Ashadha Guru Purnima 2024: ಚಂದ್ರ ದೋಷದಿಂದ ಮುಕ್ತಿ ಪಡೆಯಲು, ಪೂರ್ವಜರ ಆಶೀರ್ವಾದಕ್ಕಾಗಿ ಗುರು ಪೂರ್ಣಿಮಾ ದಿನ ಹೀಗೆ ಮಾಡಿ

|

Updated on: Jul 18, 2024 | 6:06 AM

Guru Purnima: ಹುಣ್ಣಿಮೆಯ ದಿನದ ಚಂದ್ರನ ಪೂಜೆಗೂ ವಿಶೇಷ ಮಹತ್ವವಿದೆ. ಈ ದಿನವನ್ನು ಗುರು ಪೌರ್ಣಮಿ ಎಂದೂ ಆಚರಿಸಲಾಗುತ್ತದೆ. ಏಕೆಂದರೆ ಈ ದಿನ ಮಹಾಭಾರತ ಗ್ರಂಥವನ್ನು ಮನುಕುಲಕ್ಕೆ ನೀಡಿದ ವೇದವ್ಯಾಸರ ಜನ್ಮದಿನ. ಹಾಗಾಗಿ ಈ ಆಷಾಢ ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಇಂದು ಶಿಕ್ಷಕರಿಗೆ ಧನ್ಯವಾದಗಳು ಸಲ್ಲಿಸುವ ದಿನ.

Ashadha Guru Purnima 2024: ಚಂದ್ರ ದೋಷದಿಂದ ಮುಕ್ತಿ ಪಡೆಯಲು, ಪೂರ್ವಜರ ಆಶೀರ್ವಾದಕ್ಕಾಗಿ ಗುರು ಪೂರ್ಣಿಮಾ ದಿನ ಹೀಗೆ ಮಾಡಿ
ಆಷಾಢ ಪೂರ್ಣಿಮಾ ದಿನದಂದು ಮಾಡಬೇಕಾದ ಪರಿಹಾರಗಳೇನು?
Follow us on

ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಷಾಢ ಪೂರ್ಣಿಮಾ ಅಥವಾ ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತದೆ. ಎಲ್ಲಾ ಹುಣ್ಣಿಮೆಗಳ ಪೈಕಿ ಆಷಾಢ ಹುಣ್ಣಿಮೆ ಅತ್ಯಂತ ವಿಶೇಷ ಎಂದು ಹಿಂದೂಗಳು ನಂಬುತ್ತಾರೆ. ಈ ವರ್ಷ ಆಷಾಢ ಪೌರ್ಣಮಿ ವ್ರತವನ್ನು 20ನೇ ಜುಲೈ 2024ರ ಶನಿವಾರದಂದು ಆಚರಿಸಲಾಗುತ್ತದೆ. ಮರುದಿನ ಅಂದರೆ ಜುಲೈ 21ರಂದು ಹುಣ್ಣಿಮೆ ಸ್ನಾನ, ದಾನ ಇತ್ಯಾದಿ. ಈ ದಿನದಂದು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಜನರು ತಮ್ಮ ಪೂರ್ವಜರಿಗೆ ಗೌರವ ಸಲ್ಲಿಸುತ್ತಾರೆ. ಪಿತೃ ತರ್ಪಣವನ್ನು ಅರ್ಪಿಸಲಾಗುತ್ತದೆ ಮತ್ತು ದಾನಗಳನ್ನು ನೀಡಲಾಗುತ್ತದೆ. ಸನಾತನ ಧರ್ಮದ ನಂಬಿಕೆಯ ಪ್ರಕಾರ ಆಷಾಢ ಹುಣ್ಣಿಮೆಯಂದು ಸ್ನಾನ ಮತ್ತು ದಾನ ಮಾಡುವುದರಿಂದ ಪಾಪ ನಾಶವಾಗುತ್ತದೆ ಮತ್ತು ಪುಣ್ಯ ಬರುತ್ತದೆ.

ಹುಣ್ಣಿಮೆಯ ದಿನದ ಚಂದ್ರನ ಪೂಜೆಗೂ ವಿಶೇಷ ಮಹತ್ವವಿದೆ. ಈ ದಿನವನ್ನು ಗುರು ಪೌರ್ಣಮಿ ಎಂದೂ ಆಚರಿಸಲಾಗುತ್ತದೆ. ಏಕೆಂದರೆ ಈ ದಿನ ಮಹಾಭಾರತ ಗ್ರಂಥವನ್ನು ಮನುಕುಲಕ್ಕೆ ನೀಡಿದ ವೇದವ್ಯಾಸರ ಜನ್ಮದಿನ. ಹಾಗಾಗಿ ಈ ಆಷಾಢ ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಇಂದು ಶಿಕ್ಷಕರಿಗೆ ಧನ್ಯವಾದಗಳು ಸಲ್ಲಿಸುವ ದಿನ. ಇದಲ್ಲದೆ, ಗುರುವು ಅವರು ನೀಡಿದ ಜ್ಞಾನ ಮತ್ತು ಮಾರ್ಗದರ್ಶನಕ್ಕಾಗಿ ಗೌರವದ ಸಂದರ್ಭವೆಂದು ಪರಿಗಣಿಸಲಾಗಿದೆ. ಆದರೆ ಈ ಆಷಾಢ ಪೂರ್ಣಿಮಾ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ನಿಮ್ಮ ಪೂರ್ವಜರ ಆಶೀರ್ವಾದ ದೊರೆಯುತ್ತದೆ.

