ಒಂದೇ ವರ್ಷ ಎಸ್​ಎಸ್​ಎಲ್​ಸಿ ಪಾಸ್ ಆದ ಕೊಡಗಿನ ತಾಯಿ, ಮಗ!

| Updated By: guruganesh bhat

Updated on: Aug 10, 2021 | 5:52 PM

ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಇಬ್ಬರಿಗೂ ಸಂತಸ ತಂದಿದ್ದು, ಇಬ್ಬರೂ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ತಾಯಿ ಮತ್ತು ಮಗ ಇಬ್ಬರೂ ಒಂದೇ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿಡುವುದು ಹರ್ಷಕ್ಕೆ ಕಾರಣವಾಗಿದೆ.  

ಒಂದೇ ವರ್ಷ ಎಸ್​ಎಸ್​ಎಲ್​ಸಿ ಪಾಸ್ ಆದ ಕೊಡಗಿನ ತಾಯಿ, ಮಗ!
ಕುಸುಮಾವತಿ ಮತ್ತು ಅವರ ಮಗ ಗೌತಮ್
Follow us on

ಮಡಿಕೇರಿ: ಎಸ್ಎಸ್ಎಲ್​ಸಿ ಫಲಿತಾಂಶ (SSLC Exam Results 2021)  ಈಗಾಗಲೇ ಘೋಷಣೆಯಾಗಿದೆ. ಈಬಾರಿಯೂ ಕೊವಿಡ್ ನಡುವೆಯೂ ಎದೆಗುಂದದೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಈ ಬಾರಿಯ ಎಸ್ಎಸ್ಎಲ್​ಸಿ ಫಲಿತಾಂಶ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಸಮೀಪದ ಕುಸುಮಾವತಿ ಚಂದ್ರಶೇಖರ್ ಮತ್ತು ಅವರ ಮಗ ಗೌತಮ್​ಗೆ ಎಲ್ಲರಿಗಿಂತ ಒಂದು ಗುಲಗಂಜಿ ಹೆಚ್ಚು ಖುಷಿಯನ್ನೇ ತಂದುಕೊಟ್ಟಿದೆ.

ಕುಸುಮಾವತಿ ಅವರಿಗೆ 18 ವರ್ಷಗಳ ಹಿಂದೆ, ಅಂದರೆ ಅವರು 9 ನೇ ತರಗತಿಯಲ್ಲಿ ಓದುತ್ತಿರುವಾಗ ವಿವಾಹವಾಗಿತ್ತು. ಹೀಗಾಗಿ ಅವರು ಆಗ ತಮ್ಮ ವಿದ್ಯಾಭ್ಯಾಸವನ್ನು 9ನೇ ತರಗತಿಗೆ ಮೊಟಕುಗೊಳಿಸಿಬಿಟ್ಟಿದ್ದರು. ಹಿಂದಿನ ವರ್ಷ ಅವರ ಮಗ ಗೌತಮ್ ಎಸ್ಎಸ್ಎಲ್​ಸಿ ಓದುತ್ತಿದ್ದ. ಆದರೆ ಹಿಂದಿನ ವರ್ಷದ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಗೌತಮ್ ಅನುತ್ತೀರ್ಣನಾಗಿದ್ದ. ಹೀಗಾಗಿ ಈ ವರ್ಷ ಗಣಿತ ವಿಷಯವನ್ನು ಗೌತಮ್ ಮತ್ತೆ ಬರೆದಿದ್ದ. ಜತೆಗೆ ಗೌತಮ್ ತಾಯಿ ಕುಸುಮಾವತಿ ಅವರೂ ಎಸ್ಎಸ್ಎಲ್ಸಿಯ ಎಲ್ಲ 6 ವಿಷಯಗಳಿಗೂ ಈ ಬಾರಿ ಪರೀಕ್ಷೆ ಕಟ್ಟಿದ್ದರು. ಅವರೂ ತಮ್ಮ ಮಗ ಗೌತಮ್ ಜತೆ ಪರೀಕ್ಷೆ ಬರೆದಿದ್ದರು. ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಇಬ್ಬರಿಗೂ ಸಂತಸ ತಂದಿದ್ದು, ಇಬ್ಬರೂ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ತಾಯಿ ಮತ್ತು ಮಗ ಇಬ್ಬರೂ ಒಂದೇ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿಡುವುದು ಹರ್ಷಕ್ಕೆ ಕಾರಣವಾಗಿದೆ.

ಹೀಗೆ ವಿದ್ಯಾಭ್ಯಾಸಕ್ಕೆ ವಯಸ್ಸು ಮುಖ್ಯವಲ್ಲ ಎಂದು ಸಾಬೀತುಪಡಿಸಿರುವ ಕೊಡಗಿನ ಕುಸುಮಾವತಿ ಚಂದ್ರಶೇಖರ್  ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ:  ಕೊನೆ ಅರ್ಧ ಗಂಟೆ ಪರೀಕ್ಷೆ ಆಕ್ಸಿಜನ್ ಸಪೋರ್ಟ್ ಮೇಲಿದ್ದು ಬರೆದ ಈ ತಾಂಡಾ ಹುಡುಗಿ ಎಲ್ಲ 625 ಅಂಕ ಬಾಚಿಕೊಂಡಳು!

ಎಸ್​ಎಸ್​ಎಲ್​ಸಿ ಪರೀಕ್ಷೆ ಹಿಂದಿನ ದಿನವೇ ಕೊವಿಡ್ ಖಚಿತ; ಅಂಜದೇ ಅಳುಕದೇ ಪರೀಕ್ಷೆ ಬರೆದ ವಿದ್ಯಾರ್ಥಿ ಇಂದು ಸಾಧಕ

(SSLC Results 2021 Mother and son pass at 10th class the same time in Madikeri Kodagu )