ಬೆಂಗಳೂರು: ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಇಂದಿನಿಂದ ಸಂಚಾರಕ್ಕೆ ಮುಕ್ತ

|

Updated on: Jul 17, 2024 | 4:27 PM

ಡಬಲ್ ಡೆಕ್ಕರ್ ಫ್ಲೈಓವರ್ ₹ 449 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು ಯೋಜನೆಯನ್ನು ಯಾವ ಸರ್ಕಾರ ಅಧಿಕಾರದಲ್ಲಿದ್ದಾಗ ರೂಪಿಸಲಾಗಿತ್ತೋ? ಅದರೆ ಇದೊಂದು ವೈಶಿಷ್ಟ್ಯಪೂರ್ಣ ಮತ್ತು ಇಡೀ ದೇಶದಲ್ಲೇ ಈ ಬಗೆಉ ಕೇವಲ ಎರಡನೇ ಫ್ಲೈಓವರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ ಎಲ್ಲ ಸರ್ಕಾರಗಳು ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುವುದನ್ನು ಅಲ್ಲಗಳೆಯಲಾಗದು.

ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ನಗರದ ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ವರೆಗೆ ನಿರ್ಮಾಣವಾಗಿರುವ ಸುಮಾರು 3.6 ಕಿಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಪ್ರಾಯೋಗಿಕ ಸಂಚಾರಕ್ಕಾಗಿ ಉದ್ಘಾಟಿಸಿದ್ದು ಈ ಮೇಲ್ಸೇತುವೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇಂಥದೊಂದು ಮೇಲ್ಸೇತುವೆ ತಯಾರಾಗಿದ್ದು ಇದನ್ನು ಥ್ರೀ ಟಿಯರ್ ಫ್ಲೈಓವರ್ ಅಂತ ಕರೆದರೆ ತಪ್ಪಾಗಲಾರದು. ಫ್ಲೈಓವರ್ ಕೆಳಭಾಗದಲ್ಲಿ ವಾಹನಗಳು ಓಡಾಡುತ್ತವೆ, ನಡುವಿನ ಫ್ಲೈಓವರ್ ರಸ್ತೆಯು ಸಿಗ್ನಲ್-ಮುಕ್ತವಾಗಿದ್ದು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ವಾಹನಗಳು ಎಲ್ಲೂ ನಿಲ್ಲದೆ ಸಂಚರಿಸಬಹುದು. ಮೇಲಿನ ಫ್ಲೈಓವರ್ ಮೆಟ್ರೋ ರೈಲುಗಳಿಗೆ ಮೀಸಲು. ಈ ಮೇಲ್ಸೇತುವೆ 4 ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ಯೆಲ್ಲೋ ಲೇನ್ ನ ಸ್ಟ್ರೆಚ್ ಮೇಲೆ ಮೆಟ್ರೋ ಟ್ರೇನ್ ಗಳು ಅರ್ ವಿ ರೋಡ್ ನಿಂದ ಬೊಮ್ಮಸಂದ್ರ ವರೆಗೆ ಓಡಾಡಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Double Decker Flyover: ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ: ಏನಿದರ ವಿಶೇಷ? ಇಲ್ಲಿದೆ ನೋಡಿ

Follow us on