ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಐವರ ಪೈಕಿ ನಾಲ್ವರು ಸಾವು
ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕ್ರಮ ಜರುಗಿಸಬಹುದು ಎಂದು ಹೆದರಿದ್ದರು.
ಕೋಲಾರ: ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಐವರ ಪೈಕಿ ನಾಲ್ವರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಸೋಮವಾರ ನಡೆದಿದೆ. ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕ್ರಮ ಜರುಗಿಸಬಹುದು ಎಂದು ಹೆದರಿದ್ದ ಕಾರಂಜಿಕಟ್ಟೆ ಬಡಾವಣೆ ನಿವಾಸಿಗಳಾದ ಗಂಗೋತ್ರಿ (17), ಬಾಬು (45), ನಾರಾಯಣಮ್ಮ (60), ಮುನಿಯಪ್ಪ (65) ಮೃತಪಟ್ಟಿದ್ದಾರೆ. ಒಂದೇ ಕುಟುಂಬದ ಐವರು ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದರು.
ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆದರಿ ಇವರೆಲ್ಲರೂ ವಿಷ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿರುವ ಪುಷ್ಪಾ ಎನ್ನುವವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಲ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಟ್ರ್ಯಾಕ್ಟರ್ ಪಲ್ಟಿ: ರೈತ ಸ್ಥಳದಲ್ಲೇ ಸಾವು ಹಾವೇರಿ: ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಿರೇಕೆರೂರು ತಾಲ್ಲೂಕು ಡಮ್ಮಳ್ಳಿಯಲ್ಲಿ ನಡೆದಿದೆ. ಮೃತರನ್ನು ಮಹೇಶ್ ಬಣಕಾರ (26) ಎಂದು ಗುರುತಿಸಲಾಗಿದೆ. ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪತ್ನಿಯ ಕೊಲೆ: ಪತಿ ಬಂಧನ ಅಪ್ರಾಪ್ತ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ತಾಲ್ಲೂಕಿನ ಆವಲಯ್ಯನಪಾಳ್ಯ ಗ್ರಾಮದಲ್ಲಿ ನ.5ರಂದು ಶೋಭಾ (16) ಕೊಲೆಯಾಗಿದ್ದರು. ಕತ್ತು ಹಿಸುಕಿ ಪತ್ನಿ ಹತ್ಯೆಗೈದು ಪರಾರಿಯಾಗಿದ್ದ ಈಕೆಯ ಪತಿ ಲಕ್ಷ್ಮೀಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವರ್ಷದ ಹಿಂದೆ ಇವರ ಮದುವೆಯಾಗಿತ್ತು. ಪ್ರಕರಣ ಸಂಬಂಧ ಶೋಭಾ ಅವರ ತಂದೆ, ತಾಯಿ, ಪತಿ, ಮಾವನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ ಪ್ರಕರಣ; 6 ಆರೋಪಿಗಳು ಅರೆಸ್ಟ್ ಇದನ್ನೂ ಓದಿ: ಅಪ್ಪು ಕುಟುಂಬ ಅತೀವ ವೇದನೆ ಮತ್ತು ಸಂಕಟದಲ್ಲಿದೆ, ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡು ಸಂಕಟ ಹೆಚ್ಚಿಸಬೇಡಿ: ತಾರಾ ಅನುರಾಧ