ಉಲ್ಟಾ ಹೊಡೆದ ರೈತರ ಲೆಕ್ಕಾಚಾರ, ಪ್ರಕೃತಿಯ ಮುನಿಸು ದೇಶ ವಿದೇಶಕ್ಕೆ ಟೊಮೇಟೊ ರಪ್ತು ಮಾಡುತ್ತಿದ್ದ ಮಾರುಕಟ್ಟೆಗೆ ಬರಗಾಲ

ಏಷ್ಯಾದಲ್ಲೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆ ಸದಾ ಜನರಿಂದ ತುಂಬಿ ತುಳುಕುತ್ತಿದ್ದು ಈಗ ಖಾಲಿ ಖಾಲಿ ಹೊಡೆಯುತ್ತಿದೆ. ಅಲ್ಲಲ್ಲಿ ಅಲ್ಪ ಸ್ವಲ್ಪ ಟೊಮೇಟೊ ಬಾಕ್ಸ್ಗಳು ಕಂಡು ಬರುತ್ತಿವೆ.

ಉಲ್ಟಾ ಹೊಡೆದ ರೈತರ ಲೆಕ್ಕಾಚಾರ, ಪ್ರಕೃತಿಯ ಮುನಿಸು ದೇಶ ವಿದೇಶಕ್ಕೆ ಟೊಮೇಟೊ ರಪ್ತು ಮಾಡುತ್ತಿದ್ದ ಮಾರುಕಟ್ಟೆಗೆ ಬರಗಾಲ
ಟೊಮೇಟೊ
Follow us
TV9 Web
| Updated By: ಆಯೇಷಾ ಬಾನು

Updated on:May 22, 2022 | 10:39 PM

ಕೋಲಾರ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಹಾಗೂ ಉಲ್ಟಾಹೊಡೆದ ರೈತರ ಲೆಕ್ಕಾಚಾರದ ಪರಿಣಾಮವಾಗಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲೇ ಟೊಮೇಟೊಗೆ ಬರ ಬಂದಿದೆ. ರಪ್ತು ಮಾಡುತ್ತಿದ್ದವರೇ ಈಗ ಆಮದು ಮಾಡಿಕೊಳ್ಳುವ ಸ್ಥಿತಿ ಬಂದಿದೆ.

ಟೊಮೇಟೊ ಸೀಸನ್ನಲ್ಲೇ ಖಾಲಿ ಖಾಲಿ ಹೊಡೆಯುತ್ತಿದೆ ಮಾರುಕಟ್ಟೆ ಏಷ್ಯಾದಲ್ಲೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆ ಸದಾ ಜನರಿಂದ ತುಂಬಿ ತುಳುಕುತ್ತಿದ್ದು ಈಗ ಖಾಲಿ ಖಾಲಿ ಹೊಡೆಯುತ್ತಿದೆ. ಅಲ್ಲಲ್ಲಿ ಅಲ್ಪ ಸ್ವಲ್ಪ ಟೊಮೇಟೊ ಬಾಕ್ಸ್ಗಳು ಕಂಡು ಬರುತ್ತಿವೆ. ವರ್ಷದ 365 ದಿನಗಳಲ್ಲೂ ಟೊಮೇಟೊ ಬೆಳೆದು ರಪ್ತು ಮಾಡುತ್ತಿದ್ದ ಮಾರುಕಟ್ಟೆ ಅದರಲ್ಲೂ ಮೇ ತಿಂಗಳಿಂದ ಆಗಸ್ಟ್ ತಿಂಗಳು ಬಂತೆಂದರೆ ಸಾಕು ಕೋಲಾರ ಮರುಕಟ್ಟೆಯಲ್ಲಿ ಟೊಮೇಟೊ ತುಂಬಿ ತುಳುಕುತ್ತಿತ್ತು ಆದರೆ ಈ ವರ್ಷ ಎಲ್ಲರ ಲೆಕ್ಕಾಚಾರಗಳು ಉಲ್ಟಾಹೊಡೆದಿದ್ದು ದೇಶ ವಿದೇಶಕ್ಕೆ ರಪ್ತು ಮಾಡುತ್ತಿದ್ದವರೇ ಈಗ ಬೇರೆ ರಾಜ್ಯಗಳಿಂದ ಟೊಮೇಟೊವನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಇದನ್ನೂ ಓದಿ: ತುಮಕೂರಿನ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಕೈಯಿಂದ ಮಗನಿಗೆ ನಾಮಕರಣ ಮಾಡಿಸಿದ ಅಭಿಮಾನಿ; ತನ್ನ ಹೆಸರಿಟ್ಟು ಉಡುಗೊರೆ ಕೊಟ್ಟ ಸಿದ್ದು

