Happy Ugadi 2021: ಯುಗಾದಿ ಹಬ್ಬದ ಹಿಂದಿದೆ ಯುಗದ ಪ್ರಾರಂಭದ ಕಥೆ; ಹಬ್ಬದ ವಿಶೇಷ ತಿಳಿದುಕೊಳ್ಳಿ

Ugadi Festival 2021: ಬ್ರಹ್ಮಾಂಡವು ಸೃಷ್ಟಿಯಾದ ದಿನ ಯುಗಾದಿ. ಈ ದಿನದಂದು ಬೇವೂ ಬೆಲ್ಲದ ಸೇವನೆಯ ಹಿಂದಿನ ಮರ್ಮವೇನು? ಯುಗಾದಿಯಂದು ಯಾವ ನಿಯಮಗಳನ್ನ ಪಾಲಿಸಿದರೆ ಸಮೃದ್ಧಿ, ಈ ಹಬ್ಬದಲ್ಲಿನ ಆಚರಣೆಗಳ ಹಿಂದಿನ ಮಹತ್ವವೇನು? ಇದೆಲ್ಲದರ ಮಾಹಿತಿ ಇಲ್ಲಿದೆ.

Happy Ugadi 2021: ಯುಗಾದಿ ಹಬ್ಬದ ಹಿಂದಿದೆ ಯುಗದ ಪ್ರಾರಂಭದ ಕಥೆ; ಹಬ್ಬದ ವಿಶೇಷ ತಿಳಿದುಕೊಳ್ಳಿ
ಯುಗಾದಿ ಸಂಭ್ರಮ
Follow us
ಆಯೇಷಾ ಬಾನು
|

Updated on: Apr 13, 2021 | 6:37 AM

ಯುಗಾದಿ ಮರಳಿ ಮರಳಿ ಬರುತಿದೆ ಎಂಬಂತೆ ಇದೀಗ ಮತ್ತೆ ಮರಳಿ ಬಂದಿದೆ. ಕೊರೊನಾದ ನಡುವೆಯೂ ಕೆಲವೊಂದು ನಿಯಮಗಳನ್ನ ಪಾಲಿಸಿ ಹಬ್ಬವನ್ನ ಅಚರಿಸಿ ಸಂತಸವನ್ನ, ಸಮೃದ್ದಿಯನ್ನ ಕಾಣಿರೆಂದು ಹೇಳುತ್ತಿದೆ. ಯುಗ ಯುಗಗಳಿಂದ ಆಚರಿಸಿಕೊಂಡು ಬರುತ್ತಿರುವ ಯುಗಾದಿಯ ವಿಶೇಷತೆ ಬಗ್ಗೆ ಹೇಳಿದಷ್ಟೂ ಹೇಳಬೇಕಾದದ್ದು ಇದೆ.

ಶಾರ್ವರಿ ನಾಮ ಸಂವತ್ಸರ ಕಳೆದು ಪ್ಲವನಾಮ ಸಂವತ್ಸರಕ್ಕೆ ಪಾದಾರ್ಪಣೆ ಹೊಸ ವರ್ಷದ ಮೊದಲ ದಿನ ಹಾಗೂ ಬ್ರಹ್ಮಾಂಡವು ಸೃಷ್ಟಿಯಾದ ದಿನವಾಗಿರುವ ಯುಗಾದಿಯಂದು ಪ್ರಕೃತಿ ಮಾತೆಯು ನವಚೈತನ್ಯವನ್ನ ತುಂಬಿಕೊಂಡು, ಪೂರ್ಣ ಪ್ರಮಾಣದ ಬಿಸಿಲಿನಲ್ಲಿ ಹಸಿರು ಹಸಿರಾಗಿ ಕಂಗೊಳಿಸುತ್ತಾ ಫಲಪುಷ್ಪಗಳನ್ನ ಮನುಕುಲಕ್ಕೆ ಉಡುಗೊರೆಯಾಗಿ ನೀಡುವ ಕಾಲವಿದು. ನಾವೆಲ್ಲಾ ಶಾರ್ವರಿ ನಾಮ ಸಂವತ್ಸರ ಕಳೆದು ಪ್ಲವನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ವಸಂತ ಋತುವಿನ ಆರಂಭದ ದಿನವಾದ, ಚೈತ್ರ ಮಾಸ ಶುಕ್ಲ ಪಕ್ಷದ ಪಾಡ್ಯದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.

