ಮಹಿಳೆಯ ಕೊಂದು ಶವದೊಂದಿಗೇ ಸಂಭೋಗ! ವಿಕೃತ ಕಾಮಿ ಸೈಕೋ ಸಯ್ಯದ್ ಕೃತ್ಯಕ್ಕೆ ಬೆಚ್ಚಿಬಿದ್ದ ಕೋಲಾರ

| Updated By: Ganapathi Sharma

Updated on: Oct 11, 2024 | 3:04 PM

ಅದು ವಿಕೃತ ಕಾಮಿಯೊಬ್ಬ ಎಸಗಿದ್ದ ವಿಚಿತ್ರ ಘಟನೆ. ಆತ ರಸ್ತೆ ಬದಿಯಲ್ಲಿ ಕುಳಿತಿದ್ದ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಕಾಮ ತೃಷೆಗೆ ಬಲವಂತ ಮಾಡಿದ್ದಾನೆ. ಆಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ಕೊಂದು ಶವದೊಂದಿಗೆ ಸಂಭೋಗ ಮಾಡಿ ವಿಕೃತಿ ಮೆರೆದಿದ್ದಾನೆ. ತಾಯಿ ವಯಸ್ಸಿನ ಮಹಿಳೆಯ ಮೇಲೆ ಇಂಥ ವಿಕೃತಿ ಮೆರೆದಿರುವವ ಯಾರು? ಕೋಲಾರದ ಯಾವ ಪ್ರದೇಶದಲ್ಲಿ ಘಟನೆ ನಡೆದಿದೆ? ಸಂಪೂರ್ಣ ವಿವರ ತಿಳಿಯಲು ಮುಂದೆ ಓದಿ.

ಮಹಿಳೆಯ ಕೊಂದು ಶವದೊಂದಿಗೇ ಸಂಭೋಗ! ವಿಕೃತ ಕಾಮಿ ಸೈಕೋ ಸಯ್ಯದ್ ಕೃತ್ಯಕ್ಕೆ ಬೆಚ್ಚಿಬಿದ್ದ ಕೋಲಾರ
ಸಾಂದರ್ಭಿಕ ಚಿತ್ರ
Follow us on

ಕೋಲಾರ, ಅಕ್ಟೋಬರ್ 11: ಅದು ಸೆಪ್ಟಂಬರ್​ 25. ಇಡೀ ಕೋಲಾರ ಜಿಲ್ಲೆಯಲ್ಲಿ ಬಾಂಬ್​ ಆತಂಕ ಮನೆ ಮಾಡಿತ್ತು. ಕೋಲಾರ ನಗರದ ಹೊರವಲಯದ ಹೆದ್ದಾರಿ ಪಕ್ಕದ ಸರ್ವೀಸ್​ ರಸ್ತೆಯಲ್ಲಿ, ಟಮಕಾ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ರಸ್ತೆಯ ಬದಿಯಲ್ಲಿ ಸೂಟ್​ಕೇಸ್​ನಲ್ಲಿ ಬಾಂಬ್​ ಇಡಲಾಗಿದೆ ಎಂಬ ಸುದ್ದಿ ಇಡೀ ಜಿಲ್ಲೆಯನ್ನು ಆತಂಕಕ್ಕೀಡು ಮಾಡಿತ್ತು. ಪೊಲೀಸ್ ಇಲಾಖೆ ಕೂಡಾ ಅದನ್ನು ಪರಿಶೀಲನೆ ನಡೆಸುವಲ್ಲಿ ತಲ್ಲೀನರಾಗಿದ್ದರು. ಹೀಗಿರುವಾಗಲೇ ಕೋಲಾರ ಜಿಲ್ಲೆ ಮುಳಬಾಗಿಲು ನಗರ ಪೊಲೀಸ್ ಠಾಣೆಗೆ ಮಾಹಿತಿಯೊಂದು ಬಂದಿತ್ತು. ಮುಳಬಾಗಿಲು ಹೊರವಲಯದ ಹೈದರಿ ನಗರದ ಬಳಿ ಮಹಿಳೆಯೊಬ್ಬಳ ಮೃತ ದೇಹ ಪತ್ತೆಯಾಗಿತ್ತು. ಸ್ಥಳಕ್ಕ ಬೇಟಿ ನೀಡಿದ್ದ ಮುಳಬಾಗಿಲು ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು. ಈವೇಳೆ ಮಹಿಳೆಯ ಶವದ ಮೇಲೆ ಗಾಯಗಳಾಗಿದ್ದದ್ದು ಕಂಡು ಬಂದಿತ್ತು. ತಲೆಗೆ ಹೊಡೆದು ಯಾರೋ ಕೊಲೆ ಮಾಡಿರುವ ಅನುಮಾನ ಕೂಡಾ ವ್ಯಕ್ತವಾಗಿತ್ತು. ಜೊತೆಗೆ ಆಕೆ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವ ಸಾಧ್ಯತೆ ಕೂಡಾ ಇದೆ ಎಂಬ ಅನುಮಾನ ಪೊಲೀಸರನ್ನು ಕಾಡತೊಡಗಿತ್ತು.

