರುವಾರ(ಮಾ.23) ಬೆಳಿಗಿನ ಜಾವ ಮಗು ಮೃತಪಟ್ಟಿದೆ ಎಂದು ತಿಳಿದಿದೆ.
ಹೋಟೆಲ್ ರೂಮ್‌ನಲ್ಲಿ ಇಬ್ಬರು ವ್ಯಕ್ತಿಗಳ ಶವ ಪತ್ತೆ
ವಿಜಯಪುರ: ನಗರದ ರಾಜಧಾನಿ ಹೋಟೆಲ್‌ನ ರೂಮಿನಲ್ಲಿ ಎರಡು ಶವಗಳು ಪತ್ತೆಯಾಗಿದೆ. ಬಳ್ಳಾರಿಯ ಸಿ. ಇಂದ್ರಕುಮಾರ ಎಂಬುವವರಾಗಿದ್ದಾರೆ ಹಾಗೂ ಮತ್ತೋರ್ವನ ಯಾರು ಎಂಬುದು ತಿಳಿದಿಲ್ಲ. ರಕ್ತದ ಮಡುವಿನಲ್ಲಿ ಶವಗಳು ಪತ್ತೆಯಾಗಿದ್ದು, ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನು ತಿಳಿದು ಬಂದಿಲ್ಲ. ಸಧ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ತನಿಖೆ ಬಳಿಕವೇ ಸಾವಿನ ಸತ್ಯ ತಿಳಿಯಬೇಕಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Fri, 24 March 23