Vasudeva Dwadashi 2024: ವಾಸುದೇವ ದ್ವಾದಶಿ ದಿನ ಹೀಗೆ ಮಾಡಿ, ಸಂತೋಷ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ

ಪಂಚಾಂಗದ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನಾಂಕವು ಜುಲೈ 17 ರ ಬುಧವಾರ ರಾತ್ರಿ 09:03 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜುಲೈ 18 ರ ಬುಧವಾರದಂದು ರಾತ್ರಿ 08:44 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ವಾಸುದೇವ ದ್ವಾದಶಿಯ ಉಪವಾಸವನ್ನು ಜುಲೈ 18 ರಂದು ಮಾತ್ರ ಆಚರಿಸಲಾಗುತ್ತದೆ.

Vasudeva Dwadashi 2024: ವಾಸುದೇವ ದ್ವಾದಶಿ ದಿನ ಹೀಗೆ ಮಾಡಿ, ಸಂತೋಷ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ
ವಾಸುದೇವ ದ್ವಾದಶಿ ದಿನ ಹೀಗೆ ಮಾಡಿ, ಸಂತೋಷ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ
Follow us
ಸಾಧು ಶ್ರೀನಾಥ್​
|

Updated on: Jul 17, 2024 | 1:37 PM

Vasudeva Dwadashi 2024: ಹಿಂದೂ ಧರ್ಮದಲ್ಲಿ, ಆಷಾಢ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ವಾಸುದೇವ ದ್ವಾದಶಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ವಾಸುದೇವ ದ್ವಾದಶಿ, ಶ್ರೀ ಕೃಷ್ಣ ದ್ವಾದಶಿ, ಹರಿಬೋಧನಿ ದ್ವಾದಶಿ ಮತ್ತು ದೇವೋತ್ಸರ್ಗ ದ್ವಾದಶಿ ಎಂದೂ ಕರೆಯುತ್ತಾರೆ. ಇದು ಭಗವಾನ್ ವಿಷ್ಣು ಮತ್ತು ಅವನ ಅವತಾರವಾದ ಶ್ರೀಕೃಷ್ಣನ ಆರಾಧನೆಯ ವಿಶೇಷ ದಿನವಾಗಿದೆ. ಈ ವರ್ಷ ವಾಸುದೇವ ದ್ವಾದಶಿಯನ್ನು 18 ಜುಲೈ 2024 ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ದೇಣಿಗೆ ನೀಡಿದರೆ ಅದರಿಂದ ವಿಶೇಷ ಫಲಿತಗಳನ್ನು ಪಡೆಯುತ್ತಾರೆ.

ಪಂಚಾಂಗದ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನಾಂಕವು ಜುಲೈ 17 ರ ಬುಧವಾರ ರಾತ್ರಿ 09:03 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜುಲೈ 18 ರ ಬುಧವಾರದಂದು ರಾತ್ರಿ 08:44 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ವಾಸುದೇವ ದ್ವಾದಶಿಯ ಉಪವಾಸವನ್ನು ಜುಲೈ 18 ರಂದು ಮಾತ್ರ ಆಚರಿಸಲಾಗುತ್ತದೆ.

ವಾಸುದೇವ ದ್ವಾದಶಿಯ ದಿನದಂದು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ ಮತ್ತು ಜನರು ಮಾಡಿದ ಇಷ್ಟಾರ್ಥಗಳು ಬೇಗ ಈಡೇರುತ್ತವೆ ಎಂಬ ನಂಬಿಕೆಯಿದೆ. ವಾಸುದೇವ ದ್ವಾದಶಿಯ ದಿನ ದಾನ ಮಾಡುವುದರಿಂದ ವಿಷ್ಣು ಮತ್ತು ಕೃಷ್ಣನ ಆಶೀರ್ವಾದ ಸಿಗುತ್ತದೆ.

