ಮಡಿಕೇರಿ ಆಸ್ಪತ್ರೆಯಲ್ಲಿದ್ದ ರೋಗಿ ಮೇಲೆ ಹಲ್ಲೆ! ಪೊಲೀಸ್ ಕಾನ್ಸ್​ಟೇಬಲ್ ವಿರುದ್ಧ ದೂರು ದಾಖಲು

| Updated By: sandhya thejappa

Updated on: Sep 13, 2021 | 8:52 AM

ಕಾನ್ಸ್​ಟೇಬಲ್ ಶಿವಪ್ಪ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರೋಗಿಯೊಬ್ಬ ವಾರ್ಡ್​ನಿಂದ ಹೊರಬಂದು ಆಸ್ಪತ್ರೆಯ ಕಂಪ್ಯೂಟರ್ ಆನ್ ಮಾಡಲು ಯತ್ನಿಸುತ್ತಿದ್ದನಂತೆ.

ಮಡಿಕೇರಿ ಆಸ್ಪತ್ರೆಯಲ್ಲಿದ್ದ ರೋಗಿ ಮೇಲೆ ಹಲ್ಲೆ! ಪೊಲೀಸ್ ಕಾನ್ಸ್​ಟೇಬಲ್ ವಿರುದ್ಧ ದೂರು ದಾಖಲು
ಹಲ್ಲೆಗೊಳಗಾದ ರೋಗಿ
Follow us on

ಕೊಡಗು: ಆಸ್ಪತ್ರೆಯಲ್ಲಿದ್ದ ರೋಗಿ ಮೇಲೆ ಪೊಲೀಸ್ ಕಾನ್ಸ್​ಟೇಬಲ್ (Police Constable) ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕಾನ್ಸ್​ಟೇಬಲ್ ಲಾಠಿ ಏಟಿನಿಂದ ರೋಗಿಗೆ ಗಂಭೀರ ಗಾಯವಾಗಿದ್ದು, ಕೊಡಗು ಜಿಲ್ಲೆಯ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ರೋಗಿ ವಾರ್ಡ್​ನಿಂದ ಹೊರಬಂದು ಆಸ್ಪತ್ರೆಯಲ್ಲಿ ಅಸಂಬದ್ಧವಾಗಿ ವರ್ತಿಸಿದ ಹಿನ್ನೆಲೆ ಕಾನ್ಸ್​ಟೇಬಲ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾನ್ಸ್​​ಟೇಬಲ್ ಶಿವಪ್ಪ ಎಂಬುವವರು ರೋಗಿಯ ಮೇಲೆ ಲಾಠಿಯಲ್ಲಿ ಹಲ್ಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಶಿವಪ್ಪ ವಿರುದ್ಧ ರೋಗಿ ಸಂಬಂಧಿಕರು ಎಸ್​ಪಿಗೆ ದೂರು ನೀಡಿದ್ದಾರೆ.

ಕಾನ್ಸ್​ಟೇಬಲ್ ಶಿವಪ್ಪ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರೋಗಿಯೊಬ್ಬ ವಾರ್ಡ್​ನಿಂದ ಹೊರಬಂದು ಆಸ್ಪತ್ರೆಯ ಕಂಪ್ಯೂಟರ್ ಆನ್ ಮಾಡಲು ಯತ್ನಿಸುತ್ತಿದ್ದನಂತೆ. ಅಲ್ಲದೇ ಸ್ವಾಗತ ವಿಭಾಗದಲ್ಲಿ ಏನೇನೋ ತಡಕಾಡುತ್ತಿದ್ದನಂತೆ. ಹೀಗಾಗಿ ರೋಗಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ರೋಗಿಗೆ ಗಂಭೀರ ಗಾಯವಾಗಿದ್ದು, ಕಾನ್ಸ್​ಟೇಬಲ್ ವಿರುದ್ಧ ಜಿಲ್ಲಾ ಎಸ್​ಪಿ ಕ್ಷಮಾ ನಿಶ್ರಾಗೆ ರೋಗಿ ಸಂಬಂಧಿಕರು ಮೌಕಿಕ ದೂರು ನೀಡಿದ್ದಾರೆ.

ಪತ್ನಿಯಿಂದಲೇ ಪತಿ ಹತ್ಯೆ
ತುಮಕೂರು: ಪತಿ ಮೇಲೆ ಪೆಟ್ರೋಲ್ ಸುರಿದು ಪತ್ನಿ ಹತ್ಯೆಗೈದಿರುವ ಘಟನೆ ತುಮಕೂರಿನ ಬಡ್ಡಿಹಳ್ಳಿಯಲ್ಲಿ ಸಂಭವಿಸಿದೆ. 52 ವರ್ಷದ ನಾರಾಯಣ ಎಂಬುವವರು ಕೊಲೆಯಾದ ವ್ಯಕ್ತಿ. ಮನೆಯಲ್ಲಿ ಗಂಡ- ಹೆಂಡತಿ ಪ್ರತಿದಿನ ಜಗಳ ಆಡುತ್ತಿದ್ದರಂತೆ. ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಜಗಳವಾಗುತ್ತಿದ್ದರಂತೆ. ಪತ್ನಿ ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ನೆಲಮಂಗಲ ಬಳಿಯ ಟೋಲ್​ನಲ್ಲಿ ನಾರಾಯಣ ಕೆಲಸ ಮಾಡಿಕೊಂಡಿದ್ದರಂತೆ.

ಇದನ್ನೂ ಓದಿ

ಯಾದಗಿರಿ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ? ಮಹಿಳೆ ನಗ್ನಗೊಳಿಸಿ ಅಂಗಾಂಗ ಮುಟ್ಟಿ ಪೈಶಾಚಿಕ ಕೃತ್ಯ

Health Tips: ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ; ಕಾರಣ ತಿಳಿದುಕೊಳ್ಳಿ

(Police Constable Attack on Patient at Madikeri hospital)