ಕೋಲಾರ: ಇಲ್ಲಿ ನಡೆದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತ ಪುಷ್ಪಾ ಎಂಬವರು ಬರೆದಿರುವ ಡೆತ್ ನೋಟ್ ಟಿವಿ9ಗೆ ಲಭ್ಯವಾಗಿದೆ. ಅದರಲ್ಲಿ ಪೊಲೀಸರ ಬೆದರಿಕೆ, ಕಿರುಕುಳದಿಂದ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸರು ಹಾಗೂ ಗೀತಾ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಗೀತಾ ವಂಚನೆ ಬಗ್ಗೆ ಪುಷ್ಪಾ ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ. ಪುಷ್ಪಾ, ಗೀತಾ ಮಗು ಅಪಹರಣ ಪ್ರಕರಣದ ಆರೋಪಿಗಳಾಗಿದ್ದಾರೆ.
ಗೀತಾ ಎಂಬಾಕೆ ಪುಷ್ಪಾ ಅವರ ಮಗುವನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗೂ ಮಗುವನ್ನು ಮಾರಾಟ ಮಾಡಿರುವ ವಿಷಯ ಬಹಿರಂಗಪಡಿಸಿದರೆ ಮಗು ಹತ್ಯೆ ಬೆದರಿಕೆ ಒಡ್ಡಲಾಗಿದೆ. ಪುಷ್ಪಾ ಮಗಳನ್ನು ಕೊಲೆ ಮಾಡುವುದಾಗಿ ಗೀತಾ ಹೆದರಿಸಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಠಾಣೆಗೆ ಕರೆಸಿ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗೋತ್ರಿ (17), ನಾರಾಯಣಮ್ಮ (60), ಬಾಬು (45), ಮುನಿಯಪ್ಪ (65) ಹಾಗೂ ಪುಷ್ಪಾ(33) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಗಳು. ಮೃತರು ಕೋಲಾರದ ಕಾರಂಜಿಕಟ್ಟೆ ಬಡಾವಣೆ ನಿವಾಸಿಗಳಾಗಿದ್ದಾರೆ. ಮೊನ್ನೆಯಷ್ಟೇ ಈ ಐವರು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು. ಮಗು ಅಪಹರಣ ಕೇಸ್ ಸಂಬಂಧ ಹೆದರಿ ವಿಷ ಸೇವಿಸಿದ್ದರು. ಚಿಕಿತ್ಸೆ ಫಲಿಸದೆ ಒಬ್ಬರ ನಂತರ ಒಬ್ಬರಂತೆ ಐವರು ಸಾವನ್ನಪ್ಪಿದ್ದಾರೆ. ಗಲ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮಗು ಅಪರಹಣ ಪ್ರಕರಣ; ಕೋಲಾರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಸಾವು
‘ಇದನ್ನೂ ಓದಿ: ಕೋಲಾರ: ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ಇಬ್ಬರ ಸ್ಥಿತಿ ಚಿಂತಾಜನಕ
Published On - 3:56 pm, Tue, 9 November 21