Also Read:  Warkari: ಏನಿದು ವಾರಕರಿ ಸಂಪ್ರದಾಯ? ದೈವಸಾಕ್ಷಾತ್ಕಾರಕ್ಕೆ ವಿಠ್ಠಲ ಅನುಯಾಯಿಗಳು ನಡೆಯುವ ಮಾರ್ಗದಲ್ಲಿ ನಾಲ್ಕು ಹೆಜ್ಜೆ ಹಾಕುವ ಬನ್ನಿ!

ಈ ವಸ್ತುಗಳನ್ನು ದಾನ ಮಾಡಿ:

ವಾಸುದೇವ ದ್ವಾದಶಿಯಂದು ಪುಣ್ಯದ ಫಲಿತಾಂಶಗಳನ್ನು ಪಡೆಯಲು, ಬಡವರು ಮತ್ತು ನಿರ್ಗತಿಕರಿಗೆ ಆಹಾರ ಧಾನ್ಯಗಳು, ಬೇಳೆಕಾಳುಗಳು, ಅಕ್ಕಿ, ಹಿಟ್ಟು ಇತ್ಯಾದಿಗಳನ್ನು ದಾನ ಮಾಡಿ.

ಬಡವರು ಮತ್ತು ನಿರ್ಗತಿಕರಿಗೆ ಬಟ್ಟೆ, ಮಲಗುವಾಗ ಹೊದ್ದುಕೊಳ್ಳಲು ಬೆಡ್​​ ಶೀಟ್ ಇತ್ಯಾದಿಗಳನ್ನು ದಾನ ಮಾಡುವ ಮೂಲಕ ಅವರ ಆಶೀರ್ವಾದವನ್ನು ಪಡೆಯುತ್ತಾರೆ.

Also Read:  No Entry for Men Devotees – ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಹಣ, ನಾಣ್ಯ ಇತ್ಯಾದಿಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ನೀಗಿಸುತ್ತದೆ.

ಅನುಕೂಲವಾದರೆ ಚಿನ್ನವನ್ನೂ ದಾನ ಮಾಡಿ. ಹಸುವಿಗೆ ಆಹಾರ, ನೀರು ಒದಗಿಸಿ.

ಮನೆಯಲ್ಲಿ ಪರಿಶುದ್ಧ ಪರಿಸರಕ್ಕಾಗಿ ಗಿಡಗಳನ್ನು ನೆಟ್ಟು ಆರೈಕೆ ಮಾಡಿ.

ವಾಸುದೇವ ದ್ವಾದಶಿಯ ಮಹತ್ವ ಹಿಂದೂ ನಂಬಿಕೆಗಳ ಪ್ರಕಾರ, ವಾಸುದೇವ ದ್ವಾದಶಿ ಉಪವಾಸವನ್ನು ಭಕ್ತಿ ಹೃದಯದಿಂದ ಆಚರಿಸುವ ಮತ್ತು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುವ ವ್ಯಕ್ತಿಯ ಜೀವನದಲ್ಲಿ ಎಂದಿಗೂ ದುಃಖವನ್ನು ಎದುರಿಸಬೇಕಾಗಿಲ್ಲ. ಇನ್ನು ಸಂತಾನವನ್ನು ಹೊಂದಲು ಬಯಸುವ ವಿವಾಹಿತ ದಂಪತಿಗಳು ಈ ಉಪವಾಸವನ್ನು ಆಚರಿಸಬೇಕು. ಈ ಉಪವಾಸವನ್ನು ದೇವಶಯನಿ ಏಕಾದಶಿಯ ನಂತರ ಮಾರನೆಯ ದಿನ ಆಚರಿಸಲಾಗುತ್ತದೆ ಮತ್ತು ಈ ಉಪವಾಸವನ್ನು ಆಚರಿಸುವುದರಿಂದ ಕೊನೆಯಲ್ಲಿ ಮೋಕ್ಷವನ್ನು ಪಡೆಯುತ್ತಾನೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