ವೇದಗಳ ಪ್ರಕಾರ ಧರ್ಮಗ್ರಂಥಗಳ ಪ್ರಕಾರ ಯುಗಾದಿ ಹಬ್ಬವು ಹಲವು ಮಹತ್ತರಗಳಿಗೆ ಸಾಕ್ಷಿಯಾಗಿದೆ. ಬ್ರಹ್ಮ ದೇವ ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆ ಅಂದ್ರೆ ಯಗಾದಿಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನಂತೆ. ಬ್ರಹ್ಮ ದೇವನು ಅಂದೇ ಗ್ರಹ , ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನ ಸೃಷ್ಟಿಸಿ ಕಾಲಗಣೆನಯನ್ನು ಆರಂಭಿಸಿದ. ನಂತರ ಜೀವರಾಶಿ , ಜಲರಾಶಿ , ಸಸ್ಯರಾಶಿ ಬೆಟ್ಟ ಗುಡ್ಡಗಳನ್ನ ಸೃಷ್ಟಿಸಲು ಆರಂಭಿಸಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಮಹಾವಿಷ್ಣು ಮತ್ಸ್ಯಾವತಾರ ತಾಳಿದ ದಿನವಿದು ಯುಗಗಳಲ್ಲಿ ಮೊದಲ ಯುಗ ಸತ್ಯಯುಗ. ಇಂತಹ ಮೊದಲ ಯುಗದ ಆರಂಭದ ದಿನವೇ ಯುಗಾದಿ. ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಮೊದಲನೇ ಅವತಾರ ಮತ್ಸ್ಯಾವತಾರ. ಆ ಆವತಾರವನ್ನು ತಾಳಿದ್ದು ಇದೇ ದಿನವೆಂದು ವೇದಗಳಲ್ಲಿ ಉಲ್ಲೇಖವಾಗಿದೆ. ಬ್ರಹ್ಮನಿಂದ ನಾಲ್ಕು ವೇದಗಳನ್ನು ಕದ್ದಂತಹ ರಕ್ಕಸ ಸೋಮಕಾಸುರ ಸಮುದ್ರದೊಳಗೆ ಅವಿತಿರುತ್ತಾನೆ. ಆಗ ವಿಷ್ಣು ಮತ್ಸ್ಯಾವತಾರವನ್ನ ತಾಳಿ ನೀರಿನಲ್ಲಿ ಅವಿತಿದ್ದ ಸೋಮಕಾಸುರನನ್ನ ಸಂಹರಿಸಿ ನಾಲ್ಕು ವೇದಗಳನ್ನ ಬ್ರಹ್ಮ ದೇವರಿಗೆ ಹಿಂತಿರುಗಿಸುತ್ತಾರೆ. ಹಾಗೆ ಬ್ರಹ್ಮ ದೇವರು ವೇದಗಳನ್ನು ಹಿಂಪಡೆದ ದಿನವೇ ಯುಗಾದಿ.

ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ರಾಮ ರಾಜ್ಯ ಸ್ಥಾಪಿಸಿದ ದಿನ ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತಾ ಸಮೇತ ಶ್ರೀರಾಮಚಂದ್ರರು ಅಯೋಧ್ಯೆಗೆ ಮರಳುತ್ತಾರೆ. ಅಯೋಧ್ಯೆಯಲ್ಲಿ ರಾಜ್ಯಭಾರ ಆರಂಭಿಸುತ್ತಾರೆ. ರಾಮರಾಜ್ಯ ಆರಂಭವಾದ ದಿನವೇ ಯುಗಾದಿಯ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ. ದ್ವಾಪರ ಯುಗವು ಕೊನೆಯಾಗಿ ಯುಗಾದಿಯ ದಿನ ಕಲಿಯುಗವು ಆರಂಭವಾಯಿತೆಂದು ವೇದವ್ಯಾಸರು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಶಾಸ್ತ್ರಗಳ ಪ್ರಕಾರ, ವೇದಗಳ ಪ್ರಕಾರ ಯುಗಾದಿಯು ಹೊಸ ವರ್ಷದ ಮೊದಲ ದಿನವಾಗಿದೆ. ಬಹಳಷ್ಟು ಶ್ರೇಷ್ಠತೆಯಿಂದ ಕೂಡಿದೆ. ನಾನಾ ಪ್ರಥಮಗಳಿಗೆ ಸಾಕ್ಷಿಯಾಗಿದೆ.

