ಜಿಲ್ಲಾಸ್ಪತ್ರೆ ಉದ್ಘಾಟನೆ ವಿಳಂಬ: ಸಚಿವರ ಮುಖವಾಡ ಧರಿಸಿ ರೈತರ ಪ್ರೊಟೆಸ್ಟ್
ಕೋಲಾರ: ಕೋಟ್ಯಂತರ ರೂಪಾಯಿ ವೆಚ್ಚದ ಕೋಲಾರ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಸರ್ಕಾರ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಎದುರು ರೈತ ಸಂಘದ ಸದಸ್ಯರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಉದ್ಘಾಟನೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಎಸ್ಎನ್ಅರ್ ಆಸ್ಪತ್ರೆ ಎದುರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಆಸ್ಪತ್ರೆ ಉದ್ಘಾಟನೆ ಮಾಡದೆ ಡಿಸಿಎಂ ಪಟ್ಟಕ್ಕಾಗಿ ಬಡಿದಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಎಣ್ಣೆ ಕುಡಿಯಿರಿ ಯಮಲೋಕಕ್ಕೆ ನಡೆಯಿರಿ ಎಂದು ಅಬಕಾರಿ ಸಚಿವ ನಾಗೇಶ್ ಅವರ ವ್ಯಂಗ್ಯ ಚಿತ್ರ ಮಾಡಿ ವಿನೂತನವಾಗಿ […]
ಕೋಲಾರ: ಕೋಟ್ಯಂತರ ರೂಪಾಯಿ ವೆಚ್ಚದ ಕೋಲಾರ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಸರ್ಕಾರ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಎದುರು ರೈತ ಸಂಘದ ಸದಸ್ಯರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಉದ್ಘಾಟನೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಎಸ್ಎನ್ಅರ್ ಆಸ್ಪತ್ರೆ ಎದುರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಆಸ್ಪತ್ರೆ ಉದ್ಘಾಟನೆ ಮಾಡದೆ ಡಿಸಿಎಂ ಪಟ್ಟಕ್ಕಾಗಿ ಬಡಿದಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಎಣ್ಣೆ ಕುಡಿಯಿರಿ ಯಮಲೋಕಕ್ಕೆ ನಡೆಯಿರಿ ಎಂದು ಅಬಕಾರಿ ಸಚಿವ ನಾಗೇಶ್ ಅವರ ವ್ಯಂಗ್ಯ ಚಿತ್ರ ಮಾಡಿ ವಿನೂತನವಾಗಿ ಪ್ರೊಟೆಸ್ಟ್ ಮಾಡಿದ್ದಾರೆ. ಜಿಲ್ಲೆಯ ಬಿಜೆಪಿ ಸಂಸದ ಮುನಿಸ್ವಾಮಿ, ಶಾಸಕರಾದ ರಮೇಶ್ ಕುಮಾರ್, ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಮತ್ತು ರೂಪಾ ಅವರ ಅವರ ಮುಖವಾಡ ಧರಿಸಿ ಅಣಕು ಪ್ರದರ್ಶನ ಹಾಗೂ ವ್ಯಂಗ್ಯ ರೀತಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.