ಕೋಲಾರ: ವಾಮಾಚಾರಕ್ಕಾಗಿ ಸಮಾಧಿ ಅಗೆದು ಮಗುವಿನ ಶವ ಹೊರತೆಗೆದ ದುಷ್ಕರ್ಮಿಗಳು

ಸರಿಯಾಗಿ 20 ದಿನಗಳ ಹಿಂದೆ ಕೋಲಾರ ಪಟ್ಟಣದಲ್ಲಿ ಮೂರೂವರೆ ವರ್ಷದ ಮಗು ಆಯೇಷಾ ಅಂಜುಂ ಜೊತೆ ತಾಯಿ ಹಮೀದಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಬ್ಬಟ ಕ್ರಾಸ್​​​ನ ಖಬರಸ್ತಾನದಲ್ಲಿ ಹಮೀದಾ ಮತ್ತು ಆಯೇಷಾ ಅಂಜುಂ ಶವಸಂಸ್ಕಾರ ಮಾಡಲಾಗಿತ್ತು. ಆದರೆ ನ.19ರಂದು ಯಾರೋ ದುಷ್ಕರ್ಮಿಗಳು ಮಗು ಆಯೇಷಾ ಅಂಜುಂ ಶವ ಹೊರತೆಗೆದು ಅದರ ಬಟ್ಟೆ, ಕೂದಲು ತೆಗೆದುಕೊಂಡಿರುವ ಆರೋಪ ಕೇಳಿಬಂದಿದೆ. ಮುಂದೇನಾಯ್ತು ಇಲ್ಲಿದೆ ಓದಿ..

ಕೋಲಾರ: ವಾಮಾಚಾರಕ್ಕಾಗಿ ಸಮಾಧಿ ಅಗೆದು ಮಗುವಿನ ಶವ ಹೊರತೆಗೆದ ದುಷ್ಕರ್ಮಿಗಳು
ಪೊಲೀಸರಿಗೆ ದೂರು ನೀಡಿದ ಪೋಷಕರು
Edited By:

Updated on: Nov 27, 2023 | 7:32 PM

ಕೋಲಾರ ನ.27: ವಾಮಾಚಾರಕ್ಕಾಗಿ (Black Magic) ಸಮಾಧಿ ಅಗೆದು ಮಗುವಿನ ಶವ ಹೊರತೆಗೆದಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಹೆಬ್ಬಟಕ್ರಾಸ್​ನಲ್ಲಿ ನಡೆದಿದೆ. 20 ದಿನಗಳ ಹಿಂದೆ ಕೋಲಾರ ಪಟ್ಟಣದಲ್ಲಿ ಮೂರೂವರೆ ವರ್ಷದ ಮಗು ಆಯೇಷಾ ಅಂಜುಂ ಜೊತೆ ತಾಯಿ ಹಮೀದಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಬ್ಬಟ ಕ್ರಾಸ್​​​ನ ಖಬರಸ್ತಾನದಲ್ಲಿ ಹಮೀದಾ ಮತ್ತು ಆಯೇಷಾ ಅಂಜುಂ ಶವಸಂಸ್ಕಾರ ಮಾಡಲಾಗಿತ್ತು. ಆದರೆ ನ.19ರಂದು ಯಾರೋ ದುಷ್ಕರ್ಮಿಗಳು ಮಗು ಆಯೇಷಾ ಅಂಜುಂ ಶವ (Body) ಹೊರತೆಗೆದು ಅದರ ಬಟ್ಟೆ, ಕೂದಲು ತೆಗೆದುಕೊಂಡಿರುವ ಆರೋಪ ಕೇಳಿಬಂದಿದೆ. ಅಂತ್ಯಸಂಸ್ಕಾರ ವೇಳೆ ಮಗುವಿಗೆ ಹಾಕಿದ್ದ ಬಟ್ಟೆ ಸಮಾಧಿಯ ಪಕ್ಕದಲ್ಲಿ ಪತ್ತೆಯಾಗಿದೆ.

ವರದಕ್ಷಿಣೆ ಕಿರುಕುಳ ತಾಳಲಾರದೆ ಮಗು ಆಯೇಷಾ ಅಂಜುಂ ಜೊತೆ ತಾಯಿ ಹಮೀದಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ಶೋಯಬ್ ವಿರುದ್ಧ ಹಮೀದಾ ಪೋಷಕರು ಆರೋಪ ಮಾಡಿದ್ದರು. ಇದೀಗ ಪತಿ ಶೋಯಬ್ ಸೂಚನೆಯಂತೆ ಶ್ರೀರಾಮ ಮತ್ತು ನಾರಾಯಣಸ್ವಾಮಿ ಎಂಬುವರು ಮೃತ ಆಯೇಷಾ ಅಂಜುಂ ಶವ ಹೊರತೆಗೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ನ.19ರ ಬೆಳಗ್ಗೆ ಇಬ್ಬರು ಸ್ಮಶಾನಕ್ಕೆ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಮ್ಮ ಧಾರ್ಮಿಕ ಭಾವನಕ್ಕೆ ಧಕ್ಕೆಯುಂಟಾಗಿದೆ ಎಂದು ಹಮೀದಾ ಪೋಷಕರು ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