AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪಿಡಿಒ

ಶ್ರೀನಿವಾಸಪುರ ತಾಲ್ಲೂಕಿನ ‌ಲಕ್ಷ್ಮೀಪುರ ಗ್ರಾಮ‌ಪಂಚಾಯತ ಅಭಿವೃದ್ದಿ ಅಧಿಕಾರಿ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪಿಡಿಒ
ಭ್ರಷ್ಟಾಚಾರ ನಿಗ್ರಹ ದಳ
TV9 Web
| Edited By: |

Updated on:Jul 26, 2022 | 8:18 PM

Share

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ‌ಲಕ್ಷ್ಮೀಪುರ ಗ್ರಾಮ‌ಪಂಚಾಯತ ಅಭಿವೃದ್ದಿ ಅಧಿಕಾರಿ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ. ಅಧಿಕಾರಿ ಶಂಕರಪ್ಪ, ವೆಂಕಟರಾಜು ಎಂಬುವವರ ಬಳಿ ಖಾತೆ ಬದಲಾವಣೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದನು.  ವೆಂಕಟರಾಜು ಎಂಬುವರಿಂದ ೧೫ ಸಾವಿರ ಬೇಡಿಕೆ ಇಟ್ಟು‌ ಮುಂಗಡ ೨ ಪಡೆದಿದ್ದನು. ಇಂದು (ಜುಲೈ 26) ಲಕ್ಣ್ಮೀ ಪುರ ಮಯೂರಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ೧೩ ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಡಿವೈಎಸ್ ಸುಧೀರ್ ನೇತೃತ್ವದ ಅಧಿಕಾರಿಳು ದಾಳಿ ನಡೆಸಿದಾಗ ಸಿಕ್ಕಿಹಾಕಿಕೊಂಡಿದ್ದಾನೆ.

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಡಿಎಚ್​​ಒ ಕಚೇರಿ ಸಿಬ್ಬಂದಿ

ಚಾಮರಾಜನಗರ: ಲಂಚ ಸ್ವೀಕರಿಸುತ್ತಿರುವ ವೇಳೆ ಡಿಎಚ್​ಒ ಕಚೇರಿ ಎಫ್​​ಡಿಎ ಮಹೇಶ್ ಎಸಿಬಿ ಬಲೆಗೆ ಬಿದ್ದಿದ್ದಾನೆ.  ಎಫ್​​ಡಿಎ ಮಹೇಶ್  ಜಿಲ್ಲಾಡಳಿತ ಭವನದ ಆವರಣದ ಹೋಟೆಲ್​ನಲ್ಲಿ 3 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಸಿಕ್ಕಿ ಹಾಕಿಕೊಂಡಿದ್ದಾನೆ.

ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಪ್ರದೀಪ್‌ ಬಳಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಈ ವೇಳೆ ಮುಂಗಡವಾಗಿ 3 ಸಾವಿರ ರೂ. ಹಣ ಪಡೆಯುವಾಗ ವಶಕ್ಕೆ ಪಡೆಯಲಾಗಿದೆ.

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಎಫ್​ಡಿಎ ಅಧಿಕಾರಿ

ತುಮಕೂರು: ಎಫ್​ಡಿಎ ಅಧಿಕಾರಿ ಮಧುಗಿರಿ ಎಸಿ ಕಛೇರಿಯಲ್ಲಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮೋಹನ್ ಕುಮಾರ್, ಎಸಿಬಿ ಬಲೆಗೆ ಬಿದ್ದ ಎಫ್ ಡಿಎ ಅಧಿಕಾರಿ. ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ಮಾದೇನಹಳ್ಳಿ ಗ್ರಾಮದ ಜಮೀನು ಖಾತೆ ಮಾಡಿಕೊಡುವ ವಿಚಾರಕ್ಕೆ ಮೋಹನ್ ಕುಮಾರ್ 3 ಸಾವಿರಕ್ಕೆ ಬೇಡಿಕೆಯಿಟ್ಟಿದ್ದನು.

ಈ ಸಂಬಂಧ ತುಮಕೂರು ರೈತ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಇಂದು (ಜುಲೈ 26) ಎಸಿಬಿ ಟ್ರ್ಯಾಪ್‌ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ.

Published On - 4:10 pm, Tue, 26 July 22

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು