ಎಸ್​ಎಸ್​ಎಲ್​ಸಿ ಪರೀಕ್ಷೆ ಹಿಂದಿನ ದಿನವೇ ಕೊವಿಡ್ ಖಚಿತ; ಅಂಜದೇ ಅಳುಕದೇ ಪರೀಕ್ಷೆ ಬರೆದ ವಿದ್ಯಾರ್ಥಿ ಇಂದು ಸಾಧಕ

‘ಯಪ್ಪಾ ನಾವ ಹೊಲಕ್ಕೆ ಹೋಗಿದ್ವಿ, ಮಗ 10 ಪಾಸ್ ಆಗಿ ಚುಲೋ ಮಾರ್ಕ್ಸ್ ತಗೆದಾನ, ಬಹಳ ಖುಷಿ ಆಗ್ತಿದೆ, ನಾವ ದಿನ ಕೂರಿ ಕಾದ್ರೆ,ಕೂಲಿ ಮಾಡಿದ್ರೆ ಹೊಟ್ಟೆ ತುಂಬೋದು, ಮಕ್ಕಳಿಗೆ ಅಕ್ಷರ ಮುಖ್ಯ, ಹೇಗಾದ್ರೂ ಸಾಲ ಸೋಲ ಮಾಡಿ ಕಲಸಾಕತ್ತೀವಿ, ಪರೀಕ್ಷೆ ಹಿಂದಿನ ದಿನ ಮಗನಿಗೆ ಅದ್ಯಾವದ ಕೊರೊನಾ ಅಂತ ಅದು ಬಂದಿತ್ತು, ನಮಗೆಲ್ಲ ಬಹಳ ಹೆದರಿಕೆ ಆಗಿತ್ತ,..

ಎಸ್​ಎಸ್​ಎಲ್​ಸಿ ಪರೀಕ್ಷೆ ಹಿಂದಿನ ದಿನವೇ ಕೊವಿಡ್ ಖಚಿತ; ಅಂಜದೇ ಅಳುಕದೇ ಪರೀಕ್ಷೆ ಬರೆದ ವಿದ್ಯಾರ್ಥಿ ಇಂದು ಸಾಧಕ
ಸಾಧಕ ವಿದ್ಯಾರ್ಥಿ ಮಾರುತಿ
Follow us
Guruganesh Bhat
| Updated By: guruganesh bhat

Updated on:Aug 09, 2021 | 9:56 PM

ಅದೊಂದು ಕೂಲಿನಾಲಿ ಮಾಡಿ ಬದುಕು ಕಟ್ಟಿಕೊಂಡ ಕುಟುಂಬ. ಪಾಲಕರಿಗೆ ಮಕ್ಕಳನ್ನು ಓದಿಸೋದು ಹೆತ್ತವರ ಆಸೆ. ಇದೇ ಆಸೆ ಹೊತ್ತು ತಂದೆ ತಾಯಿ ಕೂಡಿಕೊಂಡು ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಇದರ ನಡುವೆ ಎಸ್ಎಸ್ಎಲ್ಸಿ (SSLC Exam 2021) ಪರೀಕ್ಷೆ ಬರೆಯುವ ಸಮಯದಲ್ಲೇ ಮಗನಿಗೆ ಕೊವಿಡ್ ಸಹ ತಗುಲಿತು. ಆದರೂ ಆ ವಿದ್ಯಾರ್ಥಿ ಕೊವಿಡ್​ ಸೋಂಕನ್ನೂ ಸೋಲಿಸಿ ಶೇಕಡಾ 92ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದಾನೆ. ಅಷ್ಟಕ್ಕೂ ಈ ಸಾಧಕ ವಿದ್ಯಾರ್ಥಿ ಯಾರು ಎಂಬ ಸ್ಟೋರಿ ಓದಿ..

