ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ದಂಧೆ; ವಿದ್ಯಾರ್ಹತೆಗಿಂತ ಶಿಫಾರಸ್ಸು ಪತ್ರವೇ ಮುಖ್ಯ

| Updated By: Rakesh Nayak Manchi

Updated on: Dec 19, 2023 | 11:08 AM

ಪಿಎಸ್​ಐ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಕೆಲವೊಂದು ಇಲಾಖೆಗಳಲ್ಲಿನ ನೇಮಕಾತಿಯಲ್ಲಿ ನಡೆದ ಅಕ್ರಮಗಳು ಬಯಲಿಗೆ ಬಂದಂತೆ, ಇದೀಗ ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ನಡೆದ ದಂಧೆ ವಿಚಾರವೂ ಬಟಾಬಯಲಾಗಿದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗುತ್ತಿದ್ದು, ನೇಮಕಾತಿಯಲ್ಲಿ ಲಕ್ಷ ಲಕ್ಷ ಡೀಲ್ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ದಂಧೆ; ವಿದ್ಯಾರ್ಹತೆಗಿಂತ ಶಿಫಾರಸ್ಸು ಪತ್ರವೇ ಮುಖ್ಯ
ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ದಂಧೆ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ವೈರಲ್
Follow us on

ಕೋಲಾರ, ಡಿ.19: ಪಿಎಸ್​ಐ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಕೆಲವೊಂದು ಇಲಾಖೆಗಳಲ್ಲಿನ ನೇಮಕಾತಿಯಲ್ಲಿ (Kolar Milk Union recruitment) ನಡೆದ ಅಕ್ರಮಗಳು ಬಯಲಿಗೆ ಬಂದಂತೆ, ಇದೀಗ ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ನಡೆದ ದಂಧೆ ವಿಚಾರವೂ ಬಟಾಬಯಲಾಗಿದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗುತ್ತಿದ್ದು, ನೇಮಕಾತಿಯಲ್ಲಿ ಲಕ್ಷ ಲಕ್ಷ ಡೀಲ್ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ವಿದ್ಯಾರ್ಹತೆಗಿಂತ ಶಿಫಾರಸ್ಸು ಪತ್ರವೇ ಮುಖ್ಯವಾಗಿದೆ. ಶಿಫಾರಸ್ಸು ಇದ್ದವರಿಗೆ ಮಾತ್ರ ಒಕ್ಕೂಟದಲ್ಲಿ ಕೆಲಸ ನೀಡಲಾಗುತ್ತದೆ. ಸೆಪ್ಟೆಂಬರ್​ನಲ್ಲಿ ಕೆರೆಯಲಾಗಿದ್ದ 81 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಲಿಖಿತ ಪರೀಕ್ಷೆ ನಡೆದಿದ್ದು, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕೂಡ ಸಿದ್ಧವಾಗಿದೆ.

ಇದನ್ನೂ ಓದಿ: Hirings: ಅಕ್ಟೋಬರ್-ನವೆಂಬರ್ ತಿಂಗಳ ಜಾಬ್ ಡಾಟಾ; ಸಾಫ್ಟ್​ವೇರ್ ಅಲ್ಲದ ಕ್ಷೇತ್ರಗಳಲ್ಲಿ ಹೆಚ್ಚಿನ ನೇಮಕಾತಿ: ನೌಕ್ರಿ ಡಾಟ್ ಕಾಮ್ ವರದಿ

ಸದ್ಯ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿದ್ದು, ಅಭ್ಯರ್ಥಿಗಳ ಹೆಸರ ಮುಂದೆ ಶಿಫಾರಸ್ಸು ಮಾಡಿದರ ಹೆಸರು ಹಾಕಲಾಗಿದೆ. ಒಕ್ಕೂಟದ ನಿರ್ದೇಶಕರು ಸೇರಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಶಾಸಕರುಗಳ ಹೆಸರುಗಳು ಪತ್ತೆಯಾಗಿವೆ. ಇದರ ಪ್ರತಿ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಕೋಲಾರ ಹಾಲು ಒಕ್ಕೂಟದಲ್ಲಿನ 81 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇನ್ನೆರಡು ದಿನದಲ್ಲಿ ನೇಮಕಾತಿ ಪ್ರಕ್ರಿಯೆ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ನೇಮಕಾತಿ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಡುತ್ತಿದೆ.

ಬರೊಬ್ಬರಿ 40 ಕೋಟಿ ರೂ. ಸಂಗ್ರಹ

ಡಾ.ಚೇತನ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ನಾಗೇಶ್ ಅವರಿಗೆ ಹಣ ವಸೂಲಿ ಮಾಡುವುದೇ ಕಾಯಕವಾಗಿದೆ. 74 ಹುದ್ದೆಗಳಿಂದ ಬರೊಬ್ಬರಿ 40 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವ್ಯವಹಾರಗಳಿಂದ ಕೆಲವೇ ಕೆಲವು ಶಾಸಕರು ದೂರ ಉಳಿದಿದ್ದಾರೆ ಎಂದು ಟಿವಿ9ಗೆ ಒಕ್ಕೂಟದ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 am, Tue, 19 December 23