Tomato Price: ಉತ್ತಮ ಇಳುವರಿಯನ್ನು ಕಂಡರೂ ಸಿಗದ ಸೂಕ್ತ ಬೆಲೆ; ಸಂಕಷ್ಟಕ್ಕೆ ಸಿಲುಕಿದ ಟೊಮೆಟೊ ಬೆಳೆಗಾರರು

| Updated By: Digi Tech Desk

Updated on: Dec 01, 2022 | 2:12 PM

Kolar news: ಬೆಲೆ ಕುಸಿತದಿಂದ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಟೊಮೆಟೊ ಉತ್ತಮ ಇಳುವರಿಯನ್ನು ಕಂಡರೂ ಬೆಲೆ ಕುಸಿತದಿಂದ ರೈತರು ಹೆಚ್ಚು ಹೈರಾಣಾಗಿದ್ದಾರೆ.

Tomato Price: ಉತ್ತಮ ಇಳುವರಿಯನ್ನು ಕಂಡರೂ ಸಿಗದ ಸೂಕ್ತ ಬೆಲೆ; ಸಂಕಷ್ಟಕ್ಕೆ ಸಿಲುಕಿದ ಟೊಮೆಟೊ ಬೆಳೆಗಾರರು
ಉತ್ತಮ ಇಳುವರಿಯನ್ನು ಕಂಡರೂ ಸಿಗದ ಸೂಕ್ತ ಬೆಲೆ; ಸಂಕಷ್ಟಕ್ಕೆ ಸಿಲುಕಿದ ಟೊಮೆಟೊ ಬೆಳೆಗಾರರು
Follow us on

ಕೋಲಾರ: ಉತ್ತಮ ಇಳುವರಿ ಕಂಡರೂ ಅಕಾಲಿಕ ಮತ್ತು ದೀರ್ಘಕಾಲಿಕ ಮಳೆಯು ಟೊಮೆಟೊ ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಎಪಿಎಂಸಿಗಳಿಗೆ ಟೆಮೆಟೊ ಬೆಳೆಗಳು ಹೆಚ್ಚು ಬರುತ್ತಿವೆ. ಆದರೆ ಅಕಾಲಿಕ ಮಳೆಯಿಂದಾಗಿ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿವೆ ಮತ್ತು ರೋಗಗಳು ಬಂದಿವೆ. ಈ ಕಾರಣಕ್ಕೆ ಟೊಮೆಟೊ ಬೆಲೆ (Tomato Price)ಯಲ್ಲಿ ಕುಸಿತಕಂಡಿದೆ. ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ (Tomato Market)ಯಾಗಿರುವ ಜಿಲ್ಲೆಯ ಎಪಿಎಂಸಿ (Kolar AMPC)ಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ಪ್ರತಿ 15 ಕೆಜಿ ಉತ್ಪನ್ನಕ್ಕೆ 200 ರೂ.ಗಿಂತ ಕಡಿಮೆ ಬೆಲೆಗೆ ತೆಗೆದುಕೊಕೊಳ್ಳಲಾಗುತ್ತಿದೆ. ಇದೇ ಸಮಯದಲ್ಲಿ ಕೊಳೆ ರೋಗ (ಅಂಗಮಾರಿ) ಇರುವ ಪ್ರತಿ 15 ಕೆಜಿ ಟೊಮೆಟೊ ಬಾಕ್ಸ್‌ಗೆ 50 ರೂ.ನಂತೆ ಖರೀದಿಸಲಾಗುತ್ತಿದೆ.