ಈ ಮಧ್ಯೆ, ಅಲ್ಲಿ ಮೃತಪಟ್ಟಿದ್ದ ಮಹಿಳೆ ಯಾರೂ ಎಂಬುದರ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದರು. ಈವೇಳೆ ಅಲ್ಲಿ ಮೃತಪಟ್ಟಿದ್ದ ಮಹಿಳೆ, ಮುಳಬಾಗಿಲು ನಗರದ ಪಳ್ಳಿಗರಪಾಳ್ಯದ ಮೈಕ್​ ಶಂಕರ್​ ಎಂಬುವರ ಪತ್ನಿ ಸುಶೀಲಮ್ಮ ಎಂಬುದು ತಿಳಿದು ಬಂದಿತ್ತು. ಕೂಡಲೇ ಮೈಕ್​ ಶಂಕರ್​ರನ್ನು ಸ್ಥಳಕ್ಕೆ ಕರೆಸಿ ನೋಡಲಾಗಿ ಇದು ಸುಶೀಲಮ್ಮರ ಶವ ಎಂಬುದು ಖಚಿತವಾಗಿತ್ತು. ಇದಾದ ನಂತರ ಶವದ ಮರಣೋತ್ತರ ಪರೀಕ್ಷೆಗೆ ಕಳಿಸಿದ ಪೊಲೀಸರು ಇದನ್ನು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಸಿಕೊಂಡಿದ್ದರು. ಸಾವಿನ ಬಗ್ಗೆ ಸಾಕಷ್ಟು ಅನುಮಾನ ಶುರುವಾಗಿತ್ತು. ಅಲ್ಲಿ ಮೃತಪಟ್ಟಿದ್ದ ಮಹಿಳೆ ಸುಶೀಲಮ್ಮ ಸ್ವಲ್ಪ ಮಾನಸಿಕ ಅಸ್ವಸ್ಥೆ ಎಂಬ ಕಾರಣಕ್ಕೆ ಆಕೆಯನ್ನು ಅವಳ ಗಂಡನೇ ಕೊಲೆ ಮಾಡಿರಬಹುದೇ ಎಂಬ ಶಂಕೆಯೂ ಇತ್ತು. ಹಾಗಾಗಿ ಯಾವುದಕ್ಕೂ ಇರಲಿ ಎಂದು ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಹೀಗೆ ಸುಶೀಲಮ್ಮನ ಸಾವಿನ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮೊದಲು ಅನುಮಾನ ಶುರುವಾಗಿದ್ದೇ ಆಕೆಯ ಗಂಡ ಮೈಕ್​ ಶಂಕರ್​ ಮೇಲೆ. ಆತನನ್ನು ಕರೆಸಿ ವಿಚಾರಣೆ ಮಾಡಿದಾಗ ಆಕೆ ಕಳೆದ ಸುಮಾರು 20 ವರ್ಷಗಳಿಂದ ಹೀಗೆ ಮಾನಸಿಕ ಅಸ್ವಸ್ಥೆಯಂತಿದ್ದು ಆಕೆಯನ್ನು ಶಂಕರ್​ ಚೆನ್ನಾಗಿಯೇ ನೋಡಿಕೊಂಡಿದ್ದಾನೆ ಎಂಬುದು ಗೊತ್ತಾಗಿತ್ತು. ಅಲ್ಲದೆ ಪೊಲೀಸರು ಕೇಳುವ ಎಲ್ಲಾ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ, ನೀವು ಯಾವಾಗ ಕರೆದರೂ ನಾನು ಬರುತ್ತೇನೆ. ನಿಮ್ಮ ಯಾವುದೇ ಅನುಮಾನಕ್ಕೆ ನಾನು ಉತ್ತರ ನೀಡುವುದಾಗಿ ಹೇಳಿದ್ದರು. ಇದಾದ ಮೇಲೆ ಪೊಲೀಸರು ಪ್ರಕರಣದ ಅಸಲಿ ತನಿಖೆ ಶುರುಮಾಡಿದ್ದರು.

100ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ

ಮೊದಲು ಮುಳಬಾಗಿಲು ಎಪಿಎಂಸಿ ಮಾರ್ಕೆಟ್​ ರಸ್ತೆಯಲ್ಲಿರುವ ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅದರೆ ಒಂದೇ ಒಂದು ಸಿಸಿಟಿವಿ ಕ್ಯಾಮರಾದ ಒಂದು ಮೂಲೆಯಲ್ಲಿ ಸೆಪ್ಟಂಬರ್​-24 ರ ಮಧ್ಯರಾತ್ರಿ ಆಟೋ ಒಂದು ಓಡಾಡುವ ದೃಶ್ಯಗಳು ಆ ಜಾಗದಲ್ಲಿ ಕಂಡು ಬಂದಿದೆ. ಅಷ್ಟು ರಾತ್ರಿಯಲ್ಲಿ ಓಡಾಡಿದ ಆಟೋ ಜೊತೆಗೆ ಆಟೋ ಪಕ್ಕದಲ್ಲಿ ಮಹಿಳೆಯೊಬ್ಬಳು ಓಡಾಡುವ ದೃಶ್ಯ ಕೂಡಾ ಕಂಡು ಬಂದಿತ್ತು. ಈವೇಳೆ ಪೊಲೀಸರು ಆಟೋದ ಗುರುತು ಪತ್ತೆ ಮಾಡಲು ಮುಂದಾದರು.

ಕೊನೆಗೂ ಸಿಕ್ಕಿತು ಸೈಕೋ ಸಯ್ಯದ್ ಜಾಡು

ಮಧ್ಯರಾತ್ರಿ ಸುಮಾರಿಗೆ ಅಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿದ್ದ ಆಟೋದ ಗುರುತು ಪತ್ತೆ ಮಾಡಲು ಪೊಲೀಸರು ಮುಂದಾದರು. ಆಟೋ ಮೇಲೆ ಹಾಕಿದ್ದ ಕೆಲವೊಂದು ಸ್ಟಿಕ್ಕರ್​​ಗಳ ಗುರುತು ಆಧರಿಸಿ ಪೊಲೀಸರು ಆಟೋ ಹುಡುಕಾಟಕ್ಕೆ ಮುಂದಾದರು ಈ ವೇಳೆ ಆಟೋ ಪತ್ತೆಯಾಗಿತ್ತು. ಆ ಆಟೋ ಮುಳಬಾಗಿಲು ನಗರದ ಹೈದರಿನಗರದ ಸಯ್ಯದ್​ ಸುಹೇಲ್​ನದ್ದು ಎಂಬುದು ತಿಳಿದು ಬಂದಿತ್ತು. ಪೊಲೀಸರು ಸೈಯ್ಯದ್​ ಸುಹೇಲ್​ಗಾಗಿ ಹುಡುಕಾಟ ನಡೆಸಿದಾಗ, ಅಷ್ಟೊತ್ತಿಗಾಗಲೇ ಆತ ತಲೆಮರೆಸಿಕೊಂಡಿದ್ದ. ನಂತರ ಆತನಿಗಾಗಿ ಪೊಲೀಸರು ಬಲೆ ಬೀಸಿದ್ದರು. ಆತ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮುರುಗಮಲ್ಲ ಬಳಿ ತಲೆಮರೆಸಿಕೊಂಡಿರುವುದು ತಿಳಿದು ಬಂದಿತ್ತು. ಆಗ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಪೊಲೀಸರಿಗೆ ಸೈಯ್ಯದ್​ ಸುಹೇಲ್​ ಸಿಕ್ಕಿ ಬಿದ್ದಿದ್ದ.

