ಹೊಟ್ಟೆ ಪಾಡಿಗೆ ದುಡಿಯುವವರ ಮೇಲೆ ಆರ್​ಟಿಓ ದರ್ಪ: ಸಿಡಿದೆದ್ದ ಬೈಕ್ ಟ್ಯಾಕ್ಸಿ ಅಸೋಸಿಯೇಷನ್

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ಆದಿ ನಾರಾಯಣ್, ಬೈಕ್ ಟ್ಯಾಕ್ಸಿಗೆ ನ್ಯಾಯಲಯವೇ ಅನುಮತಿ ನೀಡಿದೆ. ಆದರೆ ಆರ್​ಟಿಓ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಆಟೋ ಡ್ರೈವರ್​ಗಳು ನಮಗೆ ಕಿರುಕುಳ ನೀಡುತ್ತಾರೆ. ನಮಗೆ ನ್ಯಾಯ ಸಿಗದಿದ್ದರೆ ನಾವು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹೊಟ್ಟೆ ಪಾಡಿಗೆ ದುಡಿಯುವವರ ಮೇಲೆ ಆರ್​ಟಿಓ ದರ್ಪ: ಸಿಡಿದೆದ್ದ ಬೈಕ್ ಟ್ಯಾಕ್ಸಿ ಅಸೋಸಿಯೇಷನ್
ಹೊಟ್ಟೆ ಪಾಡಿಗೆ ದುಡಿಯುವವರ ಮೇಲೆ ಆರ್​ಟಿಓ ದರ್ಪ, ಸಿಡಿದೆದ್ದ ಬೈಕ್ ಟ್ಯಾಕ್ಸಿ ಅಸೋಸಿಯೇಷನ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 17, 2024 | 4:00 PM

ಬೆಂಗಳೂರು, ಜುಲೈ 17: ಬೈಕ್ ಟ್ಯಾಕ್ಸಿಗೆ (bike taxi) ನ್ಯಾಯಲಯವೇ ಅನುಮತಿ ನೀಡಿದೆ. ಆದರೆ ಆರ್​ಟಿಓ ಅಧಿಕಾರಿಗಳು (RTO Officers) ಕಿರುಕುಳ ನೀಡುತ್ತಿದ್ದಾರೆ ಎಂದು ಆರ್​​ಟಿಓ ಇಲಾಖೆ ವಿರುದ್ಧ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಅಧ್ಯಕ್ಷ ಆದಿ ನಾರಾಯಣ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, 5 ರಿಂದ 10 ಸಾವಿರ ರೂ. ಲಂಚ ಕೇಳುತ್ತಾರೆ. ನಮ್ಮ ಬಳಿ ಸುಖಾ ಸುಮ್ಮನೆ ದಂಡ ಕಟ್ಟಿಸಿಕೊಳುತ್ತಾರೆ. ಯಾವ ಉದ್ದೇಶಕ್ಕೆ ದಂಡ ಕಟ್ಟಿಸಿಕೊಂಡಿದ್ದೀರಾ ಅಂತ ಕೇಳಿದರೆ ಹೇಳುವುದಿಲ್ಲ. ನಮ್ಮ ಜೀವನದ ಜೊತೆ ಚೆಲ್ಲಾಟವಾಡುತ್ತಾರೆ ಎಂದಿದ್ದಾರೆ.

ಒಂದು ವೇಳೆ ಆರ್‌ಟಿಓ ಅಧಿಕಾರಿಗಳು ಲಂಚ ಕೊಟ್ಟರೆ ಬಿಟ್ಟು ಕಳುಹಿಸುತ್ತಾರೆ. ಲಂಚ ಕೊಡದಿದ್ದರೆ ಸುಮ್ಮನೆ ಹಿಂಸೆ ಮಾಡುತ್ತಾರೆ. ಆಟೋ ಡ್ರೈವರ್​ಗಳು ನಮಗೆ ಕಿರುಕುಳದ ಜೊತೆಗೆ ಹಿಡಿದುಕೊಂಡು ಹೊಡೆಯುತ್ತಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ. ಇವರಿಗೆ ಆರ್​ಟಿಓ ಅಧಿಕಾರಿಗಳು ಸಾಥ್​ ನೀಡುತ್ತಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ನಿಯಮ ಉಲ್ಲಂಘಿಸುವ ಮಾಲೀಕರಿಗೆ ಆರ್​​ಟಿಒ ಶಾಕ್: ಔಡಿ, ಹುಂಡೈ ಸೇರಿ 50 ಕಾರು ಸೀಜ್, 25 ಲಕ್ಷ ರೂ. ವಸೂಲಿ

ಗ್ರಾಹಕರಿಗೆ ನಾವು ಒಳ್ಳೆಯ ಸರ್ವಿಸ್ ಕೊಡುತ್ತಿದ್ದೇವೆ. ಗ್ರಾಹಕರು ನಮ್ಮ ಜೊತೆ ಬರುತ್ತಾರೆ. ಸರ್ಕಾರ ನಮಗೆ ನ್ಯಾಯ ಕೊಡಬೇಕು. ಲಕ್ಷಾಂತರ ಮಂದಿ ಬೈಕ್ ಟ್ಯಾಕ್ಸಿ ಓಡಿಸುತ್ತಾರೆ. ನಮಗೆ ನ್ಯಾಯ ಸಿಗದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ಆರ್​ಟಿಓ ಆಯುಕ್ತ ಯೋಗೇಶ್​ರನ್ನು ಕೇಳಿದರೆ ನಾನು ಏನು ಮಾತಾಡಲ್ಲ ಅಂತ ಉಡಾಫೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಆಟೋ, ಕ್ಯಾಬ್ ಚಾಲಕರಿಂದ ಸಾರಿಗೆ ಇಲಾಖೆ ಕಚೇರಿ ಮುತ್ತಿಗೆ: ಪೋಲಿಸರನ್ನು ತಳ್ಳಿ ನುಗ್ಗಿದ ಚಾಲಕರು

ಈ ಹಿಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ದ ಬೃಹತ್ ಹೋರಾಟಗಳು ನಡೆದಿವೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿ, ಕ್ಯಾಬ್ ಚಾಲಕರು ಬೈಕ್ ಟ್ಯಾಕ್ಸಿ ವಿರುದ್ದ ಸಿಡಿದೆದ್ದಿದ್ದರು. ಇತ್ತೀಚೆಗೆ ಕೂಡ ಶಾಂತಿನಗರ ಬಿಟಿಎಸ್​​ ರೋಡ್​ ಬ್ಲಾಕ್​ ಮಾಡಿ ಆಟೋ, ಕ್ಯಾಬ್​ ಚಾಲಕರಿಂದ ಸಾರಿಗೆ ಇಲಾಖೆಗೆ ಮುತ್ತಿಗೆ ಹಾಕಲಾಗಿತ್ತು. ಓನ್ ಸಿಟಿ ಓನ್ ಫೇರ್ ಜಾರಿ ಆಗಬೇಕು ಮತ್ತು ರಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು ಎಂದು ಪ್ರತಿಭಟನೆ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:59 pm, Wed, 17 July 24

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