ಕೋಲಾರ ಹಾಲು ಒಕ್ಕೂಟ ನೇಮಕಾತಿಯಲ್ಲಿ ಹಗರಣ ಆರೋಪ: ಅಂತಿಮ ಪಟ್ಟಿ ಬಿಡುಗಡೆ ಮಾಡದ ಆಡಳಿತ ಮಂಡಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 22, 2023 | 5:28 PM

ಕೋಲಾರದ ಹಾಲು ಒಕ್ಕೂಟದ ನೇಮಕಾತಿಯಲ್ಲೂ ಅಕ್ರಮದ ಆರೋಪ ಕೇಳಿ ಬಂದಿದ್ದು, ಒಕ್ಕೂಟದ ಆಡಳಿತ ಮಂಡಳಿಯ ನಿಗೂಡ ನಡೆ ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಸದ್ಯ ಆಡಳಿತ ಮಂಡಳಿ ನೇಮಕಾತಿ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ 75 ಜನರಿಗೆ ಆದೇಶ ಪತ್ರ ನೀಡಿ ತರಬೇತಿಗೆ ಕಳಿಸಲಾಗಿದೆ ಎಂದು ಕೋಚಿಮುಲ್ ಅಧ್ಯಕ್ಷ ‌ನಂಜೇಗೌಡ ತಿಳಿಸಿದ್ದಾರೆ. 

ಕೋಲಾರ ಹಾಲು ಒಕ್ಕೂಟ ನೇಮಕಾತಿಯಲ್ಲಿ ಹಗರಣ ಆರೋಪ: ಅಂತಿಮ ಪಟ್ಟಿ ಬಿಡುಗಡೆ ಮಾಡದ ಆಡಳಿತ ಮಂಡಳಿ
ಕೋಲಾರ ಹಾಲು ಒಕ್ಕೂಟ, ಕೋಚಿಮುಲ್ ಅಧ್ಯಕ್ಷ ‌ನಂಜೇಗೌಡ
Follow us on

ಕೋಲಾರ, ಡಿಸೆಂಬರ್​ 22: ಕೋಲಾರ ಹಾಲು ಒಕ್ಕೂಟದ ನೇಮಕಾತಿ (Kolar Milk Union recruitment) ಯಲ್ಲಿ ಹಗರಣ ಆರೋಪ ಹಿನ್ನೆಲೆ ಆಡಳಿತ ಮಂಡಳಿ ನೇಮಕಾತಿ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ನೋಟಿಸ್​ ಬೋರ್ಡ್​ನಲ್ಲೂ ಹಾಕದೆ ಮುಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚಿಮುಲ್ ಅಧ್ಯಕ್ಷ ‌ನಂಜೇಗೌಡ, ನೇಮಕಾತಿ ಪಟ್ಟಿ ಯಾರಿಗೂ ನೀಡದೆ ಓದಿ ಹೇಳಿದ್ದಾರೆ. 75 ಜನರಿಗೆ ಆದೇಶ ಪತ್ರ ನೀಡಿ ತರಬೇತಿಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.

ನೇಮಕಾತಿ ಪಟ್ಟಿ ಹೊರಗೆ ಬಂದರೆ ಕೋರ್ಟ್​ ಮೂಲಕ ಅಭ್ಯರ್ಥಿಗಳು ತಡೆಯಾಜ್ಞೆ ತರುವ ಆತಂಕ ಶುರುವಾಗಿದೆ. ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದ ಆರೋಪಕ್ಕೆ ಕೋಲಾರ ಹಾಲು ಒಕ್ಕೂಟ ಆಡಳಿತ ಮಂಡಳಿ ನಡೆ ಪುಷ್ಠಿ ನೀಡುವಂತ್ತಿದೆ.

