ಕೋಲಾರ ಆಗಸ್ಟ್ 11: ಈ ಮೊದಲು ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಹಳೆ ಚಾಳಿಯನ್ನ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಮುಂದುವರೆಸಿದೆಯಾ ಎನ್ನುವ ಅನುಮಾನ ಈಗ ಶುರುವಾಗಿದೆ. ಪರೀಕ್ಷೆ ಬರೆದಿದ್ದ ಬಹುತೇಕ ವಿದ್ಯಾರ್ಥಿನಿಯರ (Students) ಫಲಿತಾಂಶ ಅನುತ್ತೀರ್ಣ ಹಾಗೂ ಕಡಿಮೆ ಅಂಕಗಳು ಬಂದಿರುವ ಹಿನ್ನೆಲೆಯಲ್ಲಿ, ನಗರದ ಹೊರ ವಲಯದ ಟಮಕ ಬಳಿ ಇರುವ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಆಡಳಿತ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಕೋಲಾರ ನಗರದ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ವಿಶ್ವ ವಿದ್ಯಾಲಯ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಪರೀಕ್ಷೆ ಬರೆದಿದ್ದರೂ ಸಹ ಫಲಿತಾಂಶದಲ್ಲಿ ದೋಷಗಳು ಕಂಡು ಬಂದಿವೆ. ಬಹುತೇಕ ವಿದ್ಯಾರ್ಥಿನಿಯರ ಫಲಿತಾಂಶ ಸೊನ್ನೆ ಎಂದು ಬಂದಿದ್ದರೆ, ಮತ್ತೆ ಕೆಲವು ವಿದ್ಯಾರ್ಥಿನಿಯರ ಫಲಿತಾಂಶ 1,2, 3 ಎಂದು ಮಾರ್ಕ್ಸ್ ನೀಡಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಹೊಸ ರೂಪದೊಂದಿಗೆ ಕಾರ್ಯಾಚರಣೆಗೆ ಇಳಿದ ಹಳೆ ಕೆಎಸ್ಆರ್ಟಿಸಿ ಬಸ್ಗಳು
ವಿದ್ಯಾವಿದ್ಯಾಲಯದ ಪರೀಕ್ಷಾ ವಿಭಾಗದ ಅಧಿಕಾರಿಗಳ ಎಡವಟ್ಟಿನಿಂದ ಆಗಿರುವ ಅನಾಹುತ ಇದಾಗಿದ್ದು, ಕೂಡಲೇ ಸರಿಪಡಿಸುವಂತೆ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ. ಬಹುತೇಕ ಬಿಕಾಂ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹೀಗೆ ಲೋಪದೋಷವಾಗಿದ್ದು, ವಿಶ್ವವಿದ್ಯಾಲಯದ ಫಲಿತಾಂಶ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಅಲ್ಲದೇ ಇವ್ಯಾಲುವೇಷನ್ ವೇಳೆ ನಡೆದಿರುವ ಎಡವಟ್ಟನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಕುಲಪತಿಗಳ ಅನುಮತಿ ಪಡೆದ ಆಗಿರುವ ತಪ್ಪಿನ ಬಗ್ಗೆ ಕೂಲಂಕುಶ ತನಿಖೆ ನಡೆಸಲು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಮುಂದಾಗಿರುವುದಾಗಿ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಉತ್ತರ ಕನ್ನಡ: ರಾಜ್ಯ ಹೆದ್ದಾರಿಯ ಅಸಮರ್ಪಕ ರಸ್ತೆಯಿಂದಾಗಿ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡದೇ ಕೆಎಸ್ಆರ್ಟಿಸಿ ಬಸ್ ತೆರಳುತ್ತಿರುವ ಹಿನ್ನಲೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಹಾವೇರಿ ಹೆದ್ದಾರಿ ತಡೆದು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿತ; ಎಷ್ಟು ಗೊತ್ತಾ?
ಶಿರಸಿಯ ಬಿಸಲಕೊಪ್ಪ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಳಲಗಾಂವ್ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮತ್ತು ರೈತ ಸಂಘದ ಸದಸ್ಯರು ಶೀಘ್ರದಲ್ಲಿ ರಸ್ತೆ ಸರಿಪಡಿಸುವ ಜೊತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮಳಲಗಾಂವ್ನಲ್ಲಿ ಬಸ್ ಅನ್ನು ನಿಲ್ಲಿಸಬೇಕು. ಹೆದ್ದಾರಿಯಲ್ಲಿ ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕು ಎಂದು ಆಗ್ರಹಿಸಿದ್ದರು.
ಪ್ರತಿಭಟನೆ ಹಿನ್ನಲೆಯಲ್ಲಿ ಶಿರಸಿ-ಹಾವೇರಿ ಹೆದ್ದಾರಿ ಮಾರ್ಗದಲ್ಲಿ ಕೆಲವು ಸಮಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ಪ್ರತಿಭಟನಾಗಾರರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.