AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid variant: ಕೊಡಗು ಜಿಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಈ ಕ್ರಮಗಳನ್ನು ಅನುಸರಿಬೇಕು

ಕೊರೊನಾ ರೂಪಾಂತರ ತಳಿ ಉಲ್ಬಣಗೊಂಡ ಹಿನ್ನೆಲೆ ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯಗೊಳಿಸಿ ಡಿಹೆಚ್​ಓ ಡಾ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

Covid variant: ಕೊಡಗು ಜಿಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಈ ಕ್ರಮಗಳನ್ನು ಅನುಸರಿಬೇಕು
ಕೊಡಗು ಡಿಹೆಚ್​ಓ ಡಾ. ವೆಂಕಟೇಶ್
TV9 Web
| Updated By: ವಿವೇಕ ಬಿರಾದಾರ|

Updated on:Dec 24, 2022 | 3:29 PM

Share

ಮಡಿಕೇರಿ: ವಿಶ್ವದ ಹಲವೆಡೆ ಕೊರೊನಾ ರೂಪಾಂತರ ತಳಿ ಉಲ್ಬಣಗೊಂಡ ಹಿನ್ನೆಲೆ ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮಾಸ್ಕ್ (Mask), ಸ್ಯಾನಿಟೈಸೇಶನ್​(Sanitize), ದೈಹಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಆದರೆ ಪ್ರವಾಸಿಗರ ನಿಯಂತ್ರಣಕ್ಕೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ಹಾಗೂ ಗಡಿಯಲ್ಲಿ ತಪಾಸಣೆಗೆ ಸೂಚನೆ ಬಂದಿಲ್ಲ ಎಂದು ಕೊಡಗು (Kodagu) ಜಿಲ್ಲಾ ವೈದ್ಯಾಧಿಕಾರಿ (DHO) ಡಾ. ವೆಂಕಟೇಶ್ ಹೇಳಿದ್ದಾರೆ.

ಹೋಂಸ್ಟೇ, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳಲ್ಲಿ ಗರಿಷ್ಟ ಮುನ್ನೆಚ್ಚರಿಕೆಗೆ ಸೂಚಿಲಸಾಗಿದೆ. ಕೊರೊನಾ ನಿಯಮಗಳ ಪಾಲನೆಗೆ ಪ್ರವಾಸೋದ್ಯಮಿಗಳಿಗೆ ಸೂಚಿಸಿದ್ದೇವೆ ಎಂದರು.

ಕೊರೊನಾ ಹಾಟ್ ಸ್ಪಾಟ್ ಆಗುತ್ತಾ? ಕೆಎಸ್​ಆರ್​

ಬೆಂಗಳೂರು: ಕಳೆದ ಎರಡೂ ಅಲ್ಲೆಯಲ್ಲೂ ಕ್ರಾಂತಿವೀರ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಕೊರೊನಾ ಹಾಟ್ ಸ್ಪಾಟ್ ಆಗಿತ್ತು. ಈ ಬಾರಿಯೂ ಮತ್ತೆ ಕೊರೊನಾ ಹಾಟ್ ಸ್ಪಾಟ್ ಆಗುವ ಆತಂಕ ಶುರುವಾಗಿದೆ. ಕಾರಣ ಈ ರೈಲು ನಿಲ್ದಾಣದಲ್ಲಿ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಆದರೆ ಇಲ್ಲಿ ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ನಿಯಮ ಪಾಲಿಸುತ್ತಿಲ್ಲ.

ಇದನ್ನೂ ಓದಿ: ಚೀನಾ ಸೇರಿ 5 ದೇಶಗಳ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಪರೀಕ್ಷೆ ಕಡ್ಡಾಯ

ರಾಜ್ಯ ಸರ್ಕಾರದ ಎಲ್ಲಾ ರೂಲ್ಸ್ ಫಾಲೋ ಮಾಡಲು ನಾವು ರೆಡಿ. ನಮ್ಮ ಹೋಟೆಲ್​ನ ಎಲ್ಲ ಸಿಬ್ಬಂದಿಗಳಿಗೂ ಎರಡು ಡೋಸ್ ವ್ಯಾಕ್ಸಿನೇಷನ್‌ ಆಗಿದೆ. ಬೂಸ್ಟರ್ ಡೋಸ್ ಕೆಲವರಿಗೆ ಮಾತ್ರ ಬಾಕಿ ಇದೆ ಎಂದು ನಿಸರ್ಗ ಹೋಟೆಲ್ ಮ್ಯಾನೇಜರ್ ಹೇಳಿದ್ದಾರೆ.

