Daily Devotional: ದೇವರ ನಾಮ ಜಪಿಸುವುದರಿಂದ ಆಗುವ ಲಾಭವೇನು? ಈ ವಿಡಿಯೋ ನೋಡಿ

Daily Devotional: ದೇವರ ನಾಮ ಜಪಿಸುವುದರಿಂದ ಆಗುವ ಲಾಭವೇನು? ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Jul 18, 2024 | 6:49 AM

ಈ ವಿಶ್ವವನ್ನು ಸೃಷ್ಟಿಸಿ, ಸಕಲ ಜೀವರಾಶಿಗಳ ಪಾಲನೆ, ಪೋಷಣೆ ಮತ್ತು ಲಯದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಸರ್ವೇಶ್ವರನನ್ನು ಹೊಂದಿ ಆತನಲ್ಲಿ ಏಕರೂಪವಾಗಲು ಇರುವ ಯೋಗ ಮಾರ್ಗಗಳು ಅನೇಕ. ಭಗವಂತನ ಕೃಪೆಗೆ ಪಾತ್ರರಾಗಲು ಆತನ ನಾಮ ಜಪವೂ ಒಂದು. ದೇವರ ನಾಮವನ್ನು ಜಪಿಸುವುದು ಹೇಗೆ? ದೇವರ ನಾಮ ಜಪಿಸುವುದರಿಂದ ಏನೆಲ್ಲ ಪ್ರಯೋಜನವಾಗಲಿದೆ? ಈ ವಿಡಿಯೋ ನೋಡಿ.

ಈ ವಿಶ್ವವನ್ನು ಸೃಷ್ಟಿಸಿ, ಸಕಲ ಜೀವರಾಶಿಗಳ ಪಾಲನೆ, ಪೋಷಣೆ ಮತ್ತು ಲಯದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಸರ್ವೇಶ್ವರನನ್ನು ಹೊಂದಿ ಆತನಲ್ಲಿ ಏಕರೂಪವಾಗಲು ಇರುವ ಯೋಗ ಮಾರ್ಗಗಳು ಅನೇಕ. ಭಗವಂತನ ಕೃಪೆಗೆ ಪಾತ್ರರಾಗಲು ಆತನ ನಾಮ ಜಪವೂ ಒಂದು. ‘ನಾಮ’ ಎಂದರೇನು? ದೇವರ ಅಸಂಖ್ಯ ಹೆಸರುಗಳಲ್ಲೊಂದು. ‘ಸ್ಮರಣೆ’ ಎಂದರೆ ‘ಧ್ಯಾನ’ ಅಥವಾ ನೆನಪು. ‘ಜಪ’ ಎಂದರೆ ಯಾವುದೇ ಒಂದು ಅಕ್ಷರ, ಶಬ್ದ, ಮಂತ್ರ ಅಥವಾ ವಾಕ್ಯವನ್ನು ಮತ್ತೆ ಮತ್ತೆ ಹೇಳುತ್ತಾ ಇರುವುದು. ‘ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕ: ಎಂದರೆ ಯಾವುದು ಜನ್ಮ ಜನ್ಮಾಂತರಗಳ ಪಾಪವನ್ನು ನಾಶ ಮಾಡಿ ಜನನ ಮರಣಗಳ ಚಕ್ರದಿಂದ ನಮ್ಮನ್ನು ಬಿಡಿಸುತ್ತದೆಯೋ ಅದುವೇ ‘ಜಪ’. ಒಟ್ಟಿನಲ್ಲಿ ‘ನಾಮ ಜಪ’ವೆಂದರೆ ದೇವರ ನಾಮವನ್ನು ಈಶ್ವರ ಪ್ರಾಪ್ತಿಯ ಸಾಧನೆಯೆಂದು ಪುನಃ ಪುನಃ ಹೇಳುತ್ತಿರುವುದು. ದೇವರ ನಾಮವನ್ನು ಜಪಿಸುವುದು ಹೇಗೆ? ದೇವರ ನಾಮ ಜಪಿಸುವುದರಿಂದ ಏನೆಲ್ಲ ಪ್ರಯೋಜನವಾಗಲಿದೆ? ಈ ವಿಡಿಯೋ ನೋಡಿ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.​