ಕೋಲಾರ: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದ ಪ್ರಕರಣ ಬಯಲಾಗಿದೆ. ಕೋಲಾರದ ಲಕ್ಷ್ಮೀ ಆಸ್ಪತ್ರೆಯಲ್ಲಿ 11 ದಿನಕ್ಕೆ 3.9 ಲಕ್ಷ ಬಿಲ್ ಮಾಡಿರುವುದು ಬೆಳಕಿಗೆ ಬಂದಿದೆ. ಅರವಿಂದ್ ಎಂಬ ಸೋಂಕಿತನ ಹೆಸರಲ್ಲಿ ಲಕ್ಷಗಟ್ಟಲೆ ಬಿಲ್ ಮಾಡಲಾಗಿದ್ದು, 3 ಲಕ್ಷ 90 ಸಾವಿರ ಬಿಲ್ ಮಾಡಿರುವ ರಸೀದಿ ಎಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೋಗಿಯ ಬಿಲ್ ವೈರಲ್ ಆಗಿದ್ದು, ಸರ್ಕಾರ, ಆರೋಗ್ಯ ಸಚಿವರಿಗೆ ಜನರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
HRCT/CT ಸ್ಕ್ಯಾನ್ಗೆ ರಾಜ್ಯ ಸರ್ಕಾರ ದರ ನಿಗದಿಪಡಿಸಿದೆ. ಬಿಪಿಎಲ್ ಕಾರ್ಡ್ದಾರರಿಗೆ HRCT/CT ಸ್ಕ್ಯಾನ್ಗೆ ₹1500 ಹಾಗೂ ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ HRCT/CT ಸ್ಕ್ಯಾನ್ಗೆ ₹2500 ದರ ನಿಗದಿಪಡಿಸಲಾಗಿದೆ. ಜೊತೆಗೆ, ಚಿತಾಗಾರಗಳಲ್ಲಿ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಚಿತಾಗಾರ ಸಮನ್ವಯ ಅಧಿಕಾರಿಗಳನ್ನ ಸರ್ಕಾರ ನೇಮಿಸಿದೆ. ಬಿಬಿಎಂಪಿ ವ್ಯಾಪ್ತಿಯ 16 ಚಿತಾಗಾರಗಳಿಗೆ ಅಧಿಕಾರಿಗಳ ನೇಮಕ ಮಾಡಲಾಗಿದೆ. 2 ಶಿಫ್ಟ್ನಲ್ಲಿ ಕಾರ್ಯನಿರ್ವಹಿಸಲು 32 ಅಧಿಕಾರಿಗಳ ನೇಮಕ ಮಾಡಲಾಗಿದೆ.
ದೇಶದ ಉದ್ದಗಲಕ್ಕೂ ನಕಲಿ ರೆಮಿಡಿಸಿವಿರ್ ಜಾಲ
ನಕಲಿ ರೆಮಿಡಿಸಿವಿರ್ ತಯಾರಿಸಿ, ಮಾರುತ್ತಿದ್ದ ಉತ್ತರಾಖಂಡ್ ರಾಜ್ಯದ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಗುಜರಾತ್, ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಈಗ ನಕಲಿ ರೆಮಿಡಿಸಿವಿರ್ ಮಾರಾಟ ಗ್ಯಾಂಗ್ ಕಾರ್ಯಾಚರಣೆ ಮಾಡ್ತಿವೆ. ಕೆಲ ಗ್ಯಾಂಗ್ ಈಗಾಗಲೇ ಪೊಲೀಸರ ಬಲೆಗೆ ಬಿದ್ದಿವೆ. ಕೊರೊನಾ ರೋಗಿಗಳು ಹಾಗೂ ಅವರ ಸಂಬಂಧಿಕರು ಕಾಳಸಂತೆಯಲ್ಲಿ ರೆಮಿಡಿಸಿವಿರ್ ಖರೀದಿಸುವಾಗ ಎಚ್ಚರಿಕೆಯಿಂದ ಇರಬೇಕು. ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ನಿಮಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಖದೀಮರಿದ್ದಾರೆ. ಅಂಥವರ ಬಗ್ಗೆ ಎಚ್ಚರವಿರಲಿ. ಕೊರೊನಾ ರೋಗಿಗಳ ಸಂಬಂಧಿಕರು, ರೆಮಿಡಿಸಿವಿರ್ ಇಂಜೆಕ್ಷನ್ಅನ್ನು ಸರ್ಕಾರದಿಂದ ಮಾತ್ರ ಖರೀದಿಸಿ. ಸರ್ಕಾರವೇ ರೆಮಿಡಿಸಿವಿರ್ ಪೂರೈಕೆಗೆ ನೋಡಲ್ ಆಫೀಸರ್ ಗಳನ್ನು ನೇಮಿಸಿದೆ. ಇಂಥ ನೋಡಲ್ ಆಫೀಸರ್ಗಳ ಮೂಲಕ ಮಾತ್ರ ರೆಮಿಡಿಸಿವಿರ್ ಪಡೆದು ಕೊರೊನಾ ರೋಗಿಗಳಿಗೆ ನೀಡಿ. ರೆಮಿಡಿಸಿವಿರ್ ಅನ್ನು ರೋಗಿಗಳಿಗೆ ನೀಡಬೇಕೆಂಬ ಆತುರದಲ್ಲಿ ನಕಲಿ ರೆಮಿಡಿಸಿವಿರ್ ಜಾಲದ ಬಲೆಗೆ ಬೀಳಬೇಡಿ. ಕೊರೊನಾ ಚಿಕಿತ್ಸೆ ಸಂದರ್ಭ ಜಾಗರೂಕರಾಗಿ, ವ್ಯವಸ್ಥೆಯ ಅನುಸಾರ ಔಷಧೋಪಚಾರ ಪಡೆಯಿರಿ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಿ, ಕೊರೊನಾದಿಂದ ದೂರವಿರಿ: ಉತ್ತರ ಪ್ರದೇಶದ ಬಿಜೆಪಿ ಶಾಸಕ
ಅಜ್ಜಿಯನ್ನು ಕಳೆದುಕೊಂಡರೂ ಕೊರೊನಾ ರೋಗಿಗಳ ನಡುವೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಈ ನರ್ಸ್ ರಾಖಿ ಜಾನ್!
Published On - 7:26 pm, Sun, 9 May 21