AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಾಮಣಿಯನ್ನು ಜಲಸುರಕ್ಷಿತ ನಗರವನ್ನಾಗಿಸಲು 4 ವರ್ಷಗಳ ಯೋಜನೆ ಘೋಷಣೆ: ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣಕ್ಕೆ ಹಲವು ಕ್ರಮ

ಚಿಂತಾಮಣಿಯನ್ನು ಜಲಸುರಕ್ಷಿತ ನಗರವನ್ನಾಗಿ ಮಾಡಲು ಗ್ರೋ ಫೌಂಡೇಶನ್, ವೆಲ್ ಲ್ಯಾಬ್ಸ್ ಮತ್ತು ನಗರಸಭೆ ಸಹಯೋಗದಲ್ಲಿ ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣ ಮತ್ತು ಕುಡಿಯುವ ನೀರಿನ ಪೂರೈಕೆಗೆ 4 ವರ್ಷಗಳ ಮಹತ್ವದ ಯೋಜನೆ ಘೋಷಿಸಲಾಗಿದೆ. ಅಷ್ಟಕ್ಕೂ ಈ ಯೋಜನೆ ಯಾಕೆ ಮುಖ್ಯ ಎಂಬ ಮಾಹಿತಿ ಇಲ್ಲಿದೆ.

ಚಿಂತಾಮಣಿಯನ್ನು ಜಲಸುರಕ್ಷಿತ ನಗರವನ್ನಾಗಿಸಲು 4 ವರ್ಷಗಳ ಯೋಜನೆ ಘೋಷಣೆ: ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣಕ್ಕೆ ಹಲವು ಕ್ರಮ
ಚಿಂತಾಮಣಿಯ ಜಲ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ನಡೆದ ಸಭೆ
ಪ್ರಸನ್ನ ಹೆಗಡೆ
|

Updated on:Nov 18, 2026 | 2:15 PM

Share

ಕೋಲಾರ, ನವೆಂಬರ್​​ 18: ಚಿಂತಾಮಣಿಯನ್ನು ಜಲಸುರಕ್ಷಿತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ 4 ವರ್ಷಗಳ ಯೋಜನೆಯನ್ನು ಪ್ರಾರಂಭದ ಬಗ್ಗೆ ಗ್ರೋ ಫೌಂಡೇಶನ್, ವೆಲ್ ಲ್ಯಾಬ್ಸ್ ಮತ್ತು ಚಿಂತಾಮಣಿಯ ನಾಯಕರು ಘೋಷಿಸಿದ್ದಾರೆ. ಕೆರೆಗಳ ಪುನಶ್ಚೇತನ, ಹೆಚ್ಚುವರಿ ಕುಡಿಯುವ ನೀರಿನ ಮೂಲಗಳ ಅಭಿವೃದ್ಧಿ, ಅಂತರ್ಜಲ ಮರುಪೂರಣ ಮತ್ತು ಎಲ್ಲರಿಗೂ ಸಮಾನವಾಗಿ ನೀರು ಲಭ್ಯವಾಗುವಂತೆ ಮಾಡುವ ಮೂಲಕ ನಗರದಲ್ಲಿ ಜಲಸುರಕ್ಷತೆಯನ್ನು ಬಲಪಡಿಸಲು ಒಟ್ಟಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ. ಚಿಂತಾಮಣಿ ನಗರಸಭೆ ಮತ್ತು ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳ ನಿಕಟ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ಚಿಂತಾಮಣಿಯ ಜಲ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದ್ದು, ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿಂತಾಮಣಿ ನಗರಸಭೆ ಆಯುಕ್ತರಾದ ಜಿ.ಎನ್. ಚಲಪತಿ, ಗ್ರೋ ಫೌಂಡೇಶನ್ ಮುಖ್ಯಸ್ಥರಾದ ಕಲ್ಪನಾ ಸ್ವಾಮಿನಾಥನ್ ಮತ್ತು ವೆಲ್ ಲ್ಯಾಬ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೀಣಾ ಶ್ರೀನಿವಾಸನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಯೋಮ್ ಏನ್ವಿರಾನ್ಮೆಂಟಲ್‌ ಟ್ರಸ್ಟ್‌, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್‌ಮೆಂಟ್ಸ್ (IIHS), ಫೌಂಡೇಶನ್ ಫಾರ್ ಇನ್‌ಕ್ಲೂಸಿವ್ ಅಂಡ್ ಸಸ್ಟೈನಬಲ್ ಹ್ಯಾಬಿಟಾಟ್ಸ್ (FISH), ಟೈಡ್ ಇಂಡಿಯಾ (TIDE India), ಮತ್ತು ಬೋರ್ಡಾ ಸೌತ್ ಏಷ್ಯಾ (BORDA South Asia) ಮುಂತಾದ ಸಂಸ್ಥೆಗಳು ಕೂಡ ಭಾಗವಹಿಸಿದ್ದವು.

ಇದನ್ನೂ ಓದಿ: ಅಕ್ರಮ ಮರಳು ಮಾಫಿಯಾ ಜೊತೆ ಪೊಲೀಸರ ನಂಟು ಬಯಲು: ಪಿಎಸ್ಐ ವಿದ್ಯಾಶ್ರೀ, ಕಾನ್ಸ್‌ಟೇಬಲ್ ಪ್ರವೀಣ್ ಅಮಾನತು

ಯೋಜನೆಯಡಿ ಏನೆಲ್ಲ ಕೆಲಸ?

