ಶಾಲೆ ರಜೆ ಸಲುವಾಗಿ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ; ಮೂವರು ಅಸ್ವಸ್ಥ

| Updated By: ವಿವೇಕ ಬಿರಾದಾರ

Updated on: Nov 28, 2023 | 11:41 AM

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಡೊಡ್ಡಪೊನ್ನಾಂಡಹಳ್ಳಿ ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಓರ್ವ ವಿದ್ಯಾರ್ಥಿ ನೀರಿಗೆ ಇಲಿ ಪಾಷಾಣ ಹಾಕಿದ್ದಾನೆ. ಅಷ್ಟಕ್ಕೂ ವಿದ್ಯಾರ್ಥಿ ಇಲಿ ಪಾಷಾಣ ಹಾಕ್ಕಿದ್ದು ಏಕೆ? ಇಲ್ಲಿದೆ ಓದಿ..

ಶಾಲೆ ರಜೆ ಸಲುವಾಗಿ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ; ಮೂವರು ಅಸ್ವಸ್ಥ
ಅಸ್ವಸ್ಥಗೊಂಡ ವಿದ್ಯಾರ್ಥಿ, ಮುರಾರ್ಜಿ ದೇಸಾಯಿ ವಸತಿ ಶಾಲೆ
Follow us on

ಕೋಲಾರ ನ.28: ಬಂಗಾರಪೇಟೆ (Bangarpet) ತಾಲ್ಲೂಕು ಡೊಡ್ಡಪೊನ್ನಾಂಡಹಳ್ಳಿ ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ (Morarji desai School) ಮೂವರು ಮಕ್ಕಳು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿದ್ದ ಮಕ್ಕಳನ್ನು ಕೋಲಾರದ (Kolar) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏನಾದರು ತೊಂದರೆಯಾದರೆ ರಜೆ ಕೊಡುತ್ತಾರೆ. ನಂತರ ನಾನು ಊರಿಗೆ ಹೋಗಿ ತಂದೆ-ತಾಯಿಯನ್ನು ನೋಡಬಹದು ಎಂದು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಲೆಕ್ಕಾಚಾರ ಹಾಕಿದ್ದಾನೆ. ಹೀಗಾಗಿ ಈತ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ್ದಾನೆ. ವಿದ್ಯಾರ್ಥಿ ಮಾನಸೀಕ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂಬ ವಿಷಯ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಇನ್ನು ವಿದ್ಯಾರ್ಥಿಯ ತಂದೆ ಮತ್ತು ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಮಗ ಚೆನ್ನಾಗಿ ಓದಲಿ ಎಂದು ಹಾಸ್ಟೆಲ್​ಗೆ ದಾಖಲು ಮಾಡಿದ್ದರು. ಆದರೆ ಮಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ದುರದೃಷ್ಟಕರ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