ವಿರಾಜಪೇಟೆ: ಹುಲಿ ದಾಳಿಗೆ ವಿದೇಶಿ ನಾಯಿಗಳು ಬಲಿ, ಕಾಫಿ ತೋಟದಲ್ಲಿ ಕಾಡಾನೆ ಕಳೇಬರ ಪತ್ತೆ

ಹೊಸಕೋಟೆ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹತ್ತಾರು ಸಂಖ್ಯೆಯಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಇವುಗಳ ಕಾಟದಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ. ಇವುಗಳನ್ನು ಸೆರೆ ಹಿಡಿದು ನೆಮ್ಮದಿ ನೀಡುವಂತೆ ಗ್ರಾಮಸ್ಥ ರಾಹುಲ್ ಆಗ್ರಹಿಸಿದ್ದಾರೆ.

ವಿರಾಜಪೇಟೆ: ಹುಲಿ ದಾಳಿಗೆ ವಿದೇಶಿ ನಾಯಿಗಳು ಬಲಿ, ಕಾಫಿ ತೋಟದಲ್ಲಿ ಕಾಡಾನೆ ಕಳೇಬರ ಪತ್ತೆ
ಕಾಫಿ ತೋಟದಲ್ಲಿ ಕಾಡಾನೆ ಕಳೇಬರ ಪತ್ತೆ
Edited By:

Updated on: May 25, 2024 | 5:16 PM

ವಿರಾಜಪೇಟೆ, ಮೇ 25: ಕೊಡಗು (Kodagu) ಜಿಲ್ಲೆಯಲ್ಲಿ ವನ್ಯ ಮೃಗಗಳ ಹಾವಳಿ ಮಿತಿ ಮೀರಿದೆ. ಕಾಡು ಪ್ರಾಣಿಯ ದಾಳಿಗೆ ಎರಡು ವಿದೇಶೀ ತಳಿಯ ಶ್ವಾನಗಳು ಬಲಿಯಾಗಿವೆ. ವಿರಾಜಪೇಟೆ (Virajapet) ತಾಲ್ಲೂಕಿನ ಕುಟ್ಟಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕೆಕೆ ಗ್ರೂಪ್ ಆಫ್ ಎಸ್ಟೇಟ್​​ಗೆ (KK Group of Estate) ಸೇರಿದ ಎರಡು ನಾಯಿಗಳು ಸಾವನ್ನಪ್ಪಿವೆ. ಇವು ಸೈಬೀರಿಯನ್ ಹಸ್ಕಿ ಹಾಗೂ ಪಿಟ್ ಬುಲ್ ತಳಿಯ ನಾಯಿಗಳಾಗಿವೆ. ಎಸ್ಟೇಟ್ ಸಮೀಪ ಹುಲಿಯ ಹೆಜ್ಜೆಗಳು ಪತ್ತೆಯಾಗಿದ್ದು ಬಹುಶಃ ವ್ಯಾಘ್ರ ದಾಳಿಯಿಂದಲೇ ಈ ಶ್ವಾನಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಕಾಫಿ ತೋಟದಲ್ಲಿ ಕಾಡಾನೆ ಕಳೇಬರ ಪತ್ತೆ

ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಹೊಸ ಕೋಟೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಡಾನೆ ಕಳೇಬರ ಪತ್ತೆಯಾಗಿದೆ. ಅಂದಾಜು 20 ವರ್ಷ ಪ್ರಾಯದ ಮಕಾನ್ ಆನೆ ಇದಾಗಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ: 70 ವರ್ಷಗಳಲ್ಲಿ ಮೊದಲ ಬಾರಿಗೆ ಬತ್ತಿ ಹೋಗಿದ್ದ ಕಾವೇರಿ ನದಿ ಮತ್ತೆ ಗತವೈಭವಕ್ಕೆ ಮರಳುತ್ತಿದೆ! ಇಲ್ಲಿದೆ ಚಿತ್ರಣ

ಹೊಸಕೋಟೆ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹತ್ತಾರು ಸಂಖ್ಯೆಯಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಇವುಗಳ ಕಾಟದಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ. ಇವುಗಳನ್ನು ಸೆರೆ ಹಿಡಿದು ನೆಮ್ಮದಿ ನೀಡುವಂತೆ ಗ್ರಾಮಸ್ಥ ರಾಹುಲ್ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