ಶ್ರೀರಾಮ ಶೋಭಾಯಾತ್ರೆ ವೇಳೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ

ಲೋಕಕಲ್ಯಾಣಾರ್ಥವಾಗಿ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಬೃಹತ್​ ಹಿಂದು ಶೋಭಾಯಾತ್ರೆ ಹಾಗೂ ಶ್ರೀರಾಮ ಪಟ್ಟಾಭಿಷೇಕ ಶ್ರೀರಾಮ ಕಲ್ಯಾಣೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀರಾಮ ಶೋಭಾಯಾತ್ರೆ ವೇಳೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ
ಶೋಭಾಯಾತ್ರೆ
Updated By: ಗಂಗಾಧರ​ ಬ. ಸಾಬೋಜಿ

Updated on: Apr 08, 2022 | 9:52 PM

ಕೋಲಾರ: ಶ್ರೀರಾಮ ಶೋಭಾಯಾತ್ರೆ (Shobharata) ವೇಳೆ ಜಹಾಂಗೀರ್​ ಮೊಹಲ್ಲಾ ಬಳಿ ದುಷ್ಕರ್ಮಿಗಳಿಂದ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ‌ ಕಲ್ಲು ತೂರಾಟ ಮಾಡಿರುವಂತಹ ಘಟನೆ ನಡೆದಿದೆ. ಮುಳಬಾಗಿಲು ಪಟ್ಟಣದಿಂದ ಆವನಿ ಕಡೆಗೆ ಶೋಭಾಯಾತ್ರೆ ಹೊರಟಿದ್ದು, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಬೈಕ್ ಗೆ ಬೆಂಕಿ ಹಚ್ಚಿ ಒಂದು ಕೋಮಿನ ಜನ ಆಕ್ರೋಶ ಹೊರ ಹಾಕಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿಪ್ರಹಾರ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಕೋಲಾರ ಜಿಲ್ಲಾ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಲೋಕಕಲ್ಯಾಣಾರ್ಥವಾಗಿ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಬೃಹತ್​ ಹಿಂದು ಶೋಭಾಯಾತ್ರೆ ಹಾಗೂ ಶ್ರೀರಾಮ ಪಟ್ಟಾಭಿಷೇಕ ಶ್ರೀರಾಮ ಕಲ್ಯಾಣೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಿಂದೂ ಶೋಭಾಯಾತ್ರೆ ಹಾಗೂ ಬೃಹತ್​ ಶ್ರೀರಾಮ ಮೂರ್ತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾವಹಿಸಿದ್ದರು.

ಇದನ್ನೂ ಓದಿ:

ಶರದ್ ಪವಾರ್ ಮನೆ ಹೊರಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ನೌಕರರ ಪ್ರತಿಭಟನೆ; ಚಪ್ಪಲಿ ಎಸೆದು ಆಕ್ರೋಶ

ಅರೆಬರೆ ಬಟ್ಟೆ ತೊಟ್ಟು ವಿಡಿಯೋ ಪೋಸ್ಟ್​ ಮಾಡಿದ ಉರ್ಫಿ; ನೆಟ್ಟಿಗರಿಂದ ಟೀಕೆ