ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು. ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ […]

ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!
Follow us
ಸಾಧು ಶ್ರೀನಾಥ್​
|

Updated on:Feb 03, 2020 | 5:30 PM

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು.

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ ಇಳಿದು ಈಜಾಡಬೇಕು, ಆಟವಾಡಬೇಕು ಅನ್ಸುತ್ತೆ.

ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿರುವ ಯುವಕರು: ಆದ್ರೆ ಈ ಸುಂದರ ಪ್ರದೇಶ ಸಾವಿನ ಕೂಪ ಅನ್ನೋದು ಅಷ್ಟೇ ಸತ್ಯ. ಇಲ್ಲಿ ಈಜಾಡಲು ಬಂದ ಹತ್ತಾರು ಯುವಕರುಗಳು ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಪ್ರದೇಶವನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿರ್ಭಂದಿತ ಪ್ರದೇಶವಾಗಿ ಮಾಡಿದೆ. ಹೀಗಿದ್ರು ಕದ್ದು ಮುಚ್ಚಿ ಇಲ್ಲಿಗೆ ಬರುವ ಯುವಕ ಯುವತಿಯರು ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇನ್ನು ವೀಕೆಂಡ್ ಬಂದ್ರೆ ಸಾಕು ಇಲ್ಲಿಗೆ ಯುವಕ, ಯುವತಿಯರು ಬಂದು ಸೇರ್ತಾರೆ. ಪೊಲೀಸ್ ಇಲಾಖೆಯ ನಿರ್ಭಂದವನ್ನು ಲೆಕ್ಕಿಸದೆ ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಅಕ್ಕಪಕ್ಕದ ಜಮೀನುಗಳ ಮಾಲೀಕರು ಈ ಸ್ಥಳಕ್ಕೆ ಹೋಗದಂತೆ ತಿಳಿಸಿದ್ರು, ಅವರ ಮಾತಿಗೆ ಬೆಲೆ ಕೊಡದೆ ಇಲ್ಲಿ ಬಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಈ ನೀರಿನ ತಳದಲ್ಲಿ ಚೂಪಾದ ಕಲ್ಲು ಇದ್ದು, ಮೇಲಿಂದ ಡೈಹೊಡೆದಾಗ ಚುಚ್ಚಿ ಯುವಕರು ಸಾವನ್ನಪ್ಪುತ್ತಿದ್ದಾರೆ ಅನ್ನೋದು ಸ್ಥಳೀಯರ ಮಾತು.

ಒಟ್ಟಾರೆ ಸುಂದರ ಪ್ರಕೃತಿಯ ಮಧ್ಯೆ ಇರುವ ಸುಂದರ ನೀರಿನ ಹಳ್ಳ, ಎಷ್ಟು ಸುಂದರವೋ ಅಷ್ಟೇ ಮಾರಕ. ಇಲ್ಲಿಯ ತನ ಸುಮಾರು 20 ಕ್ಕೂ ಹೆಚ್ಚು ಜನ ಇಲ್ಲಿ ಪ್ರಾಣ ಕಳೆದುಕೊಂಡಿದ್ದು, ಇನ್ನಾದ್ರು ಪೊಲೀಸ್​ ಇಲಾಖೆ ಮತ್ತು ಜಿಲ್ಲಾಡಳಿತ ಈ ಸರಣಿ ಸಾವಿಗೆ ಬ್ರೇಕ್​ ಹಾಕಬೇಕಿದೆ.

Published On - 5:26 pm, Mon, 3 February 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!