ಜಿಲ್ಲೆಯ ಕೋಚಿಮುಲ್‌ನಲ್ಲಿ ನೇಮಕಾತಿ ಹಗರಣದ ಆರೋಪ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇತ್ತೀಚೆಗೆ ದಿಢೀರನೆ ನೇಮಕಾತಿ ಪ್ರಕ್ರಿಯೆ ಮುಗಿಸುತ್ತಿರುವ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಹಲವರಿಗೆ ನೇಮಕಾತಿ ಆದೇಶ ನೀಡಿ ತರಬೇತಿಗೆ ಕಳುಹಿಸಿದೆ. ನೇಮಕಾತಿ ಮಾಡಿಕೊಂಡು, ಆದೇಶ ಪ್ರತಿ ನೀಡುವ ಕೆಲಸ ಆರಂಭವಾಗಿದ್ದು, ಅದರಂತೆ ಕೋಚಿಮುಲ್‌ನ ಬಳಿ ಜಮಾಯಿಸಿದ್ದ ಕೆಲ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ತರಬೇತಿಗೆ ಕಳುಹಿಸಿಕೊಡಲಾಗಿತ್ತು.

ಇದನ್ನೂ ಓದಿ: ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ದಂಧೆ; ವಿದ್ಯಾರ್ಹತೆಗಿಂತ ಶಿಫಾರಸ್ಸು ಪತ್ರವೇ ಮುಖ್ಯ

ನೇಮಕಾತಿ ಹಗರಣದ ಬಗ್ಗೆ ಅಧ್ಯಕ್ಷ ನಂಜೇಗೌಡ ಸ್ಪಷ್ಟನೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಶಿಫಾರಸ್ಸು ಪತ್ರ ಕುರಿತು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೆಸರು ಉಲ್ಲೇಖವಾಗಿದ್ದ ಪ್ರತಿ ನಕಲು ಎಂದು ಆರೋಪಿಸಿದ್ದರು.

ಶಿಫಾರಸ್ಸು ಪತ್ರದಲ್ಲಿ ಕಾಂಗ್ರೆಸ್ ನಾಯಕರ, ಅಧ್ಯಕ್ಷರ, ಕೋಚಿಮುಲ್ ಎಂಡಿ ಹಾಗೂ ನಿರ್ದೇಶಕರ ಹೆಸರು ಉಲ್ಲೇಖವಾಗಿತ್ತು, ಅಲ್ಲದೆ ಅಭ್ಯರ್ಥಿಗಳಿಂದ ತಲಾ 40-60 ಲಕ್ಷ ರೂ. ಲಂಚ ಪಡೆದು ನೇಮಕಾತಿ ಮಾಡುತ್ತಿರುವ ಬಗ್ಗೆ ಆರೋಪ ಮಾಡಲಾಗಿತ್ತು. ಅದರಂತೆ ಇಂದು ದಿಢೀರನೆ ನೇಮಕಾತಿ ಪ್ರಕ್ರಿಯೆ ಮುಗಿಸಿರುವ ಆಡಳಿತ ಮಂಡಳಿ ಸಂಜೇ ವೇಳೆಗೆ ಅಂತಿಮ ಪಟ್ಟಿ ರಿಲೀಸ್ ಮಾಡಲು ಸಜ್ಜಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ನೇಮಕಾತಿ ಹಗರಣ, 81 ಹುದ್ದೆಗಳಿಗೆ 44 ಕೋಟಿ ಸಂಗ್ರಹವಾಗಿರುವ ಆರೋಪ

ಈಗಾಗಲೆ 74 ಜನರಿಗೆ ನೇಮಕಾತಿ ಆದೇಶ ಪ್ರತಿ ನೀಡಿ ಕಳುಹಿಸಿರುವ ಆಡಳಿತ ಮಂಡಳಿ ಸದ್ದಿಲ್ಲದೆ ತಾನು ಅಂದುಕೊಂಡಿದ್ದನ್ನ ಸಾಧಿಸಿದೆ, ಅಲ್ಲದೆ ಅಂತಿಮ ಪಟ್ಟಿ ಇಂದು ಬಿಡುಗಡೆ ಮಾಡುತ್ತೇವೆ. ಆದರೆ ಯಾವುದೆ ಅಕ್ರಮ ನೇಮಕಾತಿ ನಡೆದಿಲ್ಲ, ಪಾರದರ್ಶಕವಾಗಿದೆ ಅನ್ನೋ ಎನ್ನುತ್ತಿರುವ ಅಧ್ಯಕ್ಷರು ಮಾತ್ರ ಮುಚ್ಚು ಮರೆ ಮಾತಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.