ಕೋಲಾರ, ಜುಲೈ 17: ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು (Couple) ಲೋಕ ಅದಾಲತ್ (Lok Adalat) ಒಗ್ಗೂಡಿಸಿರುವಂತಹ ಅಪರೂಪದ ಘಟನೆಗೆ ಜಿಲ್ಲೆಯ ಶ್ರೀನಿವಾಸಪುರ ನ್ಯಾಯಾಲಯ ಸಾಕ್ಷಿಯಾಗಿದೆ. ಜೀವನಾಂಶ ಕೋರಿ ಪತ್ನಿ ಜಯಲಕ್ಷ್ಮೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಬ್ಬರನ್ನು ಮನವೊಲಿಸಿದ ನ್ಯಾಯಾಧೀಶ ಹೆಚ್.ಆರ್.ಸಚಿನ್ ಒಗ್ಗೂಡಿಸಿದ್ದಾರೆ. ಕೋರ್ಟ್ ಹಾಲ್ನಲ್ಲೇ ಪರಸ್ಪರ ಹೂವಿನ ಹಾರವನ್ನು ದಂಪತಿ ಬದಲಿಸಿಕೊಂಡಿದ್ದಾರೆ.
ಲಕ್ಷ್ಮೀಪುರ ಗ್ರಾಮದ ದಂಪತಿ ಜಯಲಕ್ಷ್ಮೀ ಹಾಗೂ ಸುಬ್ರಮಣಿ. ಕಳೆದ 5 ವರ್ಷಗಳಿಂದ ಇಬ್ಬರ ಸಂಸಾರದಲ್ಲಿ ಬಿರುಕು ಬಿಟ್ಟಿತ್ತು. ಇಬ್ಬರ ಮಧ್ಯೆ ಒಮ್ಮತ ಮೂಡದ ಕಾರಣ ಪತಿಯಿಂದ ದೂರವಾಗಿ ಜೀವನಾಂಶಕ್ಕಾಗಿ ಪತ್ನಿ ಜಯಲಕ್ಷ್ಮೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಮಹಿಳಾ ಪೊಲೀಸ್ ಪೇದೆಗಳಿಗೆ ಠಾಣೆಯಲ್ಲೇ ಸೀಮಂತ; ಬಾಗಿನ ನೀಡಿ ಶುಭ ಹಾರೈಸಿದ ಹಿರಿಯ ಅಧಿಕಾರಿಗಳು
ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಇದು ಎರಡನೆ ಪ್ರಕರಣವಾಗಿದೆ. ಬಂಗಾರಪೇಟೆ ಕೋರ್ಟ್ನಲ್ಲಿ ಇತ್ತೀಚೆಗೆ ವಿಚ್ಛೇದನ ಕೋರಿದ್ದ ದಂಪತಿ ಒಂದಾಗಿದ್ದರು.
ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದ 16 ಜೋಡಿಗಳನ್ನು ಮತ್ತೆ ಒಂದು ಮಾಡಿ ಸುಖ ಜೀವನ ನಡೆಸುವಂತೆ ತಿಳುವಳಿಕೆ ನೀಡಲಾಗಿದೆ. ಇಂತಹ ಅಪರೂಪದ ಕ್ಷಣಕ್ಕೆ ದಾವಣಗೆರೆಯ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಗಿದೆ.
ಇತ್ತೀಚೆಗೆ ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆರವರ ನೇತೃತ್ವದಲ್ಲಿ ನಡೆದ ಎರಡನೇ ರಾಷ್ಟ್ರೀಯ ಲೋಕ ಆದಾಲತ್ನಲ್ಲಿ 16 ಜೋಡಿಗಳು ನ್ಯಾಯಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸುವ ಮೂಲಕ ಮತ್ತೆ ಒಂದುಗೂಡಿಸಲಾಗಿದೆ.
ಇದನ್ನೂ ಓದಿ: ವಿಜಯಪುರ: ಒಂದೇ ದಿನ ಸಾವಿನಲ್ಲಿ ಒಂದಾದ ಶತಾಯುಷಿ ಪತಿ-ಪತ್ನಿ, ಗದಗದಲ್ಲೂ ಮತ್ತೊಂದು ಘಟನೆ
ದೇಶದಾದ್ಯಂತ ರಾಷ್ಟ್ರೀಯ ಲೋಕ ಆದಾಲತ್ ನಡೆಯುತ್ತಿದ್ದು 8,800 ವಿವಿಧ ಪ್ರಕರಣಗಳು ರಾಜಿಸಂಧಾನದ ಮೂಲಕ ಇಥ್ಯರ್ಥಗೊಂಡಿವೆ. ಇದರಲ್ಲಿ ವಿಚ್ಛೇದನ ಸೇರಿದಂತೆ ನಾನಾ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದ 16 ಜೋಡಿಗಳು ಮತ್ತೆ ಸತಿಪತಿಗಳಾಗುವಂತೆ ರಾಜಿ ಮಾಡಿಸಿ ಜೀವನಕ್ಕೆ ದಾರಿ ಮಾಡಿಕೊಡಲಾಗಿದೆ.
ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪವಾಗಿ ಮೂರ್ನಾಲ್ಕು ವರ್ಷಗಳಿಂದ ದೂರವಿದ್ದ ಸತಿಪತಿಗಳು ವಿಚ್ಛೇದನ ಮರೆತು ಮತ್ತೆ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಇಡೀ ದಾವಣಗೆರೆ ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಾಕ್ಷಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Wed, 17 July 24