ಮನೆಗೆ ಓಡಾಡಲು ರಸ್ತೆ ಮಾಡಿಕೊಡಿ ಎಂದು ಎಳೆ ಮಗುವಿನ ಜೊತೆ ಧರಣಿ ಕುಳಿತ ದಂಪತಿ

ಗ್ರಾಮದ ಕೆಲ ಬಲಾಢ್ಯರು, ದಂಪತಿ ಮನೆಗೆ ಹೋಗುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರಂತೆ. ಗ್ರಾಮ ಲೆಕ್ಕಾಧಿಕಾರಿ ಅರುಣ್, 2 ತಿಂಗಳಿನಿಂದ ತೆರವು ಮಾಡುತ್ತೇನೆ ಎಂದು ಕಾಲಹರಣ ಮಾಡುತ್ತಿದ್ದಾರೆ.

ಮನೆಗೆ ಓಡಾಡಲು ರಸ್ತೆ ಮಾಡಿಕೊಡಿ ಎಂದು ಎಳೆ ಮಗುವಿನ ಜೊತೆ ಧರಣಿ ಕುಳಿತ ದಂಪತಿ
ಕೋಲಾರ ತಾಲೂಕು ಕಚೇರಿಯ ಮುಂಭಾಗ ದಂಪತಿ ಧರಣಿ
Follow us
TV9 Web
| Updated By: ಆಯೇಷಾ ಬಾನು

Updated on:Jul 22, 2022 | 9:28 PM

ಕೋಲಾರ: ಮನೆಗೆ ರಸ್ತೆ ಇಲ್ಲ ಎಂದು ದಂಪತಿ ಪ್ರತಿಭಟನೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ದಂಪತಿ ಕೋಲಾರ ತಾಲೂಕು ಕಚೇರಿಯ ಮುಂಭಾಗ ಕುಳಿತು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದೂವರೆ ತಿಂಗಳ ಮಗು ಜೊತೆ ರಂಜಿತ್ ಹಾಗೂ ಲಾವಣ್ಯ ದಂಪತಿ ಧರಣಿಗೆ ಕುಳಿತಿದ್ದಾರೆ. ಗ್ರಾಮದ ಕೆಲ ಬಲಾಢ್ಯರು, ದಂಪತಿ ಮನೆಗೆ ಹೋಗುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರಂತೆ. ಗ್ರಾಮ ಲೆಕ್ಕಾಧಿಕಾರಿ ಅರುಣ್, 2 ತಿಂಗಳಿನಿಂದ ತೆರವು ಮಾಡುತ್ತೇನೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ ಕೋಲಾರ ತಾಲೂಕಿನ ಬೆಳಮಾರನಹಳ್ಳಿ ಗ್ರಾಮದ ದಂಪತಿ ತಮಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

ಬೆಳಮಾರನಹಳ್ಳಿ‌ ಗ್ರಾಮದ ದಂಪತಿಯಾದ ರಂಜಿತ್ ಲಾವಣ್ಯ ತಾಲೂಕು ಕಚೇರಿಯಲ್ಲಿ ಇಂದು ಎರಡೂವರೆ ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಲಾವಣ್ಯ ಪ್ರತಿಭಟನೆ ನಡೆಸಿದ್ದಾರೆ ಇನ್ನು ಗ್ರಾಮದಲ್ಲಿ ಕೆಲ ಬಲಾಡ್ಯರು ನನ್ನ ಮನೆಗೆ ಹೋಗುವ ರಸ್ತೆಯನ್ನು ಕಳೆದ ಒಂದು ವರ್ಷದಿಂದ ಒತ್ತುವರಿ ಮಾಡಿಕೊಂಡಿದ್ದು ಓಡಾಡಲು ರಸ್ತೆ ಇಲ್ಲದಂತಾಗಿತ್ತು ಈ ಸಂಬಂಧ ಪಂಚಾಯಿತಿಗೆ ಮನವಿಯನ್ನು ನೀಡಿ ಮನೆಗೆ ಹೋಗುವ ರಸ್ತೆಯನ್ನ ಒತ್ತುವರಿ ದಾರರಿಂದ ತೆರವು ಮಾಡಿಕೊಡಬೇಕು ಎಂದು ಕೋರಲಾಗಿತ್ತು. ಆದ್ರೆ ಗ್ರಾಮ ಲೆಕ್ಕಾಧಿಕಾರಿ ಒತ್ತುವರಿ ತೆರವು ಮಾಡುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದರು, ಇಂದು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಒತ್ತುವರಿ ದಾರರಿಂದ ರಸ್ತೆಯನ್ನು ತೆರವು ಗೊಳಿಸುತ್ತೇವೆ, ರಸ್ತೆ ತೆರವಿಗೆ ಜೆಸಿಬಿ ಯಂತ್ರಕ್ಕೆ ಹತ್ತುಸಾವಿರ ನೀಡಿದರೆ ಮಾತ್ರ ರಸ್ತೆ ತೆರವು ಗೊಳಿಸ್ತೇವೆ ಎಂದು ಹಣಕ್ಕೆ ಬೇಡಿಕೆಯನ್ನ ಇಟ್ಟಿದ್ದರು,

ಆದ್ರೆ ಆ ಹತ್ತು ಸಾವಿರ ಹಣವನ್ನ ಸಹ ನೀಡಿದ್ದರೂ ರಸ್ತೆ ತೆರವುಗೊಳಿಸಿರುವುದಿಲ್ಲ, ನಾವು ಇಂದು ಬೆಳಗ್ಗೆ ಇಂದ ತಾಲೂಕು ಕಚೇರಿಯಲ್ಲಿ ಎರಡು ತಿಂಗಳ ಹಸುಗೂಸಿನೊಂದಿಗೆ ಧರಣಿ ಕುಳಿತಿದ್ದರೂ ಯಾವೊಬ್ಬ ಅಧಿಕಾರಿ ಈ ಬಗ್ಗೆ ಸ್ಪಂದಿಸಿಲ್ಲ, ತಹಶೀಲ್ದಾರ್ ಅವರಿಗೂ ಸಹ ಸುಮಾರು ಬಾರಿ ದೂರವಾಣಿ ಮಾಡಿದ್ದರೂ ಸ್ವೀಕರಿಸಿಲ್ಲ, ನಮಗೆ ನಮ್ಮ ಮನೆಗೆ ಹೋಗಲು ದಾರಿ ಬೇಕು ಎಂದು ದಂಪತಿಗಳು ಪಟ್ಟು ಹಿಡಿದು ಧರಣಿ ನಡೆಸಿದ್ದಾರೆ. ಜೊತೆಗೆ ಗ್ರಾಮ ಪಂಚಾಯತಿ ಪಿಡಿಓ ಕೂಡಾ ಇಪ್ಪತ್ತು ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಅನ್ನೋದು ತಿಳಿದು‌ ಬಂದಿದೆ.

Published On - 8:46 pm, Fri, 22 July 22

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​