ಕೋಲಾರ: ವಿಷ ಸೇವಿಸಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಮಗು ಅಪಹರಣ ಪ್ರಕರಣದಲ್ಲಿ ಪೊಲೀಸರಿಗೆ ಹೆದರಿದ ಕುಟುಂಬ ಈ ರೀತಿ ಮಾಡಿದೆ ಎಂದು ತಿಳಿದುಬಂದಿದೆ. ಪೊಲೀಸರ ವಿಚಾರಣೆಯಿಂದ ಭಯಗೊಂಡ ಒಂದೆ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಐದು ಜನರ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮಗಳು ಗಂಗೋತ್ರಿ 17, ತಾತ ಮುನಿಯಪ್ಪ 70, ಅಜ್ಜಿ ನಾರಾಯಣಮ್ಮ 65, ತಾಯಿ ಪುಷ್ಪ 35, ತಂದೆ ಬಾಬು 45, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವಣಗೆರೆ: ಕೆರೆಯಲ್ಲಿ ಈಜಲು ಹೋಗಿ ಸಹೋದರರಿಬ್ಬರು ನೀರುಪಾಲು
ಕೆರೆಯಲ್ಲಿ ಈಜಲು ಹೋಗಿ ಸಹೋದರರಿಬ್ಬರು ನೀರುಪಾಲು ಆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಕೆರೆಯಲ್ಲಿ ನಡೆದಿದೆ. ಮಂಜುನಾಥ್ (15) ಹಾಗೂ ಸೋದರ ನವೀನ್ (13) ಎಂಬವರು ನೀರುಪಾಲಾಗಿದ್ದಾರೆ. ಹತ್ತರಿಂದ ಹದಿನೈದು ಬಾಲಕರು ಕೆರೆಗೆ ಈಜಲು ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಹೋದರರ ಶವ ಹೊರತೆಗೆದಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವ ಹುಚ್ಚು ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಅಪ್ಪು ಅಭಿಮಾನಿಗಳನ್ನು ಮತ್ತೊಮ್ಮೆ ಕೋರಿದ ಶಿವಣ್ಣ
ಇದನ್ನೂ ಓದಿ: 2020ನೇ ಇಸವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 10ಕ್ಕೆ 6 ಜನರ ಆದಾಯ 1 ಲಕ್ಷ ರೂ.ಗಿಂತ ಕಮ್ಮಿ
Published On - 5:41 pm, Sun, 7 November 21