Also Read: No Entry for Men Devotees: ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಆಷಾಢ ಪೂರ್ಣಿಮಾ ದಿನದಂದು ಮಾಡಬೇಕಾದ ಪರಿಹಾರಗಳೇನು?

ಪಿತೃ ತರ್ಪಣ: ಆಷಾಢ ಹುಣ್ಣಿಮೆಯ ದಿನವನ್ನು ಪಿತೃ ತರ್ಪಣ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಜನರು ತಮ್ಮ ಪೂರ್ವಜರಿಗೆ ಗೌರವ ಸಲ್ಲಿಸುತ್ತಾರೆ. ಅವರಿಗೆ ತರ್ಪಣವನ್ನು ನೀಡಲಾಗುತ್ತದೆ.

ಸಂಪತ್ತು ಮತ್ತು ಖ್ಯಾತಿಗಾಗಿ: ಆಷಾಢ ಪೌರ್ಣಮಿಯಂದು ಉಪವಾಸ ಮಾಡಿ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿ. ಪೂಜೆಯಲ್ಲಿ ಲಕ್ಷ್ಮಿ ದೇವಿಗೆ ಕಮಲದ ಹೂವುಗಳು, ಕೆಂಪು ಗುಲಾಬಿಗಳು ಮತ್ತು ಕವಡೆಗಳನ್ನು ಬಳಸಿ. ಕ್ಷೀರದಿಂದ ಮಾಡಿದ ಬಿಳಿ ಸಿಹಿತಿಂಡಿಗಳನ್ನು ದೇವಿಗೆ ಅರ್ಪಿಸಿ. ನಂತರ ಶ್ರೀ ಸೂಕ್ತಂ ಅಥವಾ ಕನಕಧಾರಾ ಸ್ತೋತ್ರವನ್ನು ಪಠಿಸಿ.

Also Read: Marriage Astrology – ಕರ್ಕಾಟಕ ರಾಶಿಯಲ್ಲಿ ಶುಕ್ರ ನಡೆ.. ಈ ರಾಶಿಯವರಿಗೆ ಶೀಘ್ರದಲ್ಲೇ ಮದುವೆ ಯೋಗಗಳು!

ಪೂರ್ವಜರ ಮೆಚ್ಚಿನ ಆಹಾರ: ಆಷಾಢ ಪೂರ್ಣಿಮೆಯಂದು ಬ್ರಹ್ಮ ಮುಹೂರ್ತದಲ್ಲಿ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡಿ. ಇದರ ನಂತರ ಪೂರ್ವಜರನ್ನು ಸಂತುಷ್ಟಗೊಳಿಸಲು ನೀರು ಮತ್ತು ಕಪ್ಪು ಎಳ್ಳುಗಳೊಂದಿಗೆ ತರ್ಪಣವನ್ನು ನೀಡಿ. ಹೀಗೆ ಮಾಡುವುದರಿಂದ ಪೂರ್ವಜರು ತೃಪ್ತರಾಗುತ್ತಾರೆ. ಈ ದಿನ ಮನೆಯಲ್ಲಿ ಪೂರ್ವಜರು ಇಷ್ಟಪಡುವ ಆಹಾರವನ್ನು ತಯಾರಿಸಿ ಹಸು, ಕಾಗೆ, ನಾಯಿ ಇತ್ಯಾದಿಗಳಿಗೆ ತಿನ್ನಿಸಿ.

ಚಂದ್ರನಿಗೆ ಪೂಜೆ: ಹುಣ್ಣಿಮೆಯ ದಿನ ಚಂದ್ರನು 16 ಮೆಟ್ಟಿಲುಗಳೊಂದಿಗೆ ಉದಯಿಸುತ್ತಾನೆ. ಅದಕ್ಕಾಗಿಯೇ ಆಷಾಢ ಪೌರ್ಣಮಿ ವ್ರತದ ರಾತ್ರಿ ಚಂದ್ರನನ್ನು ಪೂಜಿಸಬೇಕು. ಹಸಿ ಹಾಲು, ನೀರು ಮತ್ತು ಬಿಳಿ ಹೂವುಗಳೊಂದಿಗೆ ಅರ್ಘ್ಯವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಚಂದ್ರದೋಷ ನಿವಾರಣೆಯಾಗುತ್ತದೆ.

ಬಿಳಿ ವಸ್ತುಗಳನ್ನು ದಾನ ಮಾಡಿ: ಅಕ್ಕಿ, ಸಕ್ಕರೆ, ಬಿಳಿ ಬಟ್ಟೆ, ಬಿಳಿ ಹೂವುಗಳು, ಮುತ್ತುಗಳು, ಬೆಳ್ಳಿ ಮುಂತಾದ ಬಿಳಿ ವಸ್ತುಗಳನ್ನು ಆಷಾಢ ಪೌರ್ಣಮಿ ದಿನದಂದು ಬಡ ಬ್ರಾಹ್ಮಣರು ಅಥವಾ ನಿರ್ಗತಿಕರಿಗೆ ದಾನ ಮಾಡಬಹುದು. ಹೀಗೆ ಮಾಡುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಕೀರ್ತಿ ಸಿಗುತ್ತದೆ, ಮನಸ್ಸು ಶಾಂತವಾಗಿರುತ್ತದೆ.. ಸ್ಥಿರವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು