AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಅಪರಹಣ ಪ್ರಕರಣ; ಕೋಲಾರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಸಾವು

ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಕೋಲಾರದ ಆರ್.ಎಲ್.ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗೆ ಸಾವನ್ನಪ್ಪಿದ್ದಾರೆ.

ಮಗು ಅಪರಹಣ ಪ್ರಕರಣ; ಕೋಲಾರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಸಾವು
ಸಾಂಕೇತಿಕ ಚಿತ್ರ
TV9 Web
| Updated By: sandhya thejappa|

Updated on: Nov 09, 2021 | 11:16 AM

Share

ಕೋಲಾರ: ಮಗು ಅಪಹರಣ ಪ್ರಕರಣದಲ್ಲಿ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರಿಂದ ಮರ್ಯಾದೆಗಂಜಿದ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕೋಲಾರದ ಕಾರಂಜಿಕಟ್ಟೆಯಲ್ಲಿ ನಡೆದಿದೆ. ಮಗು ಅಪರಹಣ ಪ್ರಕರಣ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಮರ್ಯಾದಗಂಜಿದ್ದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ ಮಾಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಟ್ಟಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಕೋಲಾರದ ಆರ್.ಎಲ್.ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗೆ ಸಾವನ್ನಪ್ಪಿದ್ದಾರೆ. ಮುನಿಯಪ್ಪ(70), ಬಾಬು (45), ಗಂಗೋತ್ರಿ(17) ನಾರಾಯಣಮ್ಮ (65) ಹಾಗೂ ಪುಷ್ಪ (33) ಮೃತರು ಎಂದು ತಿಳಿದುಬಂದಿದೆ. ಎಲ್ಲರೂ ವಿಷ ಸೇವಿಸುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್ ನೋಟ್ನಲ್ಲಿ ತಮ್ಮದಲ್ಲದ ತಪ್ಪಿಗೆ ನಮ್ಮನ್ನು ಪೊಲೀಸ್ ಠಾಣೆಗೆ ಕರೆಸಿದ್ದರು. ಇದರಿಂದ ಅವಮಾನಿತರಾಗಿ ಮನನೊಂದು ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತ ಉಲ್ಲೇಖಿಸಿದ್ದಾರೆ.

ಏನದು ಮಗು ಅಪಹರಣ ಪ್ರಕರಣ? ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಸತ್ಯ ಹಾಗೂ ಸುಮಿತ್ರ ಎಂಬುವರು ಪ್ರೀತಿಸಿ ಮನೆಯವರಿಗೆ ತಿಳಿಸದೆ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಮನೆಯವರಿಗೆ ವಿಷಯ ತಿಳಿದರೆ ಹೇಗೋ ಎನ್ನುವ ಭಯದಲ್ಲಿ ಮಗುವನ್ನು ತಮ್ಮ ಪರಿಚಯಸ್ಥರಾದ ಕಾರಂಜಿಕಟ್ಟೆ ನಿವಾಸಿ ಗೀತಾ ಎನ್ನುವವರಿಗೆ ಅಕ್ಟೋಬರ್18 ರಂದು 9 ದಿನದ ಮಗುವನ್ನು ಕೊಟ್ಟಿದ್ದರು. ಈ ವೇಳೆ ಗೀತಾರ ಜೊತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪುಷ್ಪಾ ಎಂಬುವವರು ಹೋಗಿದ್ದರು. ಈ ಕಾರಣಕ್ಕೆ ಮಗು ಅಪಹರಣ ಪ್ರಕರಣದ ದೂರಿನಲ್ಲಿ ಪುಷ್ಪಾರ ಹೆಸರು ದಾಖಲಾಗಿತ್ತು.

ಅಲ್ಲದೇ ಕೋಲಾರಮ್ಮ ದೇವಾಲಯದ ಬಳಿ ಕುಳಿತು ಮಾತನಾಡಿ ಮಗುವನ್ನು ತೆಗೆದುಕೊಂಡು ಹೋಗಿರುವ ದೃಶ್ಯ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಪುಷ್ಪಾ ಇದ್ದರು. ಈ ಕಾರಣಕ್ಕೆ ಪೊಲೀಸರು ಪುಷ್ಪಾರನ್ನು ಕೋಲಾರದ ಮಹಿಳಾ ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಮಗುವನ್ನು ತಂದು ಕೊಡುವಂತೆ ತಾಕೀತು ಮಾಡಿದ್ದರು. ಇದಕ್ಕೆ ಅಂಜಿದ ಇಡೀ ಕುಟುಂಬಸ್ಥರು ಆತ್ಮಹತ್ಯೆಗೆ ನಿರ್ಧರಿಸಿದ್ದರು.

ಇದನ್ನೂ ಓದಿ

ಕ್ಯಾನ್ಸರ್​ ಪೀಡಿತರಿಗಾಗಿ ಕೂದಲು ದಾನ; ಮಾಧುರಿ ದೀಕ್ಷಿತ್​ ಪುತ್ರ ರಿಯಾನ್​ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿಕೊಂಡ ಪುರಸಭೆ ಅಧಿಕಾರಿಗಳು, ಸ್ಥಳೀಯರ ಆಕ್ರೋಶ