ಉಲ್ಟಾಹೊಡೆದ ರೈತರ ಲೆಕ್ಕಾಚಾರ, ಪ್ರಕೃತಿಯ ಅವಕೃಪೆ ಕಳೆದ ನವೆಂಬರ್ನಿಂದ ನಿರಂತರವಾಗಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ, ಬೇಸಿಗೆಯಲ್ಲಿ ಮಿತಿ ಮೀರಿದ ತಾಪಮಾನದಿಂದ ಹಾಳಾಗಿರುವ ಬೆಳೆ, ಹಾಗೂ ಮೇಲಿಂದ ಮೇಲೆ ನಷ್ಟ ಅನುಭವಿಸಿ ಟೊಮೇಟೊಗೆ ಬೆಲೆ ಸಿಗುವುದಿಲ್ಲ ಅನ್ನೋ ಲೆಕ್ಕಾಚಾರದಲ್ಲಿ ಟೊಮೇಟೊ ಬೆಳೆ ಬೆಳೆಯಲು ರೈತರು ನಿರಾಸಕ್ತಿ ತೋರಿದರ ಪರಿಣಾಮ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೇಟೊ ಬೆಲೆ 80-100 ರೂಪಾಯಿಗೆ ಏರಿಕೆ ಕಂಡಿದೆ. ಒಂದು ತಿಂಗಳ ಹಿಂದಷ್ಟೇ ಟೊಮೇಟೊಗೆ ಬೆಲೆ ಇಲ್ಲದೆ ಕಂಗಾಲಾಗಿದ್ದ ಟೊಮ್ಯಾಟೋ ಬೆಳೆಗಾರರು ಸರ್ಕಾರ ಬೆಂಬಲ ಬೆಲೆ ಕೊಡಬೇಕು ಎಂದು ಆಗ್ರಹ ಮಾಡಿದ್ದರೂ ಆದರೆ ಒಂದೇ ತಿಂಗಳ ಅಂತರದಲ್ಲಿ ಈಗ ಏಕಾಏಕಿ ಟೊಮ್ಯಾಟೋಗೆ ದಿಡೀರ್ ಬೇಡಿಕೆ ಹೆಚ್ಚಾಗಿದೆ. ಕಾರಣ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಇದ್ದ ಬೆಳೆಯೆಲ್ಲಾ ಸಂಪೂರ್ಣವಾಗಿ ಹಾಳಾಗಿರೋದು ಕೂಡಾ ಒಂದು ಕಾರಣವಾಗಿದೆ ಅನ್ನೋದು ರೈತ ಮುನೇಗೌಡ ಅವರ ಮಾತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವರ್ಷಪೂರ್ತಿ ರಪ್ತು ಮಾಡುತ್ತಿದ್ದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳುವ ಸ್ಥಿತಿ ಬದಲಾದ ಇತಿಹಾಸ ಕಳೆದ ವರ್ಷ ಇದೇ ಮೇ-ಜೂನ್ ತಿಂಗಳಿಗೆ ಹೋಲಿಕೆ ಮಾಡಿ ನೋಡಿದರೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊ ಹೆಚ್ಚಾಗಿತ್ತು, ಜಿಲ್ಲೆಯ ಬಹುತೇಕ ರೈತರು ಟೊಮ್ಯಾಟೋ ಬೆಳೆದು ಮಾರುಕಟ್ಟೆ ತಂದು ಹಾಕಿದ್ರು. ಹದಿನೈದು ಕೆ.ಜಿ.ಯ ಒಂದು ಬಾಕ್ಸ್ ಟೊಮ್ಯಾಟೋ 180 ರಿಂದ 200 ರೂಪಾಯಿ ವರೆಗೆ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಕೋಲಾರ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲೂ ಕೂಡಾ ರೈತರು ಟೊಮೇಟೊ ಹೆಚ್ಚಾಗಿ ಬೆಳೆಯದ ಪರಿಣಾಮ ಕೋಲಾರದ ಎಪಿಎಂಸಿ ಮಾರುಕಟ್ಟೆಯ ಇತಿಹಾಸವೇ ಬದಲಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕಾರಣ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಹಾಗೂ ವಿದೇಶಗಳಿಗೂ ರಪ್ತು ಮಾಡುತ್ತಿದ್ದ ಮಾರುಕಟ್ಟೆಗೆ ಈಗ ಹೊರ ರಾಜ್ಯಗಳಿಂದ ಟೊಮೇಟೊವನ್ನು ಆಮದು ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಓರಿಸ್ಸಾ, ಮಹಾರಾಷ್ಟ, ನಾಸಿಕ್, ಗುಜರಾತ್ ನಿಂದ ಟೊಮೇಟೊವನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಬಂದಿದೆ ಅನ್ನೋದು ಮಂಡಿ ಮಾಲೀಕರಾದ ಪುಟ್ಟರಾಜು ಅವರ ಮಾತು.

ಒಟ್ಟಾರೆ ಟೊಮೇಟೊ ವ್ಯಾಪಾರವೇ ಒಂದು ರೀತಿಯ ಜೂಜಾಟದಂತಾಗಿದ್ದು, ಒಂದು ಕಾಲದಲ್ಲಿ ವರ್ಷ ಪೂರ್ತಿ ಕೋಲಾರ ಜಿಲ್ಲೆಯಿಂದ ಇಡೀ ದೇಶಕ್ಕೆ ಟೊಮೇಟೊ ರಪ್ತು ಮಾಡುತ್ತಿದ್ದ ಮಾರುಕಟ್ಟೆಯಲ್ಲಿ ಈಗ ಕಾಲ ಬದಲಾಗಿದ್ದು ಕೋಲಾರಕ್ಕೆ ಟೊಮೇಟೊವನ್ನು ತರಿಸಿಕೊಳ್ಳುವ ಸ್ಥಿತಿ ಬಂದಿರೋದು ನೋಡಿದ ಮೇಲೆ ಕಾಲ ಯಾವಾಗಲೂ ಒಂದೇ ರೀತಿ ಇರೋದಿಲ್ಲ ಅನ್ನೋ ಮಾತು ನೆನಪಾಗುತ್ತದೆ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

Published On - 10:39 pm, Sun, 22 May 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್