  • ಚಿಂತಾಮಣಿಯ ಕೆರೆಗಳ ಪುನಶ್ಚೇತನ: ಹಾಳಾಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸುವುದು, ಅವುಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು, ಮಾಲಿನ್ಯದಿಂದ ರಕ್ಷಿಸುವುದು ಮತ್ತು ಅಂತರ್ಜಲ ಮರುಪೂರಣ ಸಾಮರ್ಥ್ಯವನ್ನು ವೃದ್ಧಿಸುವುದು. ಸಾಧ್ಯವಿರುವ ಕಡೆಗಳಲ್ಲಿ, ಚಿಂತಾಮಣಿಗೆ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸಲು ಕೆರೆಗಳನ್ನು ಮೇಲ್ದರ್ಜೆಗೇರಿಸುವುದು.
  • ನಗರದ ಮಧ್ಯಭಾಗದಲ್ಲಿ ಅಂತರ್ಜಲ ಮರುಪೂರಣಕ್ಕೆ ಉತ್ತೇಜನ: ಎರಡು ಸಾರ್ವಜನಿಕ ಉದ್ಯಾನವನಗಳನ್ನು ‘ಸ್ಪಾಂಜ್ ಪಾರ್ಕ್’ಗಳಾಗಿ ಪರಿವರ್ತಿಸುವ ಮೂಲಕ ಮತ್ತು ಸಾರ್ವಜನಿಕ ಆವರಣಗಳಲ್ಲಿ ಮೇಲ್ಛಾವಣಿ ಮಳೆನೀರು ಕೊಯ್ಲು ಹಾಗೂ ಅಂತರ್ಜಲ ಮರುಪೂರಣ ರಚನೆಗಳನ್ನು ಅಳವಡಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸುವುದು.
  • ನಗರದ ಬಡ ಸಮುದಾಯಗಳಿಗೆ ನೀರಿನ ಲಭ್ಯತೆ: ಕೊಳವೆ ನೀರು ಸರಬರಾಜು ಮತ್ತು ಸಂಪರ್ಕವನ್ನು ಸುಧಾರಿಸುವ ಮೂಲಕ ನಗರದ -ಬಡ ಸಮುದಾಯಗಳಿಗೆ ನೀರಿನ ಲಭ್ಯತೆ ಮತ್ತು ಭದ್ರತೆಯನ್ನು ಒದಗಿಸುವುದು.
  • ತಾಂತ್ರಿಕ ನೆರವು: ಸಮಗ್ರ ನಗರ ಜಲ ನಿರ್ವಹಣೆಯಲ್ಲಿ ಚಿಂತಾಮಣಿ ನಗರವು ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ತಾಂತ್ರಿಕ ನೆರವು ನೀಡುವುದು.

ಯೋಜನೆ ಏಕೆ ಮುಖ್ಯ?

ಚಿಂತಾಮಣಿಯು ತನ್ನ ನೀರಿನ ಅಗತ್ಯಗಳಿಗಾಗಿ ಅಂತರ್ಜಲ ಮತ್ತು ಕೊಳವೆಬಾವಿಗಳನ್ನೇ ವ್ಯಾಪಕವಾಗಿ ಅವಲಂಬಿಸಿರುವ ಒಂದು ಸಣ್ಣ ನಗರವಾಗಿದೆ. ನಗರಸಭೆಯ ಕೊಳವೆಬಾವಿಗಳು 1,000 ದಿಂದ 1,600 ಅಡಿಗಳಷ್ಟು ಆಳಕ್ಕೆ ಹೋಗುತ್ತಿದ್ದರೂ, ಬೆಳೆಯುತ್ತಿರುವ ಚಿಂತಾಮಣಿಯಂತಹ ನಗರದ ಗೃಹಬಳಕೆಯ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಚಿಂತಾಮಣಿಯು ವಿಶೇಷವಾಗಿ ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಬರಗಾಲದ ಸಮಯದಲ್ಲಿ ಶೇ. 70ರಷ್ಟು ಬಾವಿಗಳು ಬತ್ತಿಹೋಗುವ ಸಾಧ್ಯತೆಯಿದ್ದು, ಇದು ಚಿಂತಾಮಣಿಯ ನಿವಾಸಿಗಳನ್ನು ಹವಾಮಾನ ಬದಲಾವಣೆಯ ಅಪಾಯಕ್ಕೆ ತಳ್ಳುತ್ತದೆ. ಇದರ ಮಧ್ಯೆ, ನಗರದ ನಿರ್ವಹಣಾ ವೆಚ್ಚದ ಸುಮಾರು ಶೇ. 40ರಷ್ಟು ಭಾಗವನ್ನು ನೀರು ಸರಬರಾಜು ಮೂಲಸೌಕರ್ಯವನ್ನು ನಡೆಸಲು ಬಳಸಲಾಗುತ್ತಿದೆ, ಇದರಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಿಲ್‌ಗಳೂ ಸೇರಿವೆ. ಅದೇ ಸಮಯದಲ್ಲಿ, ಚಿಂತಾಮಣಿ ನಗರವು ಕೆರೆಗಳ ಜಾಲದಿಂದ ಸುತ್ತುವರೆದಿದೆ. ಒಳಚರಂಡಿ ನೀರು ಮತ್ತು ಕಸ ಸೇರುತ್ತಿರುವುದರಿಂದ ಹೆಚ್ಚಿನ ಕೆರೆಗಳು ನೀರಿನ ಬಳಕೆಗೆ ಯೋಗ್ಯವಿಲ್ಲದಂತಾಗಿವೆ, ಆದರೆ ನಗರದ ನೀರು ಸರಬರಾಜಿಗೆ ಕೊಡುಗೆ ನೀಡುವಲ್ಲಿ ಇವುಗಳಿಗೆ ಗಮನಾರ್ಹ ಸಾಮರ್ಥ್ಯವಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:13 pm, Wed, 18 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