ಎಪಿಎಂಸಿಗೆ ಟೊಮೆಟೊ ಆಮದಿನಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಅಕಾಲಿಕ ಮತ್ತು ದೀರ್ಘಕಾಲದ ಮಳೆಯಿಂದಾಗಿ ಹೆಚ್ಚಿನ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿವೆ. ಇದರಿಂದ ಬೆಲೆ ಕುಸಿತವಾಗಿದೆ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರು ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್​ಗೆ ತಿಳಿಸಿದ್ದಾರೆ. ಎಪಿಎಂಸಿಗೆ ಟೊಮೆಟೊ ಅತಿಯಾಗಿ ಬರುತ್ತಿದ್ದರೂ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಉತ್ಪನ್ನವನ್ನು ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. 3,500ಕ್ಕೂ ಹೆಚ್ಚು ರೈತರು ಜಿಲ್ಲೆಯಲ್ಲಿ 2,500ಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ಟೊಮೆಟೊ ಬೆಳೆದಿದ್ದಾರೆ. ಬುಧವಾರ ಕೋಲಾರ ಎಪಿಎಂಸಿ ಒಂದರಲ್ಲೇ 9,300 ಕ್ವಿಂಟಾಲ್ ಟೊಮೆಟೊ ದಾಸ್ತಾನಾಗಿದೆ.

ಇದನ್ನೂ ಓದಿ: ಕಾರವಾರದ ರಸ್ತೆಯೊಂದರಲ್ಲಿ ತೆವಳುತ್ತಿದ್ದ ಹೆಬ್ಬಾವು ದಾರಿಹೋಕರನ್ನು ಗಾಬರಿಗೊಳಿಸಿತು!

ಕಳೆದ ವರ್ಷ ಜಿಲ್ಲೆಯ ಹಲವು ಬೆಳೆಗಾರರು ಟೊಮೆಟೊದಿಂದ ಸಂಪತ್ತು ಗಳಿಸಿದ್ದರು. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಟೊಮೆಟೊ ಬೆಳೆಯಲು ಮುಂದಾದರು. ಅದರಂತೆ ಉತ್ತಮ ಇಳುವರಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದರೆ ದೀರ್ಘಕಾಲದ ಮಾನ್ಸೂನ್ ಟೊಮೆಟೊ ಗುಣಮಟ್ಟದ ಮೇಲೆ ಪರಿಣಾಮ ಬೀರಿತು. ಬೆಳೆಗಾರರು ಪ್ರತಿ ಹೆಕ್ಟೇರ್‌ಗೆ 2.5 ಲಕ್ಷ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಟೊಮೆಟೊಗಳ ಬೆಲೆ ಕುಸಿತದಿಂದಾಗಿ ರೈತರು ಭಾರೀ ನಷ್ಟವನ್ನು ಅನುಭವಿಸುತ್ತಿದ್ದಾರೆ.

“ನಾವು ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಸೀಸನ್‌ಗೆ ತಕ್ಕಂತೆ ಟೊಮೆಟೊಗಳನ್ನು ಬೆಳೆಯುತ್ತೇವೆ. ಇದೇ ಅವಧಿಯಲ್ಲಿ ಕಳೆದ ವರ್ಷ 15 ಕೆಜಿ ಬಾಕ್ಸ್‌ಗೆ 2,000 ರೂ.ಗೆ ಮಾರಾಟವಾಯಿತು. ಇದೇ ಬೆಲೆ ಪುನರಾವರ್ತನೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದ ಹೆಚ್ಚಿನ ರೈತರು, ಮತ್ತೆ ಕೃಷಿ ಮಾಡಿದ್ದಾರೆ. ಆದರೆ ಅಕಾಲಿಕ ಮಳೆಯು ರೈತರ ನಿರೀಕ್ಷೆಯನ್ನು ಹುಸಿ ಮಾಡಿತು, ಸೂಕ್ತ ಬೆಲೆ ಸಿಗದೆ ರೈತರು ಕೈಸುಟ್ಟುಕೊಂಡರು ಎಂದು ತೊಟ್ಲಿ ಗ್ರಾಮದ ಟೊಮೆಟೊ ಬೆಳೆಗಾರ ರಮೇಶ್ ಹೇಳಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Thu, 1 December 22