ಕೊನೆಗೂ ಸೈಕೋನ ಹೆಡೆಮುರಿಕಟ್ಟಿದ ಪೊಲೀಸರು

ಮುರುಗಮಲ್ಲ ಬಳಿ ಅವಿತುಕುಳಿತಿದ್ದ ಸಯ್ಯದ್​ ಸುಹೇಲ್​​ನನ್ನು ಕರೆತಂದು ಪೊಲೀಸರು ಪೊಲೀಸ್ ಸ್ಟೈಲ್​ನಲ್ಲಿ ವಿಚಾರಣೆ ಶುರುಮಾಡಿದ್ದರು. ಆ ವೇಳೆ, ಪೊಲೀಸರಿಗೆ ಅವರು ಊಹಿಸದ ರೀತಿಯಲ್ಲಿ ಆಘಾತಕಾರಿ ಅಂಶವೊಂದನ್ನು ಆರೋಪಿ ಬಾಯಿ ಬಿಟ್ಟಿದ್ದ.

ಕೀಚಕ ಕೃತ್ಯದ ಬಗ್ಗೆ ಬಾಯ್ಬಿಟ್ಟ ಸೈಕೋ

ಸಯ್ಯದ್ ಸುಹೇಲ್ ಪೊಲೀಸರಿಗೆ ಹೇಳಿದ ಪ್ರಕಾರ, ಸೆಪ್ಟಂಬರ್​-24ರ ಮಧ್ಯರಾತ್ರಿ ಮುಳಬಾಗಿಲು ಎಪಿಎಂಸಿ ಬಳಿ ಕುಳಿತಿದ್ದ 50 ವರ್ಷದ ಮಾನಸಿಕ ಅಸ್ವಸ್ಥೆಯನ್ನು ತನ್ನೊಂದಿಗೆ ಆತ ಬರುವಂತೆ ಕರೆದಿದ್ದ. ಆದರೆ ಆಕೆ ಬರುವುದಿಲ್ಲ ಎಂದು ಹೇಳಿದ್ದಳು. ಈವೇಳೆ ಮನೆಗೆ ಬಿಡುವುದಾಗಿ ಹೇಳಿ ಆಕೆಯನ್ನು ಆಟೋ ಹತ್ತಿಸಿಕೊಂಡಿದ್ದ ಸಯ್ಯದ್​ ಸುಹೇಲ್​, ಮನೆ ಪಳ್ಳಿಗರಪಾಳ್ಯದ ಕಡೆ ಹೋಗದೆ ಹೆದ್ದಾರಿ ಕಡೆ ಆಟೋ ಓಡಿಸಿದ್ದ. ಯಾವಾಗ ಇವನು ಬೇರೆ ದಾರಿಯಲ್ಲಿ ಹೋಗುತ್ತಿದ್ದಾನೆ ಎಂಬುದು ಗಮನಕ್ಕೆ ಬಂತೋ ಆಗ ಮಹಿಳೆ ಸುಶೀಲಮ್ಮ ಆಟೋದಿಂದ ಆಚೆಗೆ ಜಿಗಿದಿದ್ದಾರೆ. ಈ ವೇಳೆ ಸಯ್ಯದ್​ ಸುಹೇಲ್​ ಆಟೋ ನಿಲ್ಲಿಸಿ ಬಂದಿದ್ದಲ್ಲದೆ ಮಹಿಳೆಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಈವೇಳೆ ಕಿವಿಯಲ್ಲಿ ಹಾಗೂ ಮೂಗಿನಲ್ಲಿ ತೀವ್ರ ರಕ್ತ ಸ್ರಾವವಾಗಿ ಮಹಿಳೆ ಅಲ್ಲೇ ಮೃತಪಟ್ಟಿದ್ದಾಳೆ.

