ಕೋಲಾರ: ಜಿಲ್ಲೆಯ ಮಾಲೂರಿ(Malur)ನ ಮಾರುತಿ ಬಡಾವಣೆ ನಿವಾಸಿ ಉದ್ಯಮಿ ಬಾಬು ಎಂಬುವವರನ್ನ ನಿನ್ನೆ(ಜು.5) ಮಾಡಲಾಗಿತ್ತು. ಬಳಿಕ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿಡ್ನಾಪರ್ಸ್(Kidnapers) ಉದ್ಯಮಿಯನ್ನ ಆಂಧ್ರದ ಪಲಮನೇರು ಅರಣ್ಯಕ್ಕೆ ಕರೆದೊಯ್ದಿದ್ದರು. ಇದೀಗ ಬಾಬುರನ್ನ ಬಿಟ್ಟು ಕಳುಹಿಸಿದ್ದಾರೆ. ಆ ಮೂಲಕ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಈ ಕುರಿತು ಉದ್ಯಮಿ ‘ಮುಖಕ್ಕೆ ಮಾಸ್ಕ್ ಹಾಕಿದ್ದು, ಅವರೂ ಕೂಡ ಮಂಕಿ ಟೋಪಿಯನ್ನ ಹಾಕಿಕೊಂಡಿದ್ದರು. ಆದರೆ, ಮೂರು ಜನ ಇದ್ದರೆಂದು ಅಪಹರಣಕ್ಕೊಳಗಾದ ಉದ್ಯಮಿ ಹೇಳಿದ್ದಾರೆ.
ಇನ್ನು ಉದ್ಯಮಿಯನ್ನ ಕಿಡ್ನ್ಯಾಪ್ ಮಾಡಿ, ಬರೊಬ್ಬರಿ 5 ಕೋಟಿಗೆ ಭೇಡಿಕೆಯಿಟ್ಟಿದ್ದ ಕಿಡ್ನಾಪರ್ಸ್, ಅಪಹರಣ ವಿಚಾರ ಪೊಲೀಸರಿಗೆ ಗೊತ್ತಾದ ಹಿನ್ನೆಲೆ ಬಿಟ್ಟು ಕಳುಹಿಸಿದ್ದಾರೆ. ನಿನ್ನೆ(ಜು.6) ರಾತ್ರಿ ಸುರಕ್ಷಿತವಾಗಿ ಬಾಬು ಮನೆಗೆ ವಾಪಸ್ ಆಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂರು ತಂಡ ರಚನೆ ಮಾಡಿ, ಹುಡುಕಾಟ ನಡೆಸಿದ್ದಾರೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Yadagir News: ಹಾಡಹಾಗಲೇ ಇಬ್ಬರು ಗ್ರಾ.ಪಂ. ಮಹಿಳಾ ಸದಸ್ಯೆಯರ ಅಪಹರಣ: ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಆರೋಪ
ಇಟ್ಟಿಗೆ ಕಾರ್ಖಾನೆ, ರಿಯಲ್ ಎಸ್ಟೇಟ್, ಟಿಂಬರ್ ಕೆಲಸ ಹೀಗೆ ಹಲವು ಕೆಲಸಗಳನ್ನು ಮಾಡಿಕೊಂಡು ಒಂದಷ್ಟು ಆರ್ಥಿಕವಾಗಿ ಅನುಕೂಲಸ್ಥರಾಗಿ ಇರುವ ಬಾಬು ಅವರನ್ನು ನಿನ್ನೆ ಮಧ್ಯಾಹ್ನ ಇಟ್ಟಿಗೆ ಖರೀದಿ ಮಾಡುವ ನೆಪದಲ್ಲಿ ಬಂದ ಯಾರೋ ದುಷ್ಕರ್ಮಿಗಳು ಅವರನ್ನು ಮಾಲೂರು ತಾಲ್ಲೂಕಿನ ಹೆಡಗಿನಬೆಲೆ ಗ್ರಾಮದ ಇಟ್ಟಿಗೆ ಕಾರ್ಖಾನೆ ಬಳಿ ಕರೆದುಕೊಂಡು ಹೋಗಿ, ನಂತರ ಅಲ್ಲಿಂದ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಸಂಜೆಯಾದರೂ ಮನೆಗೆ ಊಟಕ್ಕೆ ಬರಲಿಲ್ಲವೆಂದು ಅವರ ಪತ್ನಿ ವರಲಕ್ಷ್ಮಿ ಹಾಗೂ ಮಗ ಮಂಜುನಾಥ್ ಪೋನ್ ಮಾಡಿದ್ರೆ, ಪೋನ್ ಸ್ವಿಚ್ ಆಫ್ ಬಂದಿತ್ತು.
ನಂತರ ಸಂಜೆ ವೇಳೆ ಬಾಬು ಅವರ ಪೋನ್ ನಂಬರ್ನಿಂದಲೇ ಯಾರೋ ದುಷ್ಕರ್ಮಿಗಳು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾಬು ಅವರನ್ನು ಕಿಡ್ನಾಪ್ ಮಾಡಿದ್ದೇವೆ. ನಿಮಗೆ ಅವರು ಬೇಕೆಂದರೆ 5 ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಗಾಬರಿಗೊಂಡ ಮನೆಯವರು ಬಾಬು ಅವರು ಎಲ್ಲಿದ್ದಾರೆ ಎಂದು ಕೇಳಿದಾಗ ಅವರಿಂದಲೇ ಪೋನ್ ನಲ್ಲಿ ಮಾತನಾಡಿಸಿದ್ದರು. ಇದರಿಂದ ದಿಕ್ಕು ಕಾಣದಾದ ಕುಟುಂಬಸ್ಥರು ಮಾಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಉದ್ಯಮಿ ವಾಪಾಸ್ಸಾಗಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