ಕೋಲಾರ: ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಶವ ಪತ್ತೆ, ಸಾವಿನ ಸುತ್ತ ಅನುಮಾನಗಳ ಹುತ್ತ

ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಶವ ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಎಂ.ವಿ.ನಗರದಲ್ಲಿ ತಂದೆ-ಮಗನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಕೋಲಾರ: ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಶವ ಪತ್ತೆ, ಸಾವಿನ ಸುತ್ತ ಅನುಮಾನಗಳ ಹುತ್ತ
ಸಾಂದರ್ಭಿಕ ಚಿತ್ರ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ರಮೇಶ್ ಬಿ. ಜವಳಗೇರಾ

Updated on:Sep 14, 2023 | 1:12 PM

ಕೋಲಾರ, (ಸೆಪ್ಟೆಂಬರ್ 14): ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಎಂ.ವಿ.ನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಶವ(Father And Son dead Body) ಪತ್ತೆಯಾಗಿದೆ. ತಂದೆ ವಸಂತರಾಜುಲು (84) ಹಾಗೂ ಮಗ ಸೂರ್ಯ ಪ್ರಕಾಶ್ (44) ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ವಯಸ್ಸಾಗಿದ್ದ ತಂದೆಯನ್ನ ಪೋಷಣೆ ಮಾಡುತ್ತಿದ್ದ ಮಗ ಸೂರ್ಯ ಪ್ರಕಾಶ್, ಕಳೆದ ಮೂರು ದಿನಗಳ ಹಿಂದೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮಗ ಮೃತಪಟ್ಟ ನೋವಿನಲ್ಲಿ ತಂದೆಯೂ ಸಹ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಾಂತಕುಮಾರ್, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನಿಡಿ ಪರಿಶೀಲನೆ ನಡೆಸಿತು. ಆದ್ರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬಾಗಲಗುಂಟೆ ಪೈಪ್​​ಲೈನ್​ ಪಾರ್ಕ್​ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

ಬೆಂಗಳೂರು: ಬಾಗಲಗುಂಟೆ ಪೈಪ್​​ಲೈನ್​ ಪಾರ್ಕ್​ನ ಕಲ್ಲಿನ ಬೆಂಚ್ ಮೇಲೆ 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ(Dead Body Found). ಈ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ(Bagalagunte Police Station) ಪ್ರಕರಣ ದಾಖಲಾಗಿದ್ದು ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪಾರ್ಕ್​ನ ಬೆಂಚ್ ಕಲ್ಲಿನ ಮೇಲೆ ಮಲಗಿದ್ದಲ್ಲಿಯೇ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಗೆಳತಿಯಿಂದ ಅತ್ಯಾಚಾರ ಆರೋಪ, ಮನನೊಂದು ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಹಾವೇರಿಯಲ್ಲಿ ಮುಂದುವರೆದ ರೈತರ ಆತ್ಮಹತ್ಯೆ

ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ರಾಣೆಬೆನ್ನೂರು ತಾಲೂಕಿನ ಹುಲಿಹಳ್ಳಿಯಲ್ಲಿ ಸಾಲಬಾಧೆ ತಾಳಲಾರದೆ ರೈತ ರಾಮಪ್ಪದುರ್ಗಪ್ಪ ಹುಚ್ಚಣ್ಣವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ರಾಮಪ್ಪ ದುರ್ಗಪ್ಪ ಅವರು ಕೆನರಾ ಬ್ಯಾಂಕ್​ನಲ್ಲಿ 2 ಲಕ್ಷ ರೂ. ಸಾಲ ಮಾಡಿದ್ದರು ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಕೂಡ ಒಣಗಿತ್ತು. ಸಾಲದ ಹೊರೆ ಜೊತೆಗೆ ಬರಗಾಲದ ಛಾಯೆಗೆ ಕಂಗಾಲಾಗಿದ್ದ ರಾಮದುರ್ಗಪ್ಪ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:07 pm, Thu, 14 September 23