ಶವವನ್ನೂ ಬಿಡದೆ ವಿಕೃತಿ

ನಂತರ ವಿಕೃತಿ ಮೆರೆಯಲು ಮುಂದಾದ ಸೈಕೋ ಸೈಯ್ಯದ್​ ಸುಹೇಲ್,​ ಮೃತ ಮಹಿಳೆಯ ಶವವನ್ನು ಆಟೋದಲ್ಲಿ ಹಾಕಿಕೊಂಡು ಹೋಗಿದ್ದಾನೆ. ಬಳಿಕ ಆಟೋದಲ್ಲೇ ಶವದೊಂದಿಗೆ ಸಂಬೋಗ ಮಾಡಿದ್ದಾನೆ. ನಂತರ ಮಹಿಳೆಯ ಶವವನ್ನು ಹೈದರ್​ ನಗರದ ಹೊರ ವಲಯದ ಖಾಲಿ ಜಾಗದಲ್ಲಿ ಬಿಸಾಡಿ ಬಂದಿದ್ದಾನೆ.

ತನಿಖೆ ಶುರುವಾಗುತ್ತಿದ್ದಂತೆಯೇ ಊರು ಬಿಟ್ಟಿದ್ದ ಕಾಮುಕ

ಕೃತ್ಯ ಎಸಗಿದ ಬಳಿಕ ತನಗೇನೂ ಗೊತ್ತಿಲ್ಲ ಎಂಬಂತೆ ತನ್ನ ಪಾಡಿಗೆ ತಾನಿದ್ದ. ಆದರೆ ಯಾವಾಗ ಪೊಲೀಸರಿಗೆ ಮಹಿಳೆಯ ಸಾವಿನ ಬಗ್ಗೆ ಅನುಮಾನ ಬಂದು ತನಿಖೆ ಕೈಗೊಂಡಿರುವ ವಿಷಯ ತಿಳಿದಿತ್ತೋ, ಸೈಯ್ಯದ್ ಸುಹೇಲ್ ತಲೆಮರೆಸಿಕೊಂಡು ಊರು ಬಿಟ್ಟಿದ್ದ. ಊರು ಬಿಟ್ಟು ಮುರುಗಮಲ್ಲದಲ್ಲಿ ತಲೆಮರೆಸಿ ಕೊಂಡಿದ್ದ. ಈವೇಳೆ ಆರೋಪಿಯ ಜಾಡು ಹಿಡಿದಿದ್ದ ಪೊಲೀಸರು ಆರೋಪಿಯನ್ನು ಕರೆತದಂದು ತಮ್ಮ ಲಾಠಿಗೆ ಕೆಲಸ ಕೊಡುತ್ತಿದ್ದಂತೆಯೇ ನಡೆದಿದ್ದ ಸಂಪೂರ್ಣ ವಿವಿರ ವನ್ನು ಬಾಯಿಬಿಟ್ಟಿದ್ದಾನೆ. ಅಲ್ಲದೆ ತನ್ನ ಕಾಮುಕ ಕ್ರೌರ್ಯವನ್ನು, ಸೈಕೋ ವರ್ತನೆಯನ್ನು ಬಿಚ್ಚಿಟ್ಟಿದ್ದಾನೆ.

ಇದನ್ನೂ ಓದಿ: ನಿನ್ನ ಪತ್ನಿಗೆ ಒಳ್ಳೆ ಬಟ್ಟೆ ತೊಡಲು ಹೇಳು ಇಲ್ಲ ಆ್ಯಸಿಡ್​ ಹಾಕುವೆ: ಪತ್ರಕರ್ತನ ಹೆಂಡತಿಗೆ ಬೆದರಿಕೆ

ಒಟ್ಟಾರೆ ತನ್ನ ತಾಯಿ ವಯಸ್ಸಿನ ಮಹಿಳೆಯನ್ನು ಕೊಂದು ಶವದೊಂದಿಗೆ ಸಂಬೋಗ ಮಾಡಿ ವಿಕೃತಿ ಮೆರೆದಿದ್ದಾನೆ ಸಯ್ಯದ್. ಈ ರೀತಿ ಸೈಕೋ ವರ್ತನೆಗೆ ಇಡೀ ಮುಳಬಾಗಿಲು ನಗರವೇ ಬೆಚ್ಚಿಬಿದ್ದಿದ್ದು, ಆರೋಪಿಗೆ ಕಾನೂನಿನಡಿಯಲ್ಲಿ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Fri, 11 October 24