ಮಡಿಕೇರಿ ಕೋವಿಡ್ ಆಸ್ಪತ್ರೆಯ ಮೊಬೈಲ್ ಕಳ್ಳ ಜಿಲ್ಲಾ ಪೊಲೀಸ್ ಬಲೆಗೆ

|

Updated on: May 25, 2021 | 2:05 PM

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಪೊಲೀಸರು ಕಳ್ಳನೊಬ್ಬನನ್ನು ಬಂಧಿಸಿದ್ದಾರೆ. ಮಡಿಕೇರಿ ಡಿಸಿಐಬಿ ಪೊಲೀಸರು ಸುಮಂತ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈತ ಹಲವು ಜನರ ಮೊಬೈಲ್ ಕದ್ದಿದ್ದ ಎಂದು ತಿಳಿದುಬಂದಿದೆ.

ಮಡಿಕೇರಿ ಕೋವಿಡ್ ಆಸ್ಪತ್ರೆಯ ಮೊಬೈಲ್ ಕಳ್ಳ ಜಿಲ್ಲಾ ಪೊಲೀಸ್ ಬಲೆಗೆ
ಮಡಿಕೇರಿ ಕೋವಿಡ್ ಆಸ್ಪತ್ರೆಯ ಮೊಬೈಲ್ ಕಳ್ಳ ಜಿಲ್ಲಾ ಪೊಲೀಸ್ ಬಲೆಗೆ
Follow us on

ಕೊಡಗು: ಯೋಧರ ತವರು ನಾಡು ಕೊಡಗಿನಲ್ಲಿ ಕೊರೊನಾ ಕಾಟದ ಮಧ್ಯೆ ಕೆಲವು ಅಮಾನವೀಯ ಪ್ರಕರಣಗಳು ನಡೆದು, ನಾಗರಿಕ ಸಮಾಜ ವ್ಯಥೆ ಪಟ್ಟಿತ್ತು. ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕರೊಬ್ಬರಿಗೆ ಸೇರಿದ ಮೊಬೈ್​ ಸೇರಿದಂತೆ ಕೆಲ ವಸ್ತುಗಳನ್ನು ಕಳ್ಳರು ಲಪಟಾಯಿಸಿದ್ದರು. ಅದಕ್ಕೂ ಮುನ್ನ, ಬಾಲಕಿಯೊಬ್ಬಳು ಕೊರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡು ವ್ಯಥೆಪಡುತ್ತಿದ್ದಾಗ ಆ ಮಹಾತಾಯಿ ಬಳಸುತ್ತಿದ್ದ ಮೊಬೈಲ್​ ಅನ್ನೇ ಮಡಿಕೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯಲ್ಲಿ ಕಳ್ಳರು ಎಗರಿಸಿದ್ದರು. ಇದೀಗ ಈ ಪ್ರಕರಣಗಳಿಗೆ ತಳುಕು ಹಾಕಿಕೊಳ್ಳುವಂತೆ ಕಳ್ಳನೊಬ್ಬನ ಬಂಧನವಾಗಿದೆ.

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಪೊಲೀಸರು ಕಳ್ಳನೊಬ್ಬನನ್ನು ಬಂಧಿಸಿದ್ದಾರೆ. ಮಡಿಕೇರಿ ಡಿಸಿಐಬಿ ಪೊಲೀಸರು ಸುಮಂತ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈತ ಹಲವು ಜನರ ಮೊಬೈಲ್ ಕದ್ದಿದ್ದ ಎಂದು ತಿಳಿದುಬಂದಿದೆ.

ಸೋಮವಾರಪೇಟೆ ಬಿಜೆಪಿ ನಾಯಕಿ ಉಷಾ ತೇಜಸ್ವಿ ಎಂಬುವವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 4 ರಂದು ಮೊಬೈಲ್ ಕಳೆದುಕೊಂಡಿದ್ದರು. ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಆರೋಪಿ ಸುಮಂತ್ ಸಿಕ್ಕಿಬಿದ್ದಿದ್ದಾನೆ. ಈತ ಮೊಬೈಲ್‌ ಕದ್ದು, ಬೇರೆ ಮೊಬೈಲ್‌ ನಲ್ಲಿ ಬಳಸ್ತಾ ಇದ್ದ ಎಂದು ತಿಳಿದುಬಂದಿದೆ. ಈತನ ಬಳಿ ಮತ್ತಷ್ಟು ಕದ್ದ ಮೊಬೈಲ್ ಗಳಿರೋ ಸಾಧ್ಯತೆಯಿದೆ. ಹಾಗಾಗಿ, ಡಿಸಿಐಬಿ ಪೊಲೀಸ ಆತನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!

(madikeri covid hospital mobile thief sumanth arrested by kodagu dcib)

Published On - 2:03 pm, Tue, 25 May 21