ಯುಗ ಯುಗಗಳಿಂದ ಆಚರಿಸಿಕೊಂಡು ಬರುತ್ತಿರುವ ಪ್ರಕೃತಿಯಲ್ಲಿ, ಜೀವ ಸಂಕುಲದಲ್ಲಿ ಬದಲಾವಣೆ ತರುವ ಯುಗಾದಿ ಹಬ್ಬದ ಆಚರಣೆಯನ್ನ ಯಾವ ರೀತಿ ಮಾಡಬೇಕು. ಆದಿಕಾಲದಿಂದಲೂ ಪಾಲಿಸಕೊಂಡು ಬರುತ್ತಿರುವ ನಿಯಮಗಳೇನು, ಆಚರಣೆಗಳೇನು, ಅವುಗಳನ್ನು ಹೇಗೆ ಆಚರಿಸಬೇಕೆಂಬುದರ ಬಗ್ಗೆ ಧರ್ಮಗ್ರಂಥಗಳಲ್ಲಿ , ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಯುಗಾದಿ ಹಬ್ಬ ಅಂದ್ರೆ ಹೊಸತನದ ಹುರುಪು. ಎಣ್ಣೆ ಸ್ನಾನ , ಹೊಸ ಉಡುಗೆ ತೊಡುವ ಸಂಭ್ರಮ, ಮನೆ ಮನೆಗಳಲ್ಲಿ ಹಸಿರು ತೋರಣಗಳ ಅಲಂಕಾರ. ಹೋಳಿಗೆಯ ಘಮಲು ಇರುತ್ತೆ. ಹಿಂದೂ ಧರ್ಮದ ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ. ಯುಗಾದಿಯ ದಿನ ಕೆಲ ಆಚರಣೆಗಳನ್ನ ತಪ್ಪದೇ ಪಾಲಿಸಬೇಕು. ಆ ಆಚರಣೆಗಳನ್ನ ಪಾಲಿಸುವುದರಿಂದ ವರ್ಷವಿಡೀ ಶುಭ ಫಲಗಳನ್ನ ಕಾಣಬಹುದೆಂಬ ನಂಬಿಕೆ ಆದಿಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ. ಧರ್ಮಸಿಂಧು ಎಂಬ ಗ್ರಂಥದಲ್ಲಿ ಯುಗಾದಿ ಹಬ್ಬಕ್ಕೆ ಐದು ವಿಧಿಗಳನ್ನ ಸೂಚಿಸಲಾಗಿದೆ.

MATSYA LORD RAMA AVATAR

ಮತ್ಸ್ಯಾವತಾರ ಹಾಗೂ ಶ್ರೀರಾಮ ಪಟ್ಟಾಭಿಷೇಕ

ಧರ್ಮಸಿಂಧು ಗ್ರಂಥದಲ್ಲಿನ ನಿಯಮಗಳು ಮುಂಜಾನೆ ಎದ್ದ ಕೂಡಲೇ ತುಪ್ಪದ ಪಾತ್ರೆಯಲ್ಲಿ ಮುಖ ನೋಡಿಕೊಳ್ಳಬೇಕು ಧರ್ಮಸಿಂಧು ಗ್ರಂಥದ ಪ್ರಕಾರ ಯುಗಾದಿ ಹಬ್ಬದಂದು ಮುಂಜಾನೆ ಎದ್ದ ಕೂಡಲೇ ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪವನ್ನ ಹಾಕಿ ಮನೆಮಂದಿಯೆಲ್ಲಾ ಅದರಲ್ಲಿ ಮುಖ ನೋಡಿಕೊಳ್ಳಬೇಕು. ಹಾಗೆ ಮಾಡುವುದರಿಂದ ದೃಷ್ಟಿ ನಿವಾರಣೆಯಾಗುತ್ತೆ, ಹಿಂದಿನ ವರ್ಷದಲ್ಲಿ ಅಂಟಿಕೊಂಡ ದೋಶಗಳು ನಿವಾರಣೆಯಾಗುತ್ತವೆಂಬ ಮಾತಿದೆ.

ತೈಲ ಅಭ್ಯಂಜನ ಮಾಡಬೇಕು ಯುಗಾದಿ ಹಬ್ಬದಂದು ಅಭ್ಯಂಜನ ಸ್ನಾನ ಮಾಡುವ ವಿಶೇಷ ಸಂಪ್ರದಾಯವಿದೆ. ಇದನ್ನು ನಾನಾ ಗ್ರಂಥಗಳಲ್ಲಿ, ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಯುಗಾದಿಯಂದು ಮೈಗೆಲ್ಲಾ ಹರಳೆಣ್ಣೆ ಹಚ್ಚಿಕೊಂಡು ಕೆಲ ಕಾಲ ಬಿಸಿಲಿಗೆ ಮೈಯೊಡ್ಡಿ ತದನಂತರ ಸ್ನಾನ ಮಾಡುವ ಸಂಪ್ರದಾಯವಿದೆ.

ಅಭ್ಯಂಜನ ಸ್ನಾನ ಕೇವಲ ಸಂಪ್ರದಾಯವಲ್ಲದೆ ವೈಜ್ಞಾನಿಕ ಹಿನ್ನಲೆಯನ್ನ ಪಡೆದಿದೆ. ಹರಳೆಣ್ಣೆ ದೇಹವನ್ನು ತಂಪಾಗಿಸುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದೆ.

