ಮಳೆ ಎಫೆಕ್ಟ್: ಶತಕ ಬಾರಿಸಿದ ಟೊಮೆಟೊ ದರ; ಜನ ಹೈರಾಣ

ಮಳೆ ಎಫೆಕ್ಟ್: ಶತಕ ಬಾರಿಸಿದ ಟೊಮೆಟೊ ದರ; ಜನ ಹೈರಾಣ

ಕಿರಣ್ ಹನುಮಂತ್​ ಮಾದಾರ್
|

Updated on: Jul 17, 2024 | 3:10 PM

ಮಳೆಯಿಂದ ಟೊಮೆಟೊ ಬೆಳೆ ಕೈಕೊಟ್ಟಿದೆ. ಸದ್ಯ ಬೆಳಗಾವಿಗೆ ಮಹಾರಾಷ್ಟ್ರ ‌ರಾಜ್ಯದಿಂದ ಟೊಮೆಟೊವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪರಿಣಾಮ ಟೊಮೆಟೊ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆಯಿರುವುದರಿಂದ ದಿನದಿಂದ ದಿನಕ್ಕೆ ಟೊಮೆಟೊ ದರ ಏರುತ್ತಿದೆ.

ಬೆಳಗಾವಿ, ಜು.17: ರಾಜ್ಯಾದ್ಯಂತ ವರುಣಾರ್ಭಟ ಜೋರಾಗಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಹೆಚ್ಚಿದ ಮಳೆ ಹಿನ್ನಲೆ  ಕೆಂಪು ಸುಂದರಿ ಟೊಮೆಟೊ(Tomato) ದರ ಗಗನಕ್ಕೇರಿದೆ. ಮೊದಲೇ ಮಳೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ, ಟೊಮೆಟೊ ಬೆಲೆ ಏರಿಕೆ ಮತ್ತಷ್ಟು ತೊಂದರೆ ಉಂಟು ಮಾಡಿದೆ. ಹೌದು, ಬೆಳಗಾವಿ(Belagavi) ಮಾರ್ಕೆಟ್​ನಲ್ಲಿ ಪ್ರತಿ ಕೆಜಿ ಟೊಮೆಟೊಗೆ ನೂರು ರೂಪಾಯಿ ಮಾರಾಟವಾಗುತ್ತಿದೆ. ಮಳೆಯಿಂದ ಟೊಮೆಟೊ ಬೆಳೆ ಕೈಕೊಟ್ಟಿದೆ. ಸದ್ಯ ಬೆಳಗಾವಿಗೆ ಮಹಾರಾಷ್ಟ್ರ ‌ರಾಜ್ಯದಿಂದ ಟೊಮೆಟೊವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪರಿಣಾಮ ಟೊಮೆಟೊ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆಯಿರುವುದರಿಂದ ದಿನದಿಂದ ದಿನಕ್ಕೆ ಟೊಮೆಟೊ ದರ ಏರುತ್ತಿದೆ. 60-70 ರೂಪಾಯಿ ಪ್ರತಿ ಕೆಜಿ ಇದ್ದ ಕೆಂಪು ಸುಂದರಿ, ನೂರರ ಗಡಿ ದಾಟಿದೆ. ಇತ್ತ ಬೆಲೆ ಕೇಳಿ ಗ್ರಾಹಕರು ಗರಂ ಆಗಿದ್ದು, ವ್ಯಾಪಾರಿಯ ಜೊತೆಗೆ ವಾಗ್ವಾದ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