ಅಂತರಗಂಗೆ ಬೆಟ್ಟದ ಬಂಡೆ ಮೇಲೆ ವಿವಾದಾತ್ಮಕ ಬರಹ ಆರೋಪ; ಓರ್ವ ಆರೋಪಿ ಅರೆಸ್ಟ್
ಕೋಲಾರದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಅಂತರಗಂಗೆ ಬೆಟ್ಟದ ಬಂಡೆ ಕಲ್ಲುಗಳ ಮೇಲೆ ಹಸಿರು ಬಣ್ಣ ಬಳಿದು ವಿವಾದಾತ್ಮಕ ಬರಹ ಬರೆಯಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬರಹದ ಮೇಲೆ ಬಿಳಿ ಬಣ್ಣ ಬಳಿದು ಅಳಿಸಿ ಹಾಕಿದ್ದರು. ಸದ್ಯ ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ, ಸೆ.20: ಅಂತರಗಂಗೆ ಬೆಟ್ಟದ(Antara Gange Hills) ಬಂಡೆ ಮೇಲೆ ವಿವಾದಾತ್ಮಕ ಬರಹ ಆರೋಪಕ್ಕೆ ಸಂಬಂಧಿಸಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು(Kolar Police Station) ಓರ್ವನನ್ನು ಬಂಧಿಸಿದ್ದಾರೆ. ಪಾಪರಾಜನಹಳ್ಳಿಯ ಅನ್ವರ್ ಅಲಿಯಾಸ್ ಪ್ಯಾರೇಜಾನ್ ಬಂಧಿತ ಆರೋಪಿ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗುಹೆ ನಿರ್ಮಾಣ ಮಾಡಿಕೊಂಡು ಬಂಡೆಗಳ ಮೇಲೆ ವಿವಾದಾತ್ಮಕ ಬರಹಗಳನ್ನು ಬರೆದಿದ್ದ ಹಿನ್ನಲೆ, ಅರಣ್ಯ ಇಲಾಖೆಯವರು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ಘಟನೆ?
ಕೋಲಾರದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಅಂತರಗಂಗೆ ಬೆಟ್ಟದ ಬಂಡೆ ಕಲ್ಲುಗಳ ಮೇಲೆ ಹಸಿರು ಬಣ್ಣ ಬಳಿದು ವಿವಾದಾತ್ಮಕ ಬರಹ ಬರೆಯಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬರಹದ ಮೇಲೆ ಬಿಳಿ ಬಣ್ಣ ಬಳಿದು ಅಳಿಸಿ ಹಾಕಿದ್ದರು. ಸದ್ಯ ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಂತರಗಂಗೆ ಬೆಟ್ಟದ ಅನೇಕ ಕಲ್ಲುಗಳ ಮೇಲೆ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಹಾಗೂ ಅಲ್ಲಾಹುಗೆ ಸಂಬಂಧಿಸಿ ಬರಹಗಳನ್ನು ಬರೆದಿದ್ದಾನೆ. ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಕೃತ್ಯಕ್ಕೆ ಕಾರಣವೇನು? ಅದರ ಹಿಂದಿನ ಉದ್ದೇಶದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೋಲಾರ: ಅಂತರಗಂಗೆ ಬೆಟ್ಟದ ಮೇಲೆ ಪಾಕ್ ಧ್ವಜದ ಮಾದರಿ ಹಸಿರು ಬಣ್ಣ ಬಳಿದು 786 ಬರೆದ ಕಿಡಿಕೇಡಿಗಳು
ಚಾಮರಾಜನಗರದಲ್ಲಿ ಮತ್ತೆ ಮುಂದುವರೆದ ಮಾನವ ಕಾಡು ಪ್ರಾಣಿ ಸಂಘರ್ಷ
ಇನ್ನು ಮತ್ತೊಂದೆಡೆ ಗಡಿ ನಾಡು ಚಾಮರಾಜನಗರದಲ್ಲಿ ಮತ್ತೆ ಮಾನವ ಕಾಡು ಪ್ರಾಣಿ ಸಂಘರ್ಷ ಮುಂದುವರೆದಿದೆ. ತಡರಾತ್ರಿ ಬಾಳೆ ತೋಟಕ್ಕೆ ಕಾಡಾನೆ ದಂಡು ನುಗ್ಗಿದ್ದು ಬಾಳೆ ತೋಟ ನಾಶವಾಗಿದೆ. 1 ಸಾವಿರಕ್ಕೂ ಅಧಿಕ ಏಲಕ್ಕಿ ಬಾಳೆ ಗಿಡ ನಾಶವಾಗಿದೆ. ಕಳೆದೊಂದು ವರ್ಷದಿಂದ ಕಾಡಾನೆ ದಂಡು ಬಿಟ್ಟು ಬಿಡದೆ ದಾಳಿ ಮಾಡುತ್ತಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಯರಗನಹಳ್ಳಿಯಲ್ಲಿ ಮಾದೇಶ್ ಎಂಬುವವರ ಬಾಳೆ ತೋಟಕ್ಕೆ ಕಾಡಾನೆ ದಂಡು ಲಗ್ಗೆ ಇಟ್ಟು ಅಪಾರ ಪ್ರಮಾಣದ ಹಾನಿ ಮಾಡಿದೆ. ಕಾಡಾನೆ ದಾಳಿಯಿಂದ ಕಟಾವಿಗೆ ಸಿದ್ದವಾಗಿದ್ದ ಬರೋಬ್ಬರಿ ಒಂದು ಸಾವಿರ ಬಾಳೆ ಗೊನೆ ನಾಶವಾಗಿದೆ. ಮೂರು ಲಕ್ಷ ಮೌಲ್ಯದ ಏಲಕ್ಕಿ ಬಾಳೆ ನಾಶದಿಂದ ರೈತ ಮಾದೇಶ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಶಾಶ್ವತ ಪರಿಹಾರಕ್ಕೆ ರೈತ ಮಾದೇಶ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:07 am, Wed, 20 September 23