ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಕಡಿಮೆ ಆಗುವ ಸಾಧ್ಯತೆಯಿದೆ: ಕೇಂದ್ರ ಸಚಿವ ಸದಾನಂದ ಗೌಡ

ಕರ್ನಾಟಕದಲ್ಲಿ ಕೊರೊನಾ ಔಷಧಿ ಕೊರತೆಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು ರೆಮ್​ಡಿಸಿವಿರ್ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬಂದಿದ್ದರಿಂದ ರೆಮ್​ಡಿಸಿವಿರ್ ರಪ್ತು ಮಾಡಲಾಗುತ್ತಿತ್ತು. ಸದ್ಯಕ್ಕೆ ರೆಮ್​ಡಿಸಿವಿರ್ ರಫ್ತು ಬ್ಯಾನ್ ಮಾಡಲಾಗಿದೆ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಕಡಿಮೆ ಆಗುವ ಸಾಧ್ಯತೆಯಿದೆ: ಕೇಂದ್ರ ಸಚಿವ ಸದಾನಂದ ಗೌಡ
D.V.ಸದಾನಂದ ಗೌಡ
Follow us
sandhya thejappa
|

Updated on:Apr 13, 2021 | 12:28 PM

ದೆಹಲಿ: ಕೊರೊನಾ ವೇಳೆ ಯೂರಿಯಾಗಿಂತ ಡಿಎಪಿ ಹೆಚ್ಚು ಬಳಕೆಯಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 12 ಲಕ್ಷ ಮೆಟ್ರಿಕನ್ ಟನ್ ಡಿಎಪಿ ಹೆಚ್ಚು ಅವಶ್ಯಕತೆ ಇದೆ. ಆದರೆ ಈ ವರ್ಷ ರಸಗೊಬ್ಬರಗಳ ಕೊರತೆ ಇರುವುದಿಲ್ಲ. ರಸಗೊಬ್ಬರ ಬೆಲೆ ಏರಿಕೆ ಭಯ ರೈತರಲ್ಲಿ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಕಚ್ಚಾ ದರ ಹೆಚ್ಚಾಗಿದೆ ಎಂದು ಹೇಳಿದ ಸದಾನಂದಗೌಡ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕಡಿಮೆ ಆಗುವ ಸಾಧ್ಯತೆ ಇದೆ. ಒಂದು ತಿಂಗಳ ಒಳಗೆ ದರ ಕಡಿಮೆ ಆಗಲಿದೆ. ಮುಂದಿನ ಎರಡುವರೆ ತಿಂಗಳಿಗೆ ಬೇಕಾಗುವಷ್ಟು ಗೊಬ್ಬರ ದಾಸ್ತಾನು ಇದೆ. ಹಳೆಯ ದರದಲ್ಲಿ ರಸಗೊಬ್ಬರ ಮಾರಾಟಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಔಷಧಿ ಕೊರತೆಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು ರೆಮ್​ಡಿಸಿವಿರ್ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬಂದಿದ್ದರಿಂದ ರೆಮ್​ಡಿಸಿವಿರ್ ರಪ್ತು ಮಾಡಲಾಗುತ್ತಿತ್ತು. ಸದ್ಯಕ್ಕೆ ರೆಮ್​ಡಿಸಿವಿರ್ ರಫ್ತು ಬ್ಯಾನ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಔಷಧಿಯ ಕೊರತೆ ಎದುರಾಗಲ್ಲ. ಕರ್ನಾಟಕದಲ್ಲಿ ವೆಂಟಿಲೇಟರ್​ಗಳ ಕೊರತೆಯೂ ಆಗಲ್ಲ ಎಂದರು. ನಂತರ 3 ಲಕ್ಷ ವೆಂಟಿಲೇಟರ್​ಗಳ ಉತ್ಪಾದನೆ ಆಗುತ್ತಿದೆ ಎಂದು ತಿಳಿಸಿದರು.

ಕುಮಾರಸ್ವಾಮಿ ವಿರುದ್ಧ ಸದಾನಂದಗೌಡ ವಾಗ್ದಾಳಿ ಕುಮಾರಸ್ವಾಮಿ ಅಲ್ಪತನದ ಮಾತುಗಳನ್ನು ಆಡಿದ್ದಾರೆ. ಅವರ ತಂದೆ ಮಣ್ಣಿನ ಮಗ ಅಂತಾರೆ. ಕೇಂದ್ರದಿಂದ ಬರುವ ಗೊಬ್ಬರದ ಸಬ್ಸಿಡಿ ಬಗ್ಗೆ ಗೊತ್ತಿಲ್ಲ. ಬಾಯಿಗೆ ಬಂದ ಹಾಗೆ ಕುಮಾರಸ್ವಾಮಿ ಮಾತಾಡುತ್ತಾರೆ. ಕುಮಾರಸ್ವಾಮಿಯೇ ಚರ್ಚಾಸ್ಪದ ವ್ಯಕ್ತಿ ಎಂದು ಸದಾನಂದ ಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ

ಲಾಕ್​ಡೌನ್​ ಇಲ್ಲದಿದ್ದರೂ ಕಠಿಣ ಕ್ರಮ ಜಾರಿಗೊಳಿಸಿ, ಜನ ಹಳ್ಳಿಗೆ ಹೋಗುವುದನ್ನು ತಡೆಯಿರಿ: ತಾಂತ್ರಿಕ ಸಲಹಾ ಸಮಿತಿ ಸೂಚನೆ

ಯುಗಾದಿ ಹಬ್ಬಕ್ಕೆ ಲವರ್​ ಬಾಯ್​ ಲುಕ್​ನಲ್ಲಿ ಬಂದ ಪ್ರಭಾಸ್​! ರಾಧೆ ಶ್ಯಾಮ್​ ಹೊಸ ಪೋಸ್ಟರ್​ ವೈರಲ್​

(Sadananda Gowda said fertilizer prices could be reduced in the international market)

Published On - 12:25 pm, Tue, 13 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್