ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು: ಕೋಡಿಹಳ್ಳಿ ಚಂದ್ರಶೇಖರ್

|

Updated on: Apr 13, 2021 | 1:57 PM

ನೌಕರರು ತಿಂಗಳು ಸತ್ಯಾಗ್ರಹ ಮಾಡಿದರೂ ಬಗ್ಗುವುದಿಲ್ಲ ಎಂಬ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಇದು ದೌರ್ಜನ್ಯದ ಪರಮಾವಧಿ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು ಎಂದರು.

ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು: ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್
Follow us on

ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮ ಸಾರಿಗೆ ನೌಕರರಿಗಿಲ್ಲ. ವೇತನ ನೀಡದೇ ಸರ್ಕಾರ ಸತಾಯಿಸುತ್ತಿದೆ. ವೇತನ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುವುದು ಸರಿಯಲ್ಲ ಎಂದು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ವೇತನ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್ ವಿರುದ್ಧ ಸಾರಿಗೆ ನೌಕರ ತಿಪ್ಪೇಸ್ವಾಮಿ ಮೊದಲ ದೂರು ನೀಡಲಿದ್ದಾರೆ. ಇದೇ ರೀತಿ ರಾಜ್ಯದೆಲ್ಲೆಡೆ ವೇತನ ನೀಡಿಲ್ಲವೆಂದು ದೂರು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಾರಿಗೆ ಬಸ್ ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ ಚಾಲಕರ ಮೂಲಕ ಬಸ್ ಓಡಿಸುವುದು ಯಶಸ್ವಿ ಆಗುವುದಿಲ್ಲ. ಅದೆಷ್ಟೇ ಪ್ರಯತ್ನ ಮಾಡಿದರೂ ಸಫಲವಾಗುವುದಿಲ್ಲ ಎಂದರು. ಇನ್ನೂ ನೌಕರರು ತಿಂಗಳು ಸತ್ಯಾಗ್ರಹ ಮಾಡಿದರೂ ಬಗ್ಗುವುದಿಲ್ಲ ಎಂಬ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಇದು ದೌರ್ಜನ್ಯದ ಪರಮಾವಧಿ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು. ಸಿಎಂ ಇನ್ನೊಮ್ಮೆ ಪರಿಶೀಲಿಸಲಿ. ಇದೀಗ ಮೊಂಡುವಾದ ಮಾಡುವುದು ಸರಿಯಲ್ಲ. ನ್ಯಾಯವಾದ ದಾರಿಯಲ್ಲಿ ಬರಬೇಕು ಎಂದರು.

ಕೃಷಿ ಕುಟುಂಬದಿಂದ ಬಂದಿರುವವನು ನಾನು. ರೈತ ಚಳುವಳಿಯಲ್ಲಿ ಬೆಳೆದು ಬಂದಿರುವವನು ನಾನು. ಬೆಳಗಾವಿಯಲ್ಲಿ ರೈತರ ಸಭೆಯ ವೇಳೆಯಲ್ಲೆ ನನ್ನನ್ನು ಅರೆಸ್ಟ್ ಮಾಡಲಾಗಿತ್ತು. ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನು ತರುತ್ತಿದೆ. ಇವೆಲ್ಲಾ ಕೃಷಿ ಕ್ಷೇತ್ರಕ್ಕೆ ಮಾರಕವಾಗಿವೆ. ರಸಗೊಬ್ಬರದ ದರವನ್ನ 700 ರೂ. ಹೆಚ್ಚಿಗೆ ಮಾಡಿದೆ. ಸರ್ಕಾರ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬುವುದನ್ನೆ ಗಮನದಲ್ಲಿ ಇಟ್ಟುಕೊಂಡಿದೆ. ರೈತರ ಸಮಸ್ಯೆಯನ್ನ ಬಗಹರಿಸಲು ಸರ್ಕಾರ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾರಿಗೆ ಮುಷ್ಕರದ ಹಿಂದೆ ವೈಯಕ್ತಿಕ ಲಾಭ ಇದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಇಲ್ಲಿಗೆ ಸೇವೆ ಮಾಡಲು ಬಂದಿದ್ದೇನೆ. ಹಣಕಾಸಿನ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಉದ್ದೇಶ ಒಂದೇ.. ವೇತನ ತಾರತಮ್ಯ ಸರಿ ಮಾಡಬೇಕು. ನಾನೇನಾದರೂ ಇದರಲ್ಲಿ ಲಾಭ ಪಡೆದರೆ ವೈಯಕ್ತಿಕ ಚಾರಿತ್ರ್ಯಾ ಹಾಳಾಗುತ್ತದೆ. ನನ್ನ ವ್ಯಕ್ತಿತ್ವವೂ ಹಾಳಾಗುತ್ತದೆ. ನನಗೆ ಅಂತಹ ಉದ್ದೇಶವಿಲ್ಲ. ನಾನೇನಾದರೂ ವೈಯಕ್ತಿಕ ಲಾಭವನ್ನು ಪಡೆಯುತ್ತಿರುವುದು ಗಮನಕ್ಕೆ ಬಂದರೆ ರಾಜ್ಯ ಜನತೆಗೆ ತಿಳಿಸಬಹುದು ಎಂದು ಹೇಳಿದರು.

ಇದನ್ನೂ ಓದಿ

ಸಾರಿಗೆ ನೌಕರರಿಂದ ಯುಗಾದಿ ದಿನವೇ ಭಿಕ್ಷಾಟನಾ ಚಳವಳಿ.. ಹಬ್ಬಕ್ಕೂ ಸಂಬಳ ನೀಡಿಲ್ಲವೆಂದು ಆಕ್ರೋಶ

ಯುಗಾದಿ ಹಬ್ಬದಂದೆ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ..

‘ಮದಗಜ’ ಶ್ರೀಮುರಳಿಯ ಇನ್ನೊಂದು ಮುಖ ಬಹಿರಂಗ! ಆಶಿಕಾ ಜೊತೆಗಿನ ರೊಮ್ಯಾಂಟಿಕ್​ ವಿಡಿಯೋ​ ವೈರಲ್​

(Kodihalli Chandrasekhar says transport workers have no happy celebration of Ugadi)

Published On - 1:37 pm, Tue, 13 April 21