ಸೂರ್ಯನ ಸುತ್ತಲೂ ಕಾಮನಬಿಲ್ಲು; ಯುಗಾದಿ ದಿನ ಪ್ರಕೃತಿ ಸೊಬಗಿನ ಅನಾವರಣ
ಇಂದಿನ ದಿನದ ಪ್ರಕೃತಿ ಸೊಬಗಿನ ಅನಾವಣ ಕಂಡ ಜನರ ಮುಖದಲ್ಲಿ ಖುಷಿ ಮನೆಮಾಡಿದೆ. ಬೆಂಗಳೂರು ನಗರದ ಜನರ ಹಬ್ಬದ ಮೆರುಗು ಇನ್ನೂ ಹೆಚ್ಚಾಗಿದೆ.
ಬೆಂಗಳೂರು: ನಗರದಲ್ಲಿ ಹೊಸ ವರುಷದ ಯುಗಾದಿ ಹಬ್ಬ ನಡೆಯುತ್ತಿದೆ. ಮನೆಗಳಲ್ಲಿ ಹೊಸ ಉಡುಗೆ ತೊಟ್ಟು ಜನರು ಸಂತೋಷದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುಳಕಗೊಳಿಸುವ ದೃಶ್ಯವೊಂದು ನಗರದ ಜನರಿಗೆ ಕಂಡಿದೆ. ಯುಗಾದಿ ದಿನದ ಪ್ರಕೃತಿ ಸೊಬಗಿನ ಅನಾವರಣ ಕಂಡ ಜನರ ಮುಖದಲ್ಲಿ ಖುಷಿ ಮನೆಮಾಡಿದೆ. ಹಬ್ಬದ ಮೆರಗು ಇನ್ನೂ ಹೆಚ್ಚಾಗಿದೆ.
ಹಬ್ಬಕ್ಕೆ ಬೆಳಿಗ್ಗೆಯೇ ಇದ್ದು, ಎಣ್ಣೆ ಸ್ನಾನ ಮಾಡಿ. ಮನೆಯನ್ನು ಹೂವುಗಳಿಂದ ಅಲಂಕರಿಸಿ ಪೂಜೆಗೆ ಸಿದ್ಧತೆ ಮಾಡಲಾಗಿದೆ. ಬೇವು-ಬೆಲ್ಲವನ್ನು ಸಿದ್ಧಪಡಿಸಿ ಮನೆಯವರೆಲ್ಲ ಪ್ರಸಾದ ಸ್ವೀಕರಿಸಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿಕೊಂಡಿದ್ದಾರೆ. ಸಕಲ ಕಷ್ಟಗಳನ್ನು ಎದುರಿಸುವ ಶಕ್ತಿ ನಮ್ಮದಾಗಲೀ, ವರ್ಷವಿಡೀ ಈ ದಿನದಂತೆ ಸಂತೋಷ, ನೆಮ್ಮದಿಂದ ಜೀವನ ಸಾಗಲಿ ಎಂಬ ಪ್ರಾರ್ಥನೆಯಲ್ಲಿ ನಗರದ ಜನರಿದ್ದಾಗಲೇ ಸೂರ್ಯ ದೇವನು ವಿಶಿಷ್ಟವಾಗಿ ಕಂಗೊಳಿಸುತ್ತಿದ್ದ ದೃಶ್ಯ ಭಕ್ತರಿಗೆ ಖುಷಿ ನೀಡಿದೆ.
ಪ್ರಕೃತಿಯ ನಡುವೆ ಸೂರ್ಯ ಕಂಗೊಳಿಸುತ್ತಿದ್ದಾನೆ. ವಿವಿಧ ಬಣ್ಣಗಳಿಂದ ಕೂಡಿದ ಕಾಮನ ಬಿಲ್ಲು ಸೂರ್ಯನ ಸುತ್ತ ಆವರಿಸಿದೆ. ಜನರೆಲ್ಲಾ ಬಾಗಿಲಿನತ್ತ ಬಂದು ಮೈನವಿರೇಳಿಸುವ ದೃಶ್ಯ ಕಂಡು ಖುಷಿ ಪಟ್ಟಿದ್ದಾರೆ. ಅದರಲ್ಲೂ ಯುಗಾದಿ ಹಬ್ಬದಂದು ಕಾಮನಬಿಲ್ಲು ಕಂಡ ಜನರ ಖುಷಿ ಮುಗಿಲು ಮುಟ್ಟಿದೆ.
ಯುಗಾದಿ ಹಬ್ಬ ಅಂದ್ರೆ ಹೊಸತನದ ಹುರುಪು. ಎಣ್ಣೆ ಸ್ನಾನ , ಹೊಸ ಉಡುಗೆ ತೊಡುವ ಸಂಭ್ರಮ, ಮನೆ ಮನೆಗಳಲ್ಲಿ ಹಸಿರು ತೋರಣಗಳ ಅಲಂಕಾರ. ಹೋಳಿಗೆಯ ಘಮಲು ಇರುತ್ತೆ. ಹಿಂದೂ ಧರ್ಮದ ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ. ಯುಗಾದಿಯ ದಿನ ಕೆಲ ಆಚರಣೆಗಳನ್ನ ತಪ್ಪದೇ ಪಾಲಿಸಬೇಕು. ಆ ಆಚರಣೆಗಳನ್ನ ಪಾಲಿಸುವುದರಿಂದ ವರ್ಷವಿಡೀ ಶುಭ ಫಲಗಳನ್ನ ಕಾಣಬಹುದೆಂಬ ನಂಬಿಕೆ ಆದಿಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ. ಧರ್ಮಸಿಂಧು ಎಂಬ ಗ್ರಂಥದಲ್ಲಿ ಯುಗಾದಿ ಹಬ್ಬಕ್ಕೆ ಐದು ವಿಧಿಗಳನ್ನ ಸೂಚಿಸಲಾಗಿದೆ.
ಯುಗ ಯುಗಗಳಿಂದ ಆಚರಿಸಿಕೊಂಡು ಬರುತ್ತಿರುವ ಪ್ರಕೃತಿಯಲ್ಲಿ, ಜೀವ ಸಂಕುಲದಲ್ಲಿ ಬದಲಾವಣೆ ತರುವ ಯುಗಾದಿ ಹಬ್ಬದ ಆಚರಣೆಯನ್ನ ಯಾವ ರೀತಿ ಮಾಡಬೇಕು. ಆದಿಕಾಲದಿಂದಲೂ ಪಾಲಿಸಕೊಂಡು ಬರುತ್ತಿರುವ ನಿಯಮಗಳೇನು, ಆಚರಣೆಗಳೇನು, ಅವುಗಳನ್ನು ಹೇಗೆ ಆಚರಿಸಬೇಕೆಂಬುದರ ಬಗ್ಗೆ ಧರ್ಮಗ್ರಂಥಗಳಲ್ಲಿ , ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Happy Ugadi 2021: ಯುಗಾದಿ ಹಬ್ಬದ ಹಿಂದಿದೆ ಯುಗದ ಪ್ರಾರಂಭದ ಕಥೆ; ಹಬ್ಬದ ವಿಶೇಷ ತಿಳಿದುಕೊಳ್ಳಿ