ಪೋಷಕರು ಬುದ್ದಿವಾದ ಹೇಳಿದಕ್ಕೆ ಆತ್ಮಹತ್ಯೆ ಮಾಡಿಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ

ಪೋಷಕರು ಅಂದ ಮೇಲೆ ತಮ್ಮ ಮಕ್ಕಳು ತಪ್ಪು ಮಾಡಿದಾಗ ಬೈಯುವುದು ಸಾಲದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಏಟು ಹೊಡೆಯುತ್ತಾರೆ. ಅದರಂತೆ ಪಾಲಕರು ಬುದ್ಧಿವಾದ ಹೇಳಿದಕ್ಕೆ 9ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೋಷಕರು ಬುದ್ದಿವಾದ ಹೇಳಿದಕ್ಕೆ ಆತ್ಮಹತ್ಯೆ ಮಾಡಿಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ
ಆತ್ಮಹತ್ಯೆ ಮಾಡಿಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 05, 2023 | 11:18 PM

ಕೋಲಾರ: ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಕೋಲಾರ (Kolar) ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮದ ಬಾಲಕ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಪೋಷಕರು ಬುದ್ದಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಉದಯ್ ಕುಮಾರ್ ಸೋಮವಾರ ವಿಷ ಸೇವಿಸಿದ್ದ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು(ಜನವರಿ 05) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ತಾತಿಕಲ್ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉದಯ್ ಕುಮಾರ್ , ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಸೋಮವಾರ ವಿಷಸೇವಿಸಿದ್ದ, ಕೂಡಲೇ ಉದಯ್ ಕುಮಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳು ಈ ರೀತಿ ಮಾಡಿಕೊಳ್ಳುವುದಕ್ಕೆ ಅನೇಕ ಬಾರಿ ಪೋಷಕರೂ ಸಹ ಕಾರಣರಾಗಿರುತ್ತಾರೆ. ಅತಿಯಾದ ಕಾಳಜಿ ಅತಿಯಾದ ಬೇಜವಾಬ್ದಾರಿ ಮಕ್ಕಳನ್ನು ಕೈತಪ್ಪಿಹೋಗುವಂತೆ ಮಾಡುತ್ತವೆ. ಅತಿಯಾದ ಬಿಗಿ ಹಿಡಿತ ಅಥವಾ ಅತಿಯಾದ ಸಡಿಲತೆ ನಮ್ಮ ಕೈಯಿಂದ ಎಲ್ಲವನ್ನೂ ಜಾರಿಹೋಗುವಂತೆ ಮಾಡುತ್ತವೆ.

ಇನ್ನು ಪೋಷಕರು ಅಂದ ಮೇಲೆ ತಮ್ಮ ಮಕ್ಕಳು ತಪ್ಪು ಮಾಡಿದಾಗ ಬೈಯುವುದು ಸಾಲದಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಏಟು ಹೊಡೆಯುತ್ತಾರೆ. ನಮ್ಮನ್ನು ಹೊತ್ತು ಹೆತ್ತ ಪೋಷಕರಿಗೆ ಅಷ್ಟು ಅಧಿಕಾರ ಇಲ್ಲವಾದರೆ ಹೇಗೆ ಅಲ್ವಾ? ಆದ್ರೆ, ಪಾಲಕರು ಬೈದ್ರು, ಹೊಡೆದ್ರು ಅಂತ ಮಕ್ಕಳು ಈ ರೀತಿ ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