ಮತ್ತೆ ಕೊರೊನಾ ಅಂದರೆ ತುಂಬಾ ಕಷ್ಟ ಆಗುತ್ತದೆ ನಮಗೆ. ಎರಡು ಮತ್ತು ಮೂರನೆ ಅಲೆಯಲ್ಲಿ ತುಂಬಾ ಸಂಕಷ್ಟ ಅನುಭವಿಸಿದ್ದೀವಿ. ಈಗ ಮತ್ತೆ ಕೊರೊನಾ ಅಂತಿದ್ದಾರೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ನಾವು ಎಲ್ಲದಕ್ಕೂ ರೆಡಿ ಇದ್ದೀವಿ, ಈಗಾಗಲೇ ಕೊರೊನಾ ರೂಲ್ಸ್ ಫಾಲೋ ಮಾಡುತ್ತಿದ್ದೇವೆ. ಎಲ್ಲ ಟೇಬಲ್​ಗೆ ಸ್ಯಾನಿಟೈಸರ್ ಮೊದಲು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ವ್ಯಾಪಕವಾಗಿ ಹರಡುತ್ತಿರುವ ಕೊರೊನಾ, ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

ಚೀನಾದಲ್ಲಿ ಕೊರೊನಾ ಸೋಂಕು  ವ್ಯಾಪಕವಾಗಿ ಹರಡುತ್ತಿರುವುದು ಭಾರತದಲ್ಲಿಯೂ ಆತಂಕ ಮೂಡಿಸಿದೆ. ಕೊರೊನಾ ನಿಯಂತ್ರಣಕ್ಕೆ ಭಾರತ ಸರ್ಕಾರವು ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುವ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಸಭೆಯ ನಂತರ ವಿಸ್ತೃತ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿತ್ತು. ಈ ಮಧ್ಯೆ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಶಾಲೆಗಳಿಗಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದೆ. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ. ಇನ್ನೊಂದು ಕಡೆ ಕೊರನೊ ಲಸಿಕೆ ನೀಡುವುದನ್ನು ಹೆಚ್ಚಿಸಬೇಕು ಎಂದು ಹೇಳಿದೆ.

ಬೆಂಗಳೂರಿನಲ್ಲಿ ಈಗಾಗಲೇ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವ ಕುರಿತು ಹಾಗೂ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಮಹಾನಗರ ಪಾಲಿಕೆ ಮಾರ್ಷಲ್​ಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ರಾಜಧಾನಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕೊವಿಡ್​ಗೆ ಸಂಬಂಧಿಸಿದಂತೆ ಅರಿವು ಮೂಡಿಲು ಮಾರ್ಷಲ್​ಗಳ ತಂಡವು ಪ್ರಯತ್ನಿಸುತ್ತಿದೆ. ಆದರೂ ಬೆಂಗಳೂರಿನಲ್ಲಿ ಮಾಸ್ಕ್ ಧರಿಸಲು ಜನರು ಹಿಂಜರಿಯುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ:  ಕೋವಿಡ್ XBB ರೂಪಾಂತರ ಪರಿಣಾಮಕಾರಿ: ಈ ವಾಟ್ಸಾಪ್ ಸಂದೇಶ ನಂಬಬೇಡಿ ಆರೋಗ್ಯ ಸಚಿವಾಲಯ

ಕೊವಿಡ್​ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಅಗತ್ಯ ಸೂಚನೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಹಾಕಿಕೊಳ್ಳುವಂತೆ ಸಾರ್ವಜನಿಕರಿಗೆ ಅವರು ಮನವಿ ಮಾಡಿದರು. ಬಸ್​​, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಟೆಸ್ಟಿಂಗ್​ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಇದರ ಜೊತೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ವಿದೇಶಗಳಿಂದ ನಗರಕ್ಕೆ ಬರುವವರಿಗೆ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಬೇಕು ಎಂಬ ಒತ್ತಡವನ್ನು ಹೇರಲಾಗಿದೆ. ಕೆಲ ದೇಶಗಳಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲು ತಜ್ಞರು ಸಲಹೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:28 pm, Sat, 24 December 22