ಗುಡ್ಡದ ಮೇಲೆ ತಲೆಯೆತ್ತಿರುವ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯ ಬುನಾದಿ ಕುಸಿಯುತ್ತಿದೆ! ಅಸಲಿಗೆ ಅಂದಿನ ಬಿಜೆಪಿ ಸರ್ಕಾರ 7 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದಾದರೂ ಯಾಕೆ?

madikeri dc office: ಕೊಡಗಿನಲ್ಲಿ ಈ ವರ್ಷ ಇನ್ನಷ್ಟೆ ಮಳೆಗಾಲ ಆರಂಭವಾಗಬೇಕಿದೆ. ಹಾಗಾಗಿ ಯಾವಾಗ ಏನೇನು ಅನಾಹುತವಾಗುತ್ತೋ ಅಂತ ಕೊಡಗಿನ ನಾಗರಿಕರು ಟೆನ್ಶನ್ ನಲ್ಲಿ ಇದ್ದಾರೆ. ಆದ್ರೆ ಜಿಲ್ಲಾಡಳಿತ, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ಯಾವುದೇ ಟೆನ್ಶ್ಯನ್ ಇದ್ದಂತಿಲ್ಲ.

ಗುಡ್ಡದ ಮೇಲೆ ತಲೆಯೆತ್ತಿರುವ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯ ಬುನಾದಿ ಕುಸಿಯುತ್ತಿದೆ! ಅಸಲಿಗೆ ಅಂದಿನ ಬಿಜೆಪಿ ಸರ್ಕಾರ 7 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದಾದರೂ ಯಾಕೆ?
ಗುಡ್ಡದ ಮೇಲೆ ತಲೆಯೆತ್ತಿರುವ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯ ಬುನಾದಿ ಕುಸಿಯುತ್ತಿದೆ!
Follow us
ಸಾಧು ಶ್ರೀನಾಥ್​
|

Updated on: May 17, 2023 | 12:09 PM

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಿಗೇ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಲವು ಯೋಜನೆಗಳ ಬಗ್ಗೆ ಅಪಸ್ವರ ಎದ್ದಿದ್ದು ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ. ಮಡಿಕೇರಿಯ ಹಲವು ನೆರೆ ಪರಿಹಾರ ಯೋಜನೆಗಳಲ್ಲಿ ಅಕ್ರಮದ ಆರೋಪ ಕೇಳಿ ಬಂದಿದ್ದು ತನಿಖೆಗೆ ಒತ್ತಾಯ ಕೇಳಿ ಬಂದಿದೆ. ಅದರಲ್ಲಿ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಬಗ್ಗೆಯೂ ತೀವ್ರ ಅಪಸ್ವರ ಕೇಳಿ ಬಂದಿದೆ.

ಸುತ್ತಲೂ ಬೆಟ್ಟ ಗುಡ್ಡಗಳಿಂದ ಕೂಡಿರೋ ಹಚ್ಚ ಹಸಿರಿನ ರಾಶಿ… ಅದರ ಮಧ್ಯೆ ವಿರಾಜಮಾನವಾಗಿರೋ ಭವ್ಯ ಕಟ್ಟಡ. ಇದು ಕೊಡಗು ಜಿಲ್ಲಾಧಿಕಾರಿ ಕಚೇರಿಯ ವೈಭವ… ಕೊಡಗು ಜಿಲ್ಲಾಧಿಕಾರಿ ಕಚೇರಿ ಕಳೆದ ಆರು ವರ್ಷಗಳ ಹಿಂದೆ ಉದ್ಘಾಟನೆಯಾಗಿತ್ತು. ಮಡಿಕೇರಿಯ ಬೆಟ್ಟದ ಮೇಲೆ ಈ ಕಟ್ಟಡವಿದೆ. ಸುಮಾರು ಐದು ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಆದ್ರೆ ಈಗ ಅದೇ ಕಟ್ಟಡವನ್ನ ಉಳಿಸಿಕೊಳ್ಳೋಕೆ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಈ ಕಟ್ಟಡವನ್ನು ಉಳಿಸಿಕೊಳ್ಳೇಕೆ ಜಿಲ್ಲಾಡಳಿತ ಈಗಾಗಲೇ 7 ಕೋಟಿ ರೂ ಖರ್ಚು ಮಾಡಿದೆ.