ಮನೆದೇವರನ್ನು, ಇಷ್ಟದೇವರನ್ನು ಪೂಜಿಸಿ ತ್ರಿಮೂರ್ತಿಗಳನ್ನು ಸ್ಮರಿಸಬೇಕು ಅಭ್ಯಂಜನ ಸ್ನಾನದ ಬಳಿಕ ಹೊಸ ಬಟ್ಟೆ ಧರಿಸಿ ಮನೆಯವರೆಲ್ಲಾ ಕುಲದೇವರನ್ನು, ಇಷ್ಟ ದೇವರನ್ನು ಆರಾಧನೆ ಮಾಡಲಾಗುತ್ತದೆ. ಈ ಸಮಯದಲ್ಲಿ ತ್ರಿಮೂರ್ತಿಗಳನ್ನು ಭಕ್ತಿಯಿಂದ ನಮಿಸಿದರೆ ವರ್ಷವಿಡೀ ದೈವಕೃಪೆ, ಕುಲದೇವರ ಕೃಪೆ ನಮ್ಮನ್ನು ಕಾಯುತ್ತೆಂಬ ಮಾತನ್ನು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಪಂಚಾಂಗ ಶ್ರವಣ ಮಾಡಬೇಕು ಯುಗಾದಿ ಹಬ್ಬದಂದು ಪಂಚಾಗ ಪಠಣ ಹಾಗೂ ಶ್ರವಣದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆಂಬ ಮಾತನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಕಾರ್ಯದಿಂದ, ತಿಥಿಯ ಬಗ್ಗೆ ತಿಳಿದುಕೊಳ್ಳುವುದರಿಂದ ಶ್ರೇಯಸ್ಸು. ವಾರದ ಸ್ಪಷ್ಟ ಕಲ್ಪನೆಯಿಂದ ಆಯುಷ್ಯವೃದ್ದಿ ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಪಾಪ ಪರಿಹಾರ. ಯೋಗದ ಬಗ್ಗೆ ಅರಿತರೆ ರೋಗ ನಿವಾರಣೆ. ಕರಣದ ಬಗ್ಗೆ ತಿಳಿಯುವುದರಿಂದ ಕಾರ್ಯ ಸಿದ್ದಿಯಾಗುತ್ತೆ.

ಬೇವು ಬೆಲ್ಲ ಸೇವಿಸಬೇಕು ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲ ಸೇವಿಸುವ ಆಚರಣೆಯು ಇಡೀ ಮನುಕುಲಕ್ಕೆ ಒಂದು ಪಾಠವನ್ನ ಹೇಳುತ್ತದೆ. ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು , ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು. ಇದರ ಜೊತೆಗೆ ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಮಾತನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಆ ಕುರಿತಾದ ಒಂದು ಶ್ಲೋಕವು ಹೀಗಿದೆ . ಈ ಶ್ಲೋಕವನ್ನ ಬೆವು ಬೆಲ್ಲ ಸೇವಿಸುವಾಗ ಹೇಳಿಕೊಳ್ಳಬೇಕೆಂಬ ಮಾತನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಶತಾಯುರ್ವಜ್ರದೇಹಾಯ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ

ಬೇವು ಬೆಲ್ಲ ಸೇವಿಸುವ ಸಮಯದಲ್ಲಿ ಹೇಳಬೇಕಾದ ಈ ಮಂತ್ರ ಅತ್ಯಂತ ಅರ್ಥಪೂರ್ಣವಾಗಿದೆ. ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತಿನ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾಣೆಗಾಗಿಯೂ ಬೇವೂ ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಬೇವು ಬೆಲ್ಲ ಸೇವಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಬಹಳಷ್ಟು ಮಹತ್ತರಗಳಿಗೆ ಸಾಕ್ಷಿಯಾಗಿರುವ, ಯುಗ ಯುಗಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಯುಗಾದಿ ಹಬ್ಬವನ್ನ ನೆಮ್ಮದಿಯಿಂದ ಆಚರಿಸಿ, ಸಂತಸದಿಂದ ಆಚರಿಸಿ.

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಆಚರಣೆ ಹೇಗೆ? ಎಣ್ಣೆ ಸ್ನಾನ ಮಾಡಿ, ಬೇವು-ಬೆಲ್ಲ ಸವಿಯುವಾಗ ಹೇಳಬೇಕಾದ ಮಂತ್ರ ಇದು

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮೆರಗು ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆಗಳು

(Ugadi 2021 history purana interesting facts belief behind Yugadi Celebration Ugadi Festival)

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