ಟಿವಿ9 ವರದಿ ಇಂಪ್ಯಾಕ್ಟ್: ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

ಕೊಡಗು ಜಿಲ್ಲೆಯ ರಾಜಾಸೀಟ್‌ನಲ್ಲಿ ನಿರ್ಮಾಣವಾಗಬೇಕಿದ್ದ ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ಸುದ್ದಿ ಬಿತ್ತರಿಸಿತ್ತು. ಸಾರ್ವಜನಿಕರ ವಿರೋಧ ಹಾಗೂ ಯೋಜನೆಯ ಸುರಕ್ಷತಾ ಅಪಾಯಗಳ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಸಕ ಮಂಥರ್ ಗೌಡ ತಿಳಿಸಿದ್ದಾರೆ.

ಟಿವಿ9 ವರದಿ ಇಂಪ್ಯಾಕ್ಟ್: ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ
ಗ್ಲಾಸ್ ಬ್ರಿಡ್ಜ್
Updated By: ಗಂಗಾಧರ​ ಬ. ಸಾಬೋಜಿ

Updated on: Aug 16, 2025 | 12:55 PM

ಕೊಡಗು, ಆಗಸ್ಟ್​ 16: ಮಡಿಕೇರಿ ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ (Raja Seat) ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತ್ತೀಚೆಗೆ ರಾಜಾಸೀಟ್‌ನಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಸೇತುವೆ (Glass Bridge)​ ಮತ್ತು ಫುಡ್ ಕೋರ್ಟ್ ನಿರ್ಮಾಣ ಯೋಜನೆಗೆ ತೋಟಗಾರಿಕೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಇದಕ್ಕೆ ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಸರ್ಕಾರ ಆ ಯೋಜನೆಯನ್ನು ಹಿಂಪಡೆದಿದೆ.

ರಾಜಾಸೀಟ್​ನಲ್ಲಿ ಗ್ಲಾಸ್ ಬ್ರಿಡ್ಜ್ ಮಾಡುವುದಿಲ್ಲ ಎಂದ ಶಾಸಕ ಮಂತರ್ ಗೌಡ 

ಇನ್ನು ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಮಾಹಿತಿ ನೀಡಿದ್ದು, ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ರಾಜ್ಯ ಸರ್ಕಾರ ಹಿಂಪಡೆದಿದೆ. ಗ್ಲಾಸ್ ಬ್ರಿಡ್ಜ್​​ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಅಪಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಯೋಜನೆ ರದ್ದು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಡಿಕೇರಿ ರಾಜಾಸೀಟ್​ನಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಲು ಟೆಂಡರ್​ ಕರೆದ ಸರ್ಕಾರ

ಇದನ್ನೂ ಓದಿ
ಮಡಿಕೇರಿ ರಾಜಾಸೀಟ್​ನಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಟೆಂಡರ್​ಗೆ ಆಹ್ವಾನ
ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೋಡೆಯಲ್ಲಿ ಭಾರೀ ಬಿರುಕು
ಕೊಡಗಿನಲ್ಲಿ ಭೂ ಕಂಟಕ: 60ಕ್ಕೂ ಹೆಚ್ಚು ಕುಟುಂಬಗಳು ಕಂಗಾಲು
ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಧರೆಗುರುಳಿದ ಮರಗಳು: ರಸ್ತೆ ಸಂಪೂರ್ಣ ಬಂದ್​

ಕೋಟ್ಯಂತರ ರೂ. ವೆಚ್ಚದಲ್ಲಿ ಯೋಜನೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಯೋಜನೆಯ ಅಪಾಯಗಳ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತದಿಂದ ಯೋಜನೆ ರದ್ದು ಮಾಡಲಾಗಿದೆ.

ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಕರೆಯುವ ಮೊದಲು ಅಲ್ಲಿಗೆ ಭೂ ವಿಜ್ಞಾನಿಗಳನ್ನ, ಪರಿಸರ ಇಲಾಖೆ ತಜ್ಞರನ್ನ ಕರೆಸಿ ವಿವಿಧ ಪರೀಕ್ಷೆಗಳನ್ನು ಮಾಡಬೇಕಿತ್ತು. ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲು ಈ ಜಾಗ ಸುರಕ್ಷಿತವಾಗಿದೆ ಎಂಬ ಫೀಸಿಬಿಲಿಟಿ ಚೆಕ್ ಮಾಡಬೇಕಿತ್ತು. ಆದರೆ ಯಾವುದನ್ನೂ ಮಾಡದೆ ತೋಟಗಾರಿಕಾ ಇಲಾಖೆ ಟೆಂಡರ್​ ಆಹ್ವಾನಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೋಡೆಯಲ್ಲಿ ಭಾರೀ ಬಿರುಕು: ಯಾವುದೇ ಕ್ಷಣ ಭೂಕುಸಿತ ಸಂಭವಿಸುವ ಭೀತಿ

ಈಗಲೇ ರಾಜಾಸೀಟ್​ನಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರ ಒತ್ತಡ ತಾಳಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಗ್ಲಾಸ್ ಬ್ರಿಡ್ಜ್ ಮಾಡಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನದಿಂದ ಪ್ರಕೃತಿಯ ಮೇಲೆ ಇನ್ನಷ್ಟು ಒತ್ತಡ ಬೀಳಲಿದೆ ಎಂಬ ಮಾತು ಕೇಳಿಬಂದಿತ್ತು. ಅದೂ ಅಲ್ಲದೆ ಗುಡ್ಡ ಕೊರೆದು ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದರೆ ಭೂ ಕುಸಿತವಾಗಿ ಪ್ರವಾಸಿಗರ ಜೀವಕ್ಕೂ ಕುತ್ತು ಬರಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.