ಹಿಂದೂಗಳ ಬಗ್ಗೆ ಸಿದ್ದರಾಮಯ್ಯ ಕೊಟ್ಟಿದ್ದ ಹೇಳಿಕೆಗಳಿಗೆ ಬೇಸತ್ತು ಮೊಟ್ಟೆ ಎಸೆದೆ: ಸಂಪತ್

| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2022 | 9:54 AM

ನಾನು ಕಾಂಗ್ರೆಸ್​ ನಿಷ್ಠಾವಂತ ಕಾರ್ಯಕರ್ತ. ನಾನು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ಬೆದರಿಕೆ ಕರೆಗಳಿಂದ ನನಗೆ ನೋವಾಗಿದೆ.​ ಚುನಾವಣೆಯಲ್ಲಿ ಮಾತ್ರ ನಾನು ಅವರಿಗೆ ಬೇಕು.

ಹಿಂದೂಗಳ ಬಗ್ಗೆ ಸಿದ್ದರಾಮಯ್ಯ ಕೊಟ್ಟಿದ್ದ ಹೇಳಿಕೆಗಳಿಗೆ ಬೇಸತ್ತು ಮೊಟ್ಟೆ ಎಸೆದೆ: ಸಂಪತ್
ಕಾರಿನ ಮೇಲೆ ಮೊಟ್ಟ ಎಸೆದಿದ್ದ ಸಂಪತ್
Follow us on

ಮಡಿಕೇರಿ: ಹಿಂದೂಗಳ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಗಳಿಂದ ಬೇಸತ್ತು ಮೊಟ್ಟೆ ಎಸೆದೆ ಎಂದು ಮಡಿಕೇರಿಯಲ್ಲಿ ಟಿವಿ9ಗೆ ಸಂಪತ್​ ಎಕ್ಸ್​​ಕ್ಲೂಸಿವ್ ಹೇಳಿಕೆ ನೀಡಿದರು. ನಾನು ಕಾಂಗ್ರೆಸ್​ ನಿಷ್ಠಾವಂತ ಕಾರ್ಯಕರ್ತ. ನಾನು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ಬೆದರಿಕೆ ಕರೆಗಳಿಂದ ನನಗೆ ನೋವಾಗಿದೆ.​ ಚುನಾವಣೆಯಲ್ಲಿ ಮಾತ್ರ ನಾನು ಅವರಿಗೆ ಬೇಕು. ಉಳಿದ ಸಮಯದಲ್ಲಿ ನಾನು ಅವರಿಗೆ ಬೇಕಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಒಂದು ರೂಪಾಯಿ ಪಡೆದಿಲ್ಲ. ಚಹಾಗೂ ಸಹ ಅವರಿಂದ ಹಣ ಪಡೆದಿಲ್ಲ. ನಿನ್ನೆ ನನ್ನ ಸ್ನೇಹಿತ ನನಗೆ ಜಾಮೀನು ಕೊಡಿಸಿದ್ದಾನೆ ಎಂದು ಮಡಿಕೇರಿಯಲ್ಲಿ ಟಿವಿ9ಗೆ ಸಂಪತ್​ ಎಕ್ಸ್​​ಕ್ಲೂಸಿವ್ ಹೇಳಿಕೆ ನೀಡಿದರು.

