ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಮೃತ್ಯು; ಹೊಳೆಗೆ ಜಾರಿಬಿದ್ದು ದುರ್ಘಟನೆ

ವರ್ಷದ ಹಿಂದೆ ಅನಾರೋಗ್ಯದಿಂದ ಪತಿ ಮೃತಪಟ್ಟಿದ್ದರು. ಇದೀಗ ದನಗಳಿಗೆ ನೀರು ಕುಡಿಸುವ ಸಂದರ್ಭ ತಾಯಿ ಹಾಗೂ ಮಗ ಕೂಡ ಮರಣಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಮೃತ್ಯು; ಹೊಳೆಗೆ ಜಾರಿಬಿದ್ದು ದುರ್ಘಟನೆ
ಪ್ರಾತಿನಿಧಿಕ ಚಿತ್ರ
Edited By:

Updated on: Oct 31, 2021 | 3:27 PM

ಮಡಿಕೇರಿ: ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಸಾವನ್ನಪ್ಪಿದ ದುರ್ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿ ನಡೆದಿದೆ. ಶ್ರೀಮಂಗಲ ಬಳಿ ಹೊಳೆಗೆ ಕಾಲು ಜಾರಿಬಿದ್ದು ದುರ್ಘಟನೆ ಸಂಭವಿಸಿದೆ. ತಾಯಿ ರೇವತಿ (32) ಹಾಗೂ ಮಗ ಕಾರ್ಯಪ್ಪ (12) ಮೃತಪಟ್ಟಿದ್ದಾರೆ. ವರ್ಷದ ಹಿಂದೆ ಅನಾರೋಗ್ಯದಿಂದ ಪತಿ ಮೃತಪಟ್ಟಿದ್ದರು. ಇದೀಗ ದನಗಳಿಗೆ ನೀರು ಕುಡಿಸುವ ಸಂದರ್ಭ ತಾಯಿ ಹಾಗೂ ಮಗ ಕೂಡ ಮರಣಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಚಿಕ್ಕಬಳ್ಳಾಪುರ: ಅಪರಿಚಿತನನ್ನು ಕೊಂದು ಶವಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
ದುಷ್ಕರ್ಮಿಗಳು ಅಪರಿಚಿತನನ್ನು ಕೊಂದು ಶವಕ್ಕೆ ಬೆಂಕಿಯಿಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ ದೇಗುಲದ ಬಳಿ ನಡೆದಿದೆ. ಸುಂಕಲಮ್ಮ ದೇವಸ್ಥಾನದ ಬಳಿ ಖಾಲಿ ಲೇಔಟ್​ನಲ್ಲಿ ದುಷ್ಕೃತ್ಯ ಸಂಭವಿಸಿದೆ. ಸ್ಥಳಕ್ಕೆ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೆರೆಗೆ ಬಿದ್ದ ಬಾಲಕನ ರಕ್ಷಣೆಗೆ ಹೋದ ಯುವಕ ನೀರುಪಾಲು
ಕೆರೆಗೆ ಬಿದ್ದ ಬಾಲಕನ ರಕ್ಷಣೆಗೆ ಹೋದ ಯುವಕ ನೀರುಪಾಲು ಆದ ದುರ್ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ಬಾಲಕ, ಯುವಕ ಕೆರೆಪಾಲು ಆಗಿದ್ದಾರೆ. ಕಾರ್ತಿಕ್ ಬಡಿಗೇರ (8), ಕಾಂತೇಶ್ ಬಡಿಗೇರ (25) ಮೃತ ದುರ್ದೈವಿಗಳು. ಕಾಂತೇಶ್, ಗೋಕಾಕ್​ ತಾಲೂಕಿನ ಕೊಣ್ಣೂರಿನ ನಿವಾಸಿ ಆಗಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime: ಬೀರೂರಿನಲ್ಲಿ ತಂದೆಯಿಂದ ಮಗಳ ಕೊಲೆ, ಶ್ರೀನಿವಾಸಪುರದಲ್ಲಿ ಅಪಘಾತ, ಚಡಚಣದಲ್ಲಿ ಕಬ್ಬಿನಗದ್ದೆಗೆ ಬೆಂಕಿ

ಇದನ್ನೂ ಓದಿ: Crime News ಉದ್ಯಮಿ ಶ್ರೀನಿವಾಸನಾಯ್ಡು‌ ಕಾರು ಸುಟ್ಟ ಪ್ರಕರಣ: ಸದಾಶಿವನಗರ ಪೊಲೀಸರಿಂದ ಐವರು ಆರೋಪಿಗಳ ಬಂಧನ

Published On - 3:23 pm, Sun, 31 October 21