ಆತ ಮಾರುತಿ ಕವಲೂರು. ಮೂಲತಃ ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ತಳಕಲ್ ನಿವಾಸಿ. ಮಾರುತಿ ಕವಲೂರು ಕುಕನೂರ ತಾಲೂಕಿನ ಮಂಡಲಗಿರಿ ಸರ್ಕಾರಿ ಶಾಲೆಯಲ್ಲಿ ಹತ್ತನೆ ತರಗತಿ ಓದುತ್ತಿದ್ದ ವಿದ್ಯಾರ್ಥಿ. ಕೊವಿಡ್ ನಡುವೆ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂಬ ಅನುಮಾನವೂ ಇತ್ತು. ಈ ಮದ್ಯೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿ ನಿಂತಿದ್ದರು. ಆದರಂತೆ ವಿದ್ಯಾರ್ಥಿ ಮಾರುತಿ ಕವಲೂರು ಕೂಡಾ ಪರೀಕ್ಷೆಗೆ ಕಷ್ಟು ಪಟ್ಟು ಓದಿ ರೆಡಿಯಾಗಿದ್ದ. ಆದರೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿದ್ದ ಮಾರುತಿಗೇ ಸ್ವತಃ ಕೊವಿಡ್ ಸೋಂಕು ದೃಢಪಟ್ಟಿತು ಅದೂ ಪರೀಕ್ಷೆಯ ಹಿಂದಿನ ದಿನವೇ. ನಾಳೆಯೇ ಪರೀಕ್ಷೆ ಇದ್ದರೂ, ಇತ್ತ ವಿದ್ಯಾರ್ಥಿ ಮಾರುತಿ ಕೊಪ್ಪಳ ಜಿಲ್ಲಾ ಆಸ್ಪತ್ರೆ ಸೇರಿದ್ದ. ಆದರೂ ಸಹ ಮಾರುತಿ ಪರೀಕ್ಷೆ ಬರೆರುವ ನಿರ್ಧಾರ ಮಾಡಿದ್ದ. ಕೊವಿಡ್ ಭಯದಲ್ಲೂ ಮಾರುತಿ ನಾನು ಪರೀಕ್ಷೆ ಬರೆದೇ ಬರೆಯುತ್ತೇನೆ ಎಂಬ ತೀರ್ಮಾನಕ್ಕೆ ಬಂದಿದ್ದ. ಜಿಲ್ಲಾಡಳಿತವೂ ಮಾರುತಿ ಇಚ್ಚೆಯಂತೆ ಜಿಲ್ಲಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ ಮಾರುತಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು. ಕೊವಿಡ್ ಭಯದಲ್ಲೂ ಮಾರುತಿ ಕವಲೂರು ಸಾಧನೆಗೆ ಓದಿದ ಶಾಲೆ ಹಾಗೂ ಇಡೀ ಕುಟುಂಬವೇ ಹೆಮ್ಮೆಪಡುತ್ತಿದೆ.

ಹಾಗಾದ್ರೆ ಕೊವಿಡ್ ಇದ್ದೂ ಪರೀಕ್ಷೆ ಬರೆದ ಮಾರುತಿ ಗಳಿಸಿದ ಅಂಕಗಳೆಷ್ಟು ಗೊತ್ತೆ? ಕೊವಿಡ್ಪಸೋಂಕು ಪರೀಕ್ಷೆಯ ಹಿಂದಿನ ದಿನವೂ ದೃಢಪಟ್ಟರೂ ಮಾರುತಿ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಪರೀಕ್ಷೆ ಬರೆದು ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದಿದ್ದಾನೆ. ಒಟ್ಟು 625 ಅಂಕಗಳಿಗೆ ಮಾರುತಿ 579 ಅಂಕ ಪಡೆದು ತೇರ್ಗಡೆಯಾಗಿದ್ದಾನೆ. ಮಾರುತಿ ಪಡೆದ ಅಂಕಗಳು ಇಂತಿವೆ: ಕನ್ನಡ – 125 – 125 ಇಂಗ್ಲೀಷ್ 100 – 98 ಹಿಂದಿ – 100 – 98 ಗಣಿತ – 100 -80 ವಿಜ್ಞಾನ – 100 -84 ಸಮಾಜ ವಿಜ್ಞಾನ -100 -94

