ಶಿರೂರ ಗುಡ್ಡ ಕುಸಿತ: ನದಿಗೆ ಕೊಚ್ಚಿ ಹೋದ ಗ್ಯಾಸ್ ಟ್ಯಾಂಕರ್​ ಬಗ್ಗೆ ಹೆಚ್ಚಿದ ಆತಂಕ

ಸುರಿಯೋ ಮಳೆ ಲೆಕ್ಕಕ್ಕಿಲ್ಲ...ಕ್ಷಣಕ್ಷಣಕ್ಕೂ ಗುಡ್ಡ ಕುಸಿಯುತ್ತಿದ್ರೂ ಕಾರ್ಯಾಚರಣೆ ನಿಂತಿಲ್ಲ..ಭೋರ್ಗರೆಯೋ ನದಿಯಲ್ಲೇ ಶೋಧ ಕಾರ್ಯ ನಡೆಯುತ್ತಿದೆ...ಗುಡ್ಡದಂತಿರೋ ಮಣ್ಣಿನ ರಾಶಿಯಡಿ ಸರ್ಚ್‌ ಮಾಡ್ತಿದ್ದಾರೆ. ಎನ್‌ಡಿಆರ್‌ಎಫ್‌ನ ಈ ಬಿಗ್ ಆಪರೇಷನ್‌ ವೇಳೆ ಒಂದರ ಬಳಿಕ ಒಂದರಂತೆ ಶವಗಳು ಪತ್ತೆಯಾಗುತ್ತಲೇ ಇವೆ. ಶಿರೂರಿನ ಘೋರ ದುರಂತದಲ್ಲಿ ಸತ್ತವರೆಷ್ಟು? ಕಣ್ಮರೆ ಆದವರೆಷ್ಟು ಅನ್ನೋ ಮಾಹಿತಿಯೇ ಸಿಗ್ತಿಲ್ಲ. ಇದರ ಮಧ್ಯ ಇದೀಗ ನದಿಗೆ ಬಿದ್ದಿರುವ ಗ್ಯಾಸ್​ ಟ್ಯಾಂಕರ್​ ಬಗ್ಗೆ ಆತಂಕ ಹೆಚ್ಚಾಗಿದೆ.

ಶಿರೂರ  ಗುಡ್ಡ ಕುಸಿತ: ನದಿಗೆ ಕೊಚ್ಚಿ ಹೋದ ಗ್ಯಾಸ್ ಟ್ಯಾಂಕರ್​ ಬಗ್ಗೆ ಹೆಚ್ಚಿದ ಆತಂಕ
| Updated By: ರಮೇಶ್ ಬಿ. ಜವಳಗೇರಾ

Updated on: Jul 17, 2024 | 10:36 PM

ಕಾರವಾರ, (ಜುಲೈ 17): ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿನ್ನೆ (ಜುಲೈ 16) ಘೋರ ದುರಂತ ಸಂಭವಿಸಿದೆ, ದಿಢೀರ್ ಅಂತಾ ಗುಡ್ಡ ಕುಸಿತವಾಗಿದ್ದರಿಂದ ಗ್ಯಾಸ್‌ ಟ್ಯಾಂಕರ್‌, ಲಾರಿ ಹಾಗೂ ಎರಡು ಹೋಟೆಲ್‌ಗಳು ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿವೆ. ಹೋಟೆಲ್‌ನಲ್ಲಿ ಇದ್ದವರು, ಲಾರಿ, ಕಾರ್‌ನಲ್ಲಿ ಇದ್ದವರು ಸೇರಿದಂತೆ 20 ಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿರೋ ಶಂಕೆ ಇದೆ. ಇದುವರೆಗೂ ನಾಲ್ವರ ಮೃತದೇಹ ಪತ್ತೆ ಆಗಿದೆ. ಹೋಟೆಲ್ ಮಾಲೀಕ ಲಕ್ಷ್ಮಣ​ ನಾಯ್ಕ್, ಪತ್ನಿ ಶಾಂತಿ, ಪುತ್ರ ರೋಷನ್, ಟ್ರಕ್​​​​ ಚಾಲಕನ ಶವ ಪತ್ತೆ ಗೋಕರ್ಣ ಸಮೀಪ ಪತ್ತೆ ಆಗಿವೆ. ಗುಡ್ಡ ಕುಸಿತದ ತೀವ್ರತೆ ಎಷ್ಟಿತ್ತು ಅಂದ್ರೆ ಸಾವಿರಾರು ಟನ್‌ ಮಣ್ಣು ಗಂಗಾವಳಿ ನದಿ ಸೇರುತ್ತಿದ್ದಂತೆ ಮಿನಿ ಸುನಾಮಿಯೇ ಸೃಷ್ಟಿಯಾಗಿತ್ತು. ನದಿಯ ಆ ಕಡೆ ಬದಿಯಲ್ಲಿದ್ದ ಎರಡು ಮನೆಗಳು ಸಂಪೂರ್ಣ ನೆಲಸಮ ಆಗಿವೆ. ಮನೆಯಲ್ಲಿ ಆರು ಮಂದಿ ಬಚಾವ್ ಆಗಿದ್ರೆ, ವೃದ್ಧೆ ನಾಪತ್ತೆ ಆಗಿದ್ದಾರೆ.

ಗುಡ್ಡ ಕುಸಿತದಿಂದ ನದಿಗೆ ಕೊಚ್ಚಿ ಹೋಗಿದ್ದ ಗ್ಯಾಸ್‌ ಟ್ಯಾಂಕರ್, ಘಟನಾ ಸ್ಥಳದಿಂದ ಐದು ಕಿಲೋಮೀಟರ್‌ ತೇಲಿ ಹೋಗಿದೆ. ಟ್ಯಾಂಕರ್‌ನಲ್ಲಿ ಎಲ್‌ಪಿಜಿ ಗ್ಯಾಸ್ ಇರೋದ್ರಿಂದ ಎಲ್ಲಾದ್ರೂ ಸೇತುವೆ, ಕಲ್ಲಿಗೆ ಡಿಕ್ಕಿಯಾದ್ರೆ ಸ್ಫೋಟ ಆಗೋ ಸಾಧ್ಯತೆ ಇದೆ. ಹೀಗಾಗಿ ಎನ್‌ಡಿಆರ್‌ಎಫ್‌ ತಂಡ ಹರಸಾಹಸ ಮಾಡಿ ಮುಂದಕ್ಕೆ ಹೋಗದಂತೆ ಹಗ್ಗಕಟ್ಟಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.​

Follow us
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