ಕೆಲಸಕ್ಕೆಂದು ಹೋದಾಗ ಸಿದ್ದರಾಮಯ್ಯ ಬರ್ತಾರೆಂದು ತಿಳಿದಿತ್ತು. ಸಿದ್ದರಾಮಯ್ಯ ಅಲ್ಲಿ ಬಂದ ವೇಳೆ ನಾನೇ ಮೊಟ್ಟೆ ಎಸೆದಿದ್ದೇನೆ. ಹಿಂದೂ ವಿರೋಧಿ ಹೇಳಿಕೆಗಳಿಗೆ ಬೇಸತ್ತು ಮೊಟ್ಟೆ ಎಸೆದಿದ್ದೇನೆ. ನಾವು ಕೊಡಗಿನವರು ದನದ ಮಾಂಸ ತಿನ್ನುವುದಿಲ್ಲ. ಸಿದ್ದರಾಮಯ್ಯ ಇಂತಹ ಹೇಳಿಕೆಯಿಂದ ನನಗೆ ನೋವಾಗಿತ್ತು. ಟಿಪ್ಪು ಸುಲ್ತಾನ್ ಕೊಡಗಿನವರ ಮೇಲೆ ದಾಳಿ ಮಾಡಿದ್ದ. ಸಿದ್ದರಾಮಯ್ಯ ಟಿಪ್ಪು ಬಗ್ಗೆ ಹೇಳಿಕೆಗಳು ನಾನು ಒಪ್ಪುವುದಿಲ್ಲ ಎಂದು ಸಂಪತ್​ ಹೇಳಿದರು.

ನಾನು ಹಿಂದೂ, ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ

ಮೊದಲು ನಾನು ಜೆಡಿಎಸ್‌ನಲ್ಲಿದ್ದೆ, ಮೈತ್ರಿಯಲ್ಲಿ ಕಾಂಗ್ರೆಸ್‌ಗೆ ವರ್ಕ್ ಮಾಡಿದ್ದೆ. ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ತುಂಬಾ ಹಳೆಯ ವಿಡಿಯೋ ವೈರಲ್ ಮಾಡುತ್ತಿದ್ದಾರೆ. ನನಗೆ 17 ರಿಂದ 18 ವರ್ಷ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ನಲ್ಲಿ ತೆಗದ ವಿಡಿಯೋ ಅದು. ಅಪ್ಪಚ್ಚು ರಂಜನ್ ಜೊತೆ ಇರುವುದು ರಾಮನವಮಿಯಲ್ಲಿ  ಸ್ಥಳೀಯ ಶಾಸಕರು ಹಿಂದೂ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ತೆಗೆದ ಪೋಟೋ. ನಾನು ಹಿಂದೂ ಕಾರ್ಯಕರ್ತ, ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ ಎಂದು ಹೇಳಿದರು.

ನನಗೆ ಇದೀಗ ಹಲವು ಬೆದರಿಕೆ ಬರುತ್ತಿವೆ

ಮೊಟ್ಟೆ ಎಸೆದಿರುವುದಕ್ಕೆ ಪಶ್ಚಾತ್ತಾಪವಿಲ್ಲ. ಇದು ಕೊಡಗಿನ ಹಿಂದೂಗಳ ಆಕ್ರೋಶವಾಗಿದೆ. ನನಗೆ ಇದೀಗ ಹಲವು ಬೆದರಿಕೆ ಬರುತ್ತಿವೆ. ನನ್ನ ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿದ್ದಾರೆ. ನನ್ನನ್ನು ಮೊಟ್ಟೆಯಲ್ಲಿ ಸ್ನಾನ ಮಾಡಿಸುವುದಾಗಿ ಬೆದರಿಸಿದ್ದಾರೆ. ಇದರಿಂದ‌ ನನಗೆ ನೋವಾಗಿದೆ. ನಾನು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ನನ್ನ ಮನೆಯಲ್ಲಿ10 ಜನರಿದ್ದಾರೆ. ನನಗೆ ಜಾಮೀನು ಕೊಡಿಸಲು ಯಾವುದೇ ರಾಜಕೀಯ ಪ್ರಭಾವ ಬೀರಿಲ್ಲ. ನನ್ನ ಸ್ನೇಹಿತನೇ ನನಗೆ ಜಾಮೀನು ನೀಡಿದ್ದಾನೆ ಎಂದು
ಟಿವಿ9 ಜೊತೆ ಸಂಪತ್‌ ಹೇಳಿಕೆ ನೀಡಿದರು.

 

Published On - 9:25 am, Sun, 21 August 22