ಕುಟುಂಬದಲ್ಲಿದೆ ಕಡು ಬಡತನ ಮಾರುತಿ ಕವಲೂರು ತಂದೆ ದಿನ ಕುರಿ ಕಾಯುವ ಕೆಲಸ ಮಾಡಿದರೆ ತಾಯಿ ಕೂಲಿ ಮಾಡ್ತಾಳೆ. ಮಾರುತಿ ತಂದೆ ರಾಮಪ್ಪ ನಿತ್ಯ ಕುರಿ ಕಾಯುವ ಕೆಲಸ ಮಾಡುತ್ತಾರೆ ತಾಯಿ ಪ್ರೇಮಮ್ಮ ಕೂಲಿ ಮಾಡಿ ಬದುಕು ನಡೆಸುತ್ತಾರೆ. ರಾಮಪ್ಪ ಪ್ರೇಮಮ್ಮ ದಂಪತಿಗೆ ಒಟ್ಟು ಮೂರು ಮಕ್ಕಳು. ಮೊದಲನೆ ಮಗ ಗವಿಸಿದ್ದಪ್ಪ, ಪಿಯಸಿ ವಿಜ್ಞಾನ ಓದುತ್ತಿದ್ದಾನೆ, ಎರಡನೇ ಮಗನಾದ ಮಾರುತಿ ಸದ್ಯ 10 ಯನ್ನು ಅತ್ಯಂತ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಇನ್ನೊಬ್ಬ ತಮ್ಮ ನಾಗರಾಜ್ ತಳಕಲ್ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದಾನೆ. ಮೂರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವ ತಂದೆ ಮಕ್ಕಳ ಬಗ್ಗೆ ಅಗಾಧ ಕನಸು ಕಟ್ಟಿಕೊಂಡಿದ್ದಾರೆ. ರಾಮಪ್ಪ ಪ್ರೇಮಮ್ಮ ದಂಪತಿ ಮೂರು‌ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಮನೆಯಲ್ಲಿ ಕಡು ಬಡತನವಿದ್ದರೂ ಶಿಕ್ಷಣಕ್ಕೆ ಮಾತ್ರ ಕಡಿಮೆ ಮಾಡಿಲ್ಲ, ಇಬ್ಬರು ನಿತ್ಯ ದುಡಿದು ಮಕ್ಕಳನ್ನ ಕಲಿಸುತ್ತಿದ್ದಾರೆ ತಂದೆ ರಾಮಪ್ಪ ಕುರಿ ಕಾದು,ಮಕ್ಕಳನ್ನ ಹೇಗಾದ್ರೂ ಮಾಡಿ‌ ನೌಕರಿಗೆ ಹಚ್ಚೋ ಕನಸು ಕಾಣ್ತೀದಾರೆ. ಕೊವಿಡ್ ನಡುವೆಯೂ ಮಗನ ಸಾಧನೆ ಕಂಡು ಹೆತ್ತ ಕರುಳುಗಳ ಸಂತೋಷಕ್ಕೆ ಪಾರವೇ ಇಲ್ಲ. ಫಲಿತಾಂಶ ಬಂದ ದಿನವೂ ಇಡೀ ಕುಟುಂಬ ಜಮೀನಿನಲ್ಲಿ ಕೆಲಸ ಮಾಡುತ್ತಿತ್ತು. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ ಕುಟುಂಬ ಹೇಳಿದ್ದು ಹೀಗೆ..

‘ಯಪ್ಪಾ ನಾವ ಹೊಲಕ್ಕೆ ಹೋಗಿದ್ವಿ, ಮಗ 10 ಪಾಸ್ ಆಗಿ ಚುಲೋ ಮಾರ್ಕ್ಸ್ ತಗೆದಾನ, ಬಹಳ ಖುಷಿ ಆಗ್ತಿದೆ, ನಾವ ದಿನ ಕೂರಿ ಕಾದ್ರೆ,ಕೂಲಿ ಮಾಡಿದ್ರೆ ಹೊಟ್ಟೆ ತುಂಬೋದು, ಮಕ್ಕಳಿಗೆ ಅಕ್ಷರ ಮುಖ್ಯ, ಹೇಗಾದ್ರೂ ಸಾಲ ಸೋಲ ಮಾಡಿ ಕಲಸಾಕತ್ತೀವಿ, ಪರೀಕ್ಷೆ ಹಿಂದಿನ ದಿನ ಮಗನಿಗೆ ಅದ್ಯಾವದ ಕೊರೊನಾ ಅಂತ ಅದು ಬಂದಿತ್ತು, ನಮಗೆಲ್ಲ ಬಹಳ ಹೆದರಿಕೆ ಆಗಿತ್ತ, ಅದರ ಮದ್ಯೆ ನಮ್ಮ‌ಮಗ ಪೇಪರ ಚುಲೋ ಬರೆದಾನ,ಮಾರ್ಕ್ಸ್ ಚುಲೋನು ಬಂದಾವ’ ಅಂತಾರೆ ತಂದೆ ರಾಮಪ್ಪ..

ಕೊವಿಡ್ ಮದ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿ ಮಾರುತಿ ಕವಲೂರು ಟಿವಿ 9 ಕನ್ನಡ ಡಿಜಿಟಲ್ ಜತೆ ಸಂತಸ ಹಂಚಿಕೊಂಡರು. ಕೊವಿಡ್ ಬಂದ ದಿನ ಬಹಳ ಭಯ ಆಗಿತ್ತು, ಪರೀಕ್ಷೆ ಓದಿಕೊಂಡು ತಯಾರಗಿದ್ದೆ, ಹಾಗಾಗಿ‌ ನಾನು ಪರೀಕ್ಷೆ ಬರೆಯಲು ತೀರ್ಮಾನ‌ ಮಾಡಿದ್ದೆ, 579 ಅಂಕಗಳು‌ ಬಂದಿವೆ, ಬಹಳ‌ ಖುಷಿ ಆಗೇತಿ, ಒಬ್ಬನೇ ಪರೀಕ್ಷೆ ಬರೆಯೋದು ಸವಾಲಾಗಿತ್ತು, ಮುಂದೆ ಇಂಜಿನೀಯರಿಂಗ್ ಮಾಡಬೇಕು ಅನ್ನೋದ ನನ್ನ ಆಸೆ’ ಎಂದು ಕೊವಿಡ್ ಸೋಂಕು ಇದ್ದರೂ ಪರೀಕ್ಷೆ ಎದುರಿಸಿದ ಬಗೆಯನ್ನು ಹಂಚಿಕೊಂಡರು

ವಿಶೇಷ ವರದಿ: ಶಿವಕುಮಾರ್ ಪತ್ತಾರ್, ಕೊಪ್ಪಳ

ಇದನ್ನೂ ಓದಿ: 

ಕೊನೆ ಅರ್ಧ ಗಂಟೆ ಪರೀಕ್ಷೆ ಆಕ್ಸಿಜನ್ ಸಪೋರ್ಟ್ ಮೇಲಿದ್ದು ಬರೆದ ಈ ತಾಂಡಾ ಹುಡುಗಿ ಎಲ್ಲ 625 ಅಂಕ ಬಾಚಿಕೊಂಡಳು!

Karnataka SSLC Result 2021: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ; ಟಾಪರ್ಸ್ ಯಾರು? ಇಲ್ಲಿದೆ ವಿವರ

(SSLC Results 2021 Covid positive before one day of SSLC exam to a Koppal student he is the topper today)

Published On - 9:39 pm, Mon, 9 August 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