AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2021: ಯುಗಾದಿ ಹಬ್ಬದ ಆಚರಣೆ ಹೇಗೆ? ಎಣ್ಣೆ ಸ್ನಾನ ಮಾಡಿ, ಬೇವು-ಬೆಲ್ಲ ಸವಿಯುವಾಗ ಹೇಳಬೇಕಾದ ಮಂತ್ರ ಇದು

Ugadi Festival 2021: ಹಬ್ಬದ ಆಚರಣೆ ಹೇಗೆ ಎಂದು ಹಲವು ಮಂದಿಗೆ ಗೊಂದಲವಿರಬಹುದು. ಇದಕ್ಕೆ ಸಂಬಂಧಿಸಿ ಯುಗಾದಿ ಆಚರಿಸುವ ವಿಧಾನಗಳ ಬಗ್ಗೆ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.

Ugadi 2021: ಯುಗಾದಿ ಹಬ್ಬದ ಆಚರಣೆ ಹೇಗೆ? ಎಣ್ಣೆ ಸ್ನಾನ ಮಾಡಿ, ಬೇವು-ಬೆಲ್ಲ ಸವಿಯುವಾಗ ಹೇಳಬೇಕಾದ ಮಂತ್ರ ಇದು
ಯುಗಾದಿ ಸಂಭ್ರಮ
TV9 Web
| Edited By: |

Updated on:Apr 05, 2022 | 12:38 PM

Share

ಯುಗಾದಿಯು ಭಾರತದ ಹಲವು ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಆಚರಿಸುವ ಸಂಭ್ರಮದ ಹಬ್ಬವಾಗಿದೆ. ಯುಗಾದಿ ಎಂದರೆ ಅದು ಹಿಂದೂ ಸಂಪ್ರದಾಯದಂತೆ ಹೊಸ ವರ್ಷ. ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ಈ ಹಬ್ಬವನ್ನು ವಿಷು ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿ ಪಾಡ್ವ ಎಂದು ಕರೆಯುತ್ತಾರೆ. ಯುಗಾದಿಯು ಹೊಸ ವರ್ಷದ ಆರಂಭವಾಗುವ ಜೊತೆಗೆ ಹೊಸ ಯೋಚನೆಗಳನ್ನು, ಹೊಸ ವರ್ಷದ ಸುಭೀಕ್ಷೆಯನ್ನು ಬೇಡುವ, ಒಳಿತನ್ನು ಹಾರೈಸಿ ಸಂಭ್ರಮಿಸುವ ಪರ್ವಕಾಲವಾಗಿದೆ.

ಯುಗಾದಿ ಹಬ್ಬವನ್ನು ಈ ವರ್ಷ ಏಪ್ರಿಲ್ 13ರಂದು ಆಚರಿಸಲಾಗುತ್ತದೆ. ಹೊಸ ಬಟ್ಟೆ, ಸಿಹಿತಿಂಡಿಗಳು, ಕುಟುಂಬದ ಜೊತೆಗೆ ಒಡನಾಟ.. ಇತ್ಯಾದಿ ವಿಚಾರಗಳನ್ನು ಹೊರತುಪಡಿಸಿ ಹಬ್ಬದ ಆಚರಣೆ ಹೇಗೆ ಎಂದು ಹಲವು ಮಂದಿಗೆ ಗೊಂದಲವಿರಬಹುದು. ಇದಕ್ಕೆ ಸಂಬಂಧಿಸಿ ಯುಗಾದಿ ಆಚರಿಸುವ ವಿಧಾನಗಳ ಬಗ್ಗೆ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.

ಯುಗಾದಿ ಹಬ್ಬದ ಆಚರಣೆ ಹೇಗೆ? ಚೈತ್ರಮಾಸಕ್ಕೆ ವಿಷ್ಣು ರೂಪಿ ಪರಮಾತ್ಮ ನಿಯಾಮಕ. ಚೈತ್ರ ಶುಕ್ಲ ಪ್ರತಿಪತ್ತಿನಂದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ ಆಗುತ್ತದೆ. ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುಂದೆ ಇಟ್ಟಿರುವ ಪಂಚಾಂಗ , ತರಕಾರಿಗಳು -ಧಾನ್ಯಗಳು ,ಫಲ-ತಾಂಬೂಲಗಳು ಎಣ್ಣೆ ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು, ಹೊಸ ವಸ್ತ್ರಗಳನ್ನು ಇರಿಸಿ ಮಂಗಳಾರತಿಯನ್ನು ಮಾಡಬೇಕು. ಗಜೇಂದ್ರ ಮೋಕ್ಷ ಪಾರಯಣ ಮಾಡಬೇಕು.

ಯುಗಾದಿಯಂದು ಪ್ರತಿಯೊಬ್ಬರು ಅಭ್ಯಂಜನ ಮಾಡಲೇಬೇಕು. ಜೊತೆಗೆ ಪೂಜಕನು(ಭಕ್ತನು) ಸ್ನಾನ ಮಾಡಿ ಭಗವಂತನಿಗೆ ಎಣ್ಣೆ ಸೀಗೆಪುಡಿ, ಬಿಸಿನೀರಿನಿಂದ ಅಭ್ಯಂಜನನವನ್ನು ಮಾಡಿಸಬೇಕು. ಭಗವಂತನಿಗೆ ಮಾಡಿ ಉಳಿದ ಎಣ್ಣೆ-ಸೀಗೆಪುಡಿಗೆ ಬೇರೆ ಎಣ್ಣೆ, ಸೀಗೆಪುಡಿಯನ್ನು ಬೆರೆಸಿ ಪ್ರತಿಯೊಬ್ಬರು ಹಚ್ಚಿಕೊಂಡು ಸ್ನಾನ ಮಾಡಬೇಕು.

ಸಪ್ತಚಿರಂಜೀವಿ ಸ್ಮರಣೆ ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು. ಅಶ್ವತ್ಥಾಮ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ಅಭ್ಯಂಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ, ನಂತರ ಹೊಸಬಟ್ಟೆಯನ್ನು ಧರಿಸಿ, ನಿಂಬಕ ದಳ ಭಕ್ಷಣವನ್ನು (ಬೇವು -ಬೆಲ್ಲ) ಮಾಡಬೇಕು.

ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ ನೂರು ವರ್ಷಆಯುಸ್ಸು, ವಜ್ರದಂತೆ ಧೃಢವಾದ ಶರೀರ, ಸರ್ವಸಂಪತ್ತು ಸರ್ವರಿಷ್ಟನಾಶ ಇವುಗಳಿಗಾಗಿ ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು.

ಡಾ. ಬಸವರಾಜ್ ಗುರೂಜಿ

ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ, ಸಂಪರ್ಕ ಸಂಖ್ಯೆ: 9972848937

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮೆರಗು ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆಗಳು

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಶುಭ ಮುಹೂರ್ತ ಮತ್ತು ಆಚರಿಸುವ ವಿಧಾನ ಇಲ್ಲಿದೆ 

(Ugadi Festival 2021 How to celebrate Yugadi Mantra for Yugadi celebration)

Published On - 5:04 pm, Mon, 12 April 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್