ಯಾಕಂದ್ರೆ ಈ ಕಟ್ಟಡದ ಬುಡವೇ ಅಲ್ಲಾಡುತ್ತಿದೆ. ಕಟ್ಟಡದ ಬುಡ ಕುಸಿಯುತ್ತಿದೆ. ಕೊಡಗಿನ ಬೆಟ್ಟ ಗುಡ್ಡಗಳ ಮೇಲೆ ಇಷ್ಟೊಂದು ದೊಡ್ಡ ಕಟ್ಟಡದ ಅಗತ್ಯವಿತ್ತಾ ಅಂತಾ ಆ ದಿನಗಳಲ್ಲೇ ಜನರು ವಿರೋಧ ಮಾಡಿದ್ದರು. ಆದ್ರೆ ಅಧಿಕಾರಿಗಳು ಅದನ್ನ ತಲೆಗೆ ಹಾಕಿಕೊಳ್ಳದೇ ಕಟ್ಟಡ ನಿರ್ಮಾಣ ಮಾಡಿದ್ರು. ಆದ್ರೆ ಇದೀಗ ಅದೇ ಕಟ್ಟಡವನ್ನ ಉಳಿಸಿಕೊಳ್ಳೇಕೆ ಅಧಿಕಾರಿಗಳು ಪರದಾಡ್ತಾ ಇದ್ದಾರೆ. ನಮ್ಮ ತೆರಿಗೆ ಹಣವನ್ನ ಅಧಿಕಾರಿಗಳು ಪೋಲು ಮಾಡ್ತಾ ಇದ್ದಾರೆ ಅಂತ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐದು ತಿಂಗಳ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಂದಿನ ಡಿಸಿ ಚಾರುಲತಾ ಸೋಮಲ್, ಈ ಡಿಸೆಂಬರ್ ಒಳಗೆ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳಲಿದೆ ಅಂತ ಹೇಳಿದ್ದರು. ಆದ್ರೆ ಈಗಾಗಲೇ ನವೆಂಬರ್ ಮುಗಿಯುತ್ತಾ ಬಂತು. ಕಾಮಗಾರಿ ಮಾತ್ರ ಶೇಕಡಾ 50 ರಷ್ಟು ಕೂಡ ಸಂಪೂರ್ಣವಾಗಿಲ್ಲ. ಸದ್ಯಕ್ಕೆ ಸಂಪೂರ್ಣವಾಗುವ ಲಕ್ಷಣವೂ ಕಾಣುತ್ತಿಲ್ಲ. ಬಹುಶಃ ಕಾಮಗಾರಿ ವಿಳಂಬ ಆದಷ್ಟೂ ಯೋಜನೆಯ ಹಣ ಬಕಾಸುರರ ಹೊಟ್ಟೆ ಸೇರುತ್ತಿದೆಯಾ ಅಂತ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.

ಕೊಡಗಿನಲ್ಲಿ ಈ ವರ್ಷ ಇನ್ನಷ್ಟೆ ಮಳೆಗಾಲ ಆರಂಭವಾಗಬೇಕಿದೆ. ಹಾಗಾಗಿ ಯಾವಾಗ ಏನೇನು ಅನಾಹುತವಾಗುತ್ತೋ ಅಂತ ಕೊಡಗಿನ ನಾಗರಿಕರು ಟೆನ್ಶನ್ ನಲ್ಲಿ ಇದ್ದಾರೆ. ಆದ್ರೆ ಜಿಲ್ಲಾಡಳಿತ, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ಯಾವುದೇ ಟೆನ್ಶ್ಯನ್ ಇದ್ದಂತಿಲ್ಲ. ಜನರ ತೆರಿಗೆ ಹಣವನ್ನ ಹೀಗೆಲ್ಲಾ ಪೋಲು ಮಾಡುತ್ತಿದ್ದಾರಲ್ಲಾ ಅಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ9, ಕೊಡಗು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