ಕೋಲಾರದ ಕಾಲೇಜುಗಳಿಗೆ ಮತ್ತೆ ಸಿಗಲಿದೆ ಜೀವಕಳೆ, ಕಾಲೇಜುಗಳ ಅಭಿವೃದ್ಧಿಗೆ ₹18.7 ಕೋಟಿ ಬಿಡುಗಡೆ

ಜಿಲ್ಲೆಯ ಕಾಲೇಜುಗಳಿಗೆ ಮತ್ತೆ ಜೀವಕಳೆ ಬರಲಿದ್ದು, ಕಾಲೇಜುಗಳ ಅಭಿವೃದ್ಧಿಗೆ ಒಟ್ಟು 18.7 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಖುದ್ದಾಗಿ ಕಾಲೇಜುಗಳ ಪರಿಸ್ಥಿತಿ ಅವಲೋಕಿಸಿರೋ ಸಚಿವ ಮುನಿರತ್ನ, ಸರ್ಕಾರದಿಂದ ಅನುದಾನ ತರುವಲ್ಲಿ ಸಫಲರಾಗಿದ್ದಾರೆ.

ಕೋಲಾರದ ಕಾಲೇಜುಗಳಿಗೆ ಮತ್ತೆ ಸಿಗಲಿದೆ ಜೀವಕಳೆ, ಕಾಲೇಜುಗಳ ಅಭಿವೃದ್ಧಿಗೆ ₹18.7 ಕೋಟಿ ಬಿಡುಗಡೆ
ಕಾಲೇಜುಗಳಿಗೆ ಭೇಟಿ ನೀಡಿ ಕಾಲೇಜುಗಳ ಪರಿಸ್ಥಿತಿ ಅವಲೋಕಿಸಿರೋ ಸಚಿವ ಮುನಿರತ್ನ
Follow us
TV9 Web
| Updated By: ಆಯೇಷಾ ಬಾನು

Updated on: Feb 17, 2022 | 7:57 AM

ಕೋಲಾರ: ಕೋಲಾರದ ಕಾಲೇಜು(Kolar Colleges) ವಿದ್ಯಾರ್ಥಿಗಳ ಪಾಡು ಹೇಳತೀರದ್ದು. ಕಾಲೇಜು ಕಟ್ಟಡ ಭೂತ ಬಂಗಲೆಯಂತಾಗಿದೆ. ಮೇಲ್ಛಾವಣಿ ಬಿರುಕು ಬಿಟ್ಟಿದೆ. ಶೌಚಾಲಯಗಳು ಗಬ್ಬು ನಾರ್ತಿವೆ. ಆದ್ರೆ ಇವಕ್ಕೆಲ್ಲ ಶೀಘ್ರವೇ ಮುಕ್ತಿ ಸಿಗೋ ಕಾಲ ಬಂದಿದೆ. ಎಷ್ಟೋ ವರ್ಷಗಳ ಬಳಿಕ ಜಿಲ್ಲೆಯ ಕಾಲೇಜುಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ.

ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದರೂ ಕೋಲಾರ ಹಲವು ಕಾರಣಗಳಿಂದ ನಿರ್ಲ್ಯಕ್ಷಕ್ಕೆ ಒಳಗಾಗಿರುವ ಜಿಲ್ಲೆ. ಇಲ್ಲಿನ ಕಾಲೇಜುಗಳಂತೂ ಕನಿಷ್ಠ ಸುಣ್ಣ-ಬಣ್ಣ ಕಂಡು ಅದೆಷ್ಟೋ ವರ್ಷಗಳು ಕಳೆದುಹೋಗಿವೆ. ಕಟ್ಟಡಗಳ ನಿರ್ವಹಣೆಯೇ ಇಲ್ಲದ ಕಾರಣ ಪಾಳುಬಿದ್ದ ಬಂಗಲೆಗಳಂತೆ ಕಾಲೇಜುಗಳು ಭಾಸವಾಗ್ತಿವೆ. ಈ ನಡುವೆ ಕೋಲಾರದ ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ. ಜಿಲ್ಲೆಯ ಕಾಲೇಜುಗಳಿಗೆ ಮತ್ತೆ ಜೀವಕಳೆ ಬರಲಿದ್ದು, ಕಾಲೇಜುಗಳ ಅಭಿವೃದ್ಧಿಗೆ ಒಟ್ಟು 18.7 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಖುದ್ದಾಗಿ ಕಾಲೇಜುಗಳ ಪರಿಸ್ಥಿತಿ ಅವಲೋಕಿಸಿರೋ ಸಚಿವ ಮುನಿರತ್ನ, ಸರ್ಕಾರದಿಂದ ಅನುದಾನ ತರುವಲ್ಲಿ ಸಫಲರಾಗಿದ್ದಾರೆ.

ಇನ್ನು ಕಾಲೇಜುಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿರೋದು ವಿದ್ಯಾರ್ಥಿಗಳ ಜೊತೆ ಉಪನ್ಯಾಸಕ ವರ್ಗಕ್ಕೂ ಸಂತಸ ತಂದಿದೆ. ಹಣ ಬಿಡುಗಡೆಯಾಗಿದ್ದೇ ತಡ ಕಾಲೇಜಿನಲ್ಲಿ ಆಗಬೇಕಾದ ಅತ್ಯಗತ್ಯ ಕೆಲಸಗಳ ಪಟ್ಟಿ ಸಿದ್ಧವಾಗ್ತಿದೆ. ಕೋಲಾರ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 2.5 ಕೋಟಿ, ಪ್ರಥಮ ದರ್ಜೆ ಕಾಲೇಜಿಗೆ 1.67 ಕೋಟಿ, ಶ್ರೀನಿವಾಸಪುರ ಪ್ರಥಮ ದರ್ಜೆ ಕಾಲೇಜಿಗೆ 1.78 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಹಾಗೆಯೇ ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿಗೆ 2.77 ಕೋಟಿ, ಮಾಲೂರು ಪ್ರಥಮ ದರ್ಜೆ ಕಾಲೇಜಿಗೆ 2.88ಕೋಟಿ, ಬಂಗಾರಪೇಟೆ ಪ್ರಥಮ ದರ್ಜೆ ಕಾಲೇಜಿಗೆ 2.76 ಕೋಟಿ ರೂಪಾಯಿಯನ್ನ ಸರ್ಕಾರ ಮಂಜೂರು ಮಾಡಿದೆ. ಮುಳಬಾಗಿಲು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ 2.71ಕೋಟಿ, ಮಾಲೂರು ಪದವಿ ಪೂರ್ವ ಕಾಲೇಜಿಗೂ 1 ಕೋಟಿ ರೂಪಾಯಿ ರಿಲೀಸ್ ಆಗಿದೆ.

ಒಟ್ನನಲ್ಲಿ ಕೋಲಾರ ಜಿಲ್ಲೆಯ ಕಾಲೇಜುಗಳ ಅಭಿವೃದ್ಧಿಗೆ ಕೊನೆಗೂ ಸರ್ಕಾರ ಮುಂದಾಗಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಕೊಠಡಿಗಳು ದೊರೆಯಬಹುದೆಂಬ ನಿರೀಕ್ಷೆ ಇದ್ದು, ಅನುದಾನ ಯಾವರೀತಿ ಸದುಪಯೋಗವಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಮದುವೆ ಮನೆಗೆ ಹೋಗಿದ್ದ 13 ಮಹಿಳೆಯರು ಬಾವಿಗೆ ಬಿದ್ದು ಸಾವು; ